For Quick Alerts
  ALLOW NOTIFICATIONS  
  For Daily Alerts

  ಜಗ್ಗೇಶ್ ಪುತ್ರನ ಕಾರು ಅಪಘಾತ: ವೈರಲ್ ಆಗುತ್ತಿದೆ ವಿಡಿಯೋ

  |

  ನಟ ಜಗ್ಗೇಶ್ ದ್ವಿತೀಯ ಪುತ್ರ ಯತಿರಾಜ್ ಅವರ ಕಾರು ನಿನ್ನೆ ಚಿಕ್ಕಬಳ್ಳಾಪುರ ಬಳಿ ಅಗಲಗುರ್ಕಿಯಲ್ಲಿ ಅಪಘಾತಕ್ಕೆ ಈಡಾಗಿದೆ. ಯತಿರಾಜ್‌ಗೆ ಹೆಚ್ಚಿನ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ.

  ಅಪಘಾತದ ಕುರಿತು ಚಿಕ್ಕಬಳ್ಳಾಪುರ ಎಸ್‌ಪಿ ಮಿಥುನ್ ಕುಮಾರ್ ಮಾಹಿತಿ ನೀಡಿದ್ದು, ''ಹೆದ್ದಾರಿಯಲ್ಲಿ ಯೂಟರ್ನ್ ತೆಗೆದುಕೊಳ್ಳುತ್ತಿದ್ದ ಬೈಕ್ ಒಂದನ್ನು ತಪ್ಪಿಸಲು ಹೋಗಿ ಕಾರು ಮರಕ್ಕೆ ಢಿಕ್ಕಿಯಾಗಿದೆ'' ಎಂದಿದ್ದಾರೆ. ಜೊತೆಗೆ ಯತಿರಾಜ್ ನಶೆಯಲ್ಲಿರಲಿಲ್ಲ ಎಂಬುದು ಪ್ರಾಥಮಿಕ ಆರೋಗ್ಯ ತಪಾಸಣೆಯಿಂದ ಗೊತ್ತಾಗಿದೆ'' ಎಂದಿದ್ದಾರೆ.

  ಆದರೆ ಇದೀಗ ಯತಿರಾಜ್‌ರದ್ದು ಎಂದು ಹೇಳಲಾಗುತ್ತಿರುವ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ವಿಡಿಯೋದಲ್ಲಿ ಯತಿರಾಜ್ ಭಿನ್ನವಾಗಿ ವರ್ತಿಸಿದ್ದಾರೆ. ಇದು ಕೆಲವು ಅನುಮಾನಗಳಿಗೆ ಕಾರಣವಾಗಿದೆ.

  ವಿಡಿಯೋದಲ್ಲಿ ಇರುವುದೇನು?

  ವಿಡಿಯೋದಲ್ಲಿ ಇರುವುದೇನು?

  ವಿಡಿಯೋದಲ್ಲಿರುವಂತೆ ವ್ಯಕ್ತಿಯೊಬ್ಬ ನಡೆದು ಕೊಂಡು ಹೋಗುತ್ತಿದ್ದವ ಹಠಾತ್ತನೆ ನೃತ್ಯ ಮಾಡಿದ್ದಾನೆ ಮತ್ತೆ ಸಿನಿಮಾ ಹೀರೋಗಳಂತೆ ನಡಿಗೆ ಮುಂದುವರೆಸಿದ್ದಾನೆ. ವಿಡಿಯೋದಲ್ಲಿರುವ ವ್ಯಕ್ತಿ ಯತಿರಾಜ್ ಎಂದೇ ಹೇಳಲಾಗುತ್ತಿದೆ. ಅಪಘಾತವಾದಾಗ ಯತಿರಾಜ್‌ಗೆ ಸಹಾಯ ಮಾಡಿದವರೇ ಈ ವಿಡಿಯೋ ಮಾಡಿದ್ದಾರೆ.

  ಪ್ರಕರಣ ದಾಖಲಿಸಿಕೊಂಡಿದ್ದಾರೆ ಪೊಲೀಸರು

  ಪ್ರಕರಣ ದಾಖಲಿಸಿಕೊಂಡಿದ್ದಾರೆ ಪೊಲೀಸರು

  ಅಪಘಾತ ಹೇಗಾಯಿತು ಎಂಬ ಮಾಧ್ಯಮಗಳ ಪ್ರಶ್ನೆಗೆ ಯತಿರಾಜ್ ಸೂಕ್ತವಾಗಿ ಉತ್ತರಿಸದೇ ಇದ್ದದ್ದು ಸಹ ಅನುಮಾನಗಳನ್ನು ಹೆಚ್ಚು ಮಾಡಿದೆ. ಚಿಕ್ಕಬಳ್ಳಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ. ತನಿಖೆಯ ಬಳಿಕವಷ್ಟೆ ಪ್ರಕರಣದ ಸತ್ಯಾಂಶ ಹೊರಗೆ ಬರಲಿದೆ.

  ಪೊಲೀಸರು ಹೇಳಿದ್ದೇನು?

  ಪೊಲೀಸರು ಹೇಳಿದ್ದೇನು?

  ಯತಿರಾಜ್ ಕಾರಿಗೆ ನಾಯಿ ಅಡ್ಡಬಂದು ಅದನ್ನು ತಪ್ಪಿಸುವ ಪ್ರಯತ್ನದಲ್ಲಿ ಕಾರು ಪಲ್ಟಿಯಾಗಿ ಅಪಘಾತ ಸಂಭವಿಸಿತು ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದರು ನಂತರ ಆ ಟ್ವೀಟ್ ಅನ್ನು ಡಿಲೀಟ್ ಮಾಡಿ, ಆಕ್ಸಿಡೆಂಟ್ ಆದ ಕಾರಿನ ಚಿತ್ರ ನೋಡಲಾಗುತ್ತಿಲ್ಲ ಹಾಗಾಗಿ ಡಿಲೀಟ್ ಮಾಡಿದೆ ಎಂದು ಸ್ಪಷ್ಟನೆ ನೀಡಿದ್ದರು. ಪೊಲೀಸರು ಹೇಳಿದಂತೆ ಯೂಟರ್ನ್ ಮಾಡುತ್ತಿದ್ದ ಬೈಕ್‌ ಅನ್ನು ತಪ್ಪಿಸಲು ಹೋಗಿ ಕಾರು ಪಲ್ಟಿಯಾಗಿದೆ, ಯಾವುದೇ ಜೀವಾಪಾಯ ಸಂಭವಿಸಿಲ್ಲ ಎಂದಿದ್ದಾರೆ.

  ಅಪಘಾತ ಎಲ್ಲಿ ? ಯಾವಾಗ ? ಹೇಗಾಯ್ತು? | Filmibeat Kannada
  ಮಗನಿಗೆ ಒಳಗಾಯಗಳಾಗಿದೆ ಎಂದ ಜಗ್ಗೇಶ್

  ಮಗನಿಗೆ ಒಳಗಾಯಗಳಾಗಿದೆ ಎಂದ ಜಗ್ಗೇಶ್

  ಮಗನಿಗೆ ಯಾವುದೇ ಗಾಯವಾಗಿಲ್ಲ ಎಂದು ಜಗ್ಗೇಶ್ ನಿನ್ನೆ ಹೇಳಿದ್ದರು. ಆದರೆ ಇಂದು ಟ್ವೀಟ್ ಮಾಡಿರುವ ಜಗ್ಗೇಶ್ ಮಗನಿಗೆ ಒಳಗಾಯಗಳು ಆಗಿವೆ. ಪಕ್ಕೆಯ ಮೂಳೆ, ಬಲತೊಡೆಯ ಲಿಗಮೆಂಟ್‌ಗೆ ಬಲವಾದ ಪೆಟ್ಟು ಬಿದ್ದಿದ್ದು ಚಿಕಿತ್ಸೆ ನಡೆಯುತ್ತಿದೆ ಎಂದಿದ್ದಾರೆ.

  English summary
  A video getting viral related to Jaggesh's son Yathiraj's car accident. A man who looks like Yathiraj seen dancing in the video.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X