For Quick Alerts
  ALLOW NOTIFICATIONS  
  For Daily Alerts

  ವಿಡಿಯೋ: ಪ್ರಕೃತಿ ನಡುವೆ ನಿಖಿಲ್ ಕುಮಾರಸ್ವಾಮಿ-ರೇವತಿ ವರ್ಕ್‌ಔಟ್

  |

  ನವ ಜೋಡಿ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಲಾಕ್‌ಡೌನ್‌ ಸಮಯದಲ್ಲಿ ಸಾಕಷ್ಟು ಕ್ವಾಲಿಟಿ ಸಮಯವನ್ನು ಪರಸ್ಪರ ಒಟ್ಟಿಗೆ ಕಳೆಯುತ್ತಿದ್ದಾರೆ.

  Nikhil & Revathi GYM Workout : ಪ್ರಕೃತಿ ನಡುವೆ ನಿಖಿಲ್ ಕುಮಾರಸ್ವಾಮಿ-ರೇವತಿ ವರ್ಕ್‌ಔಟ್ | Filmiibeat Kannada

  ಲಾಕ್‌ಡೌನ್‌ನಿಂದಾಗಿ ಎಲ್ಲಿಯೂ ಹೊರಗೆ ಹೋಗಲಾಗದ ಸಂದರ್ಭ ಈಗಿದೆ. ಆದರೆ ಅವರು ತಮ್ಮ ತೋಟದ ಮನೆ ಸೇರಿ ಪ್ರಕೃತಿ ಮಧ್ಯೆ ಲಾಕ್‌ಡೌನ್ ದಿನಗಳನ್ನು ಸಂತೋಷದಿಂದ ಕಳೆಯುತ್ತಿದ್ದಾರೆ.

  ಲಾಕ್‌ಡೌನ್ ಸಮಯದಲ್ಲಿ ಕೆಲಸ ಮಾಡದೆ ಸೋಮಾರಿಯಾಗಿದೆ ನಿಖಿಲ್ ಕುಮಾರಸ್ವಾಮಿ ಅವರು ರೈತನಾಗಲು ಹೊರಟಿದ್ದು, ಪತ್ನಿ ರೇವತಿ ಅದಕ್ಕೆ ಬೆಂಬಲ ನೀಡಿದ್ದಾರೆ.

  ಯುವಕರಿಗೆ ಸ್ಫೂರ್ತಿಯಾಗಲು ರೈತನಾಗಲು ನಿರ್ಧರಿಸಿದ ನಟ ನಿಖಿಲ್ ಕುಮಾರಸ್ವಾಮಿಯುವಕರಿಗೆ ಸ್ಫೂರ್ತಿಯಾಗಲು ರೈತನಾಗಲು ನಿರ್ಧರಿಸಿದ ನಟ ನಿಖಿಲ್ ಕುಮಾರಸ್ವಾಮಿ

  ಇದೀಗ ಇಬ್ಬರೂ ಬೆಳಂಬೆಳಿಗ್ಗೆ ವರ್ಕ್‌ಔಟ್ ಮಾಡುತ್ತಿರುವ ವಿಡಿಯೋವನ್ನು ನಿಖಿಲ್ ಕುಮಾರಸ್ವಾಮಿ ಅವರು ಇನ್‌ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ.

  ವಿಡಿಯೋ ಹಂಚಿಕೊಂಡಿರುವ ನಿಖಿಲ್

  ವಿಡಿಯೋ ಹಂಚಿಕೊಂಡಿರುವ ನಿಖಿಲ್

  ನಿಖಿಲ್ ಕುಮಾರಸ್ವಾಮಿ ಹಾಗೂ ಪತ್ನಿ ರೇವತಿ ಮಹಡಿಯ ಮೇಲೆ ನಿಂತು ವ್ಯಾಯಾಮ ಮಾಡುತ್ತಿದ್ದಾರೆ. ವಿಡಿಯೋದ ಹಿನ್ನೆಲೆಯಲ್ಲಿ ಕಣ್ಣುಹಾಯಿಸಿದಷ್ಟೂ ಹಸಿರೇ ಕಾಣುತ್ತಿದೆ. ಪತಿ-ಪತ್ನಿ ಇಬ್ಬರೂ ಫಿಟ್‌ನೆಸ್‌ಗೆ ಮಹತ್ವ ನೀಡುವವರು ಎಂಬುದು ವಿಡಿಯೋದಿಂದ ಗೊತ್ತಾಗುತ್ತಿದೆ.

  ಜಿಮ್ ಅಲ್ಲ ವ್ಯಾಯಾಮ ಮಾಡಲು ಪ್ರೇರಣೆ ಬೇಕಷ್ಟೆ

  'ವ್ಯಾಯಾಮ ಮಾಡಲು ಯಾವಾಗಲೂ ಜಿಮ್ ಬೇಕು ಎಂದೇನೂ ಇಲ್ಲ, ವ್ಯಾಯಾಮ ಮಾಡಲು ಪ್ರೇರಣೆ ಬೇಕು, ನನ್ನ ಪಾರ್ಟನ್‌ ಜೊತೆ ಸೇರಿ ನಿಸರ್ಗದ ಮಧ್ಯೆ ವ್ಯಾಯಾಮ ಮಾಡಿದೆ' ಎಂದು ವಿಡಿಯೋ ಹಂಚಿಕೊಂಡಿರುವ ನಿಖಿಲ್ ಬರೆದುಕೊಂಡಿದ್ದಾರೆ.

  ನಿಖಿಲ್ ಕುಮಾರಸ್ವಾಮಿ ಮದುವೆ ಟೀಕಿಸಿ ಮಾಡಿದ್ದ ಟ್ವೀಟ್ ಡಿಲೀಟ್ ಮಾಡಿದ ರವೀನಾ ಟಂಡನ್ನಿಖಿಲ್ ಕುಮಾರಸ್ವಾಮಿ ಮದುವೆ ಟೀಕಿಸಿ ಮಾಡಿದ್ದ ಟ್ವೀಟ್ ಡಿಲೀಟ್ ಮಾಡಿದ ರವೀನಾ ಟಂಡನ್

  ಕೃಷಿಕನಾಗುತ್ತಿರುವ ನಿಖಿಲ್ ಕುಮಾರಸ್ವಾಮಿ

  ಕೃಷಿಕನಾಗುತ್ತಿರುವ ನಿಖಿಲ್ ಕುಮಾರಸ್ವಾಮಿ

  ನಿಖಿಲ್ ಸಹ ಕೃಷಿಕನಾಗಲು ಹೊರಟಿದ್ದು, ತಮ್ಮ ಜನೀನಿನಲ್ಲಿ ಕೃಷಿ ಚಟುವಟಿಕೆ ಪ್ರಾರಂಭ ಮಾಡುವುದಾಗಿ ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಇದಕ್ಕೆ ಪೂರಕವಾಗಿ ಕೆಲವು ಚಿತ್ರಗಳನ್ನು ಸಹ ಹಂಚಿಕೊಂಡಿದ್ದರು.

  ಫಾರಿನ್ ಟ್ರಿಪ್ ಕ್ಯಾನ್ಸಲ್

  ಫಾರಿನ್ ಟ್ರಿಪ್ ಕ್ಯಾನ್ಸಲ್

  ಭಾರಿ ಅದ್ಧೂರಿಯಾಗಿ ನಡೆಸಲಿಚ್ಛಿಸಿದ್ದ ನಿಖಿಲ್ ಕುಮಾರಸ್ವಾಮಿ ಮದುವೆ ಲಾಕ್‌ಡೌನ್ ಕಾರಣದಿಂದ ಬಹು ಸರಳವಾಗಿ ಮಾಡಲಾಯಿತು. ನಂತರ ಈ ಯುವಜೋಡಿ ತಮ್ಮ ಫಾರಿನ್ ಟ್ರಿಪ್‌ ಯೋಜನೆಗಳನ್ನೂ ಸಹ ಕೊರೊನಾ ಕಾರಣಕ್ಕೆ ರದ್ದುಪಡಿಸಿ ಸದ್ಯ ರಾಮನಗರ ಬಳಿಯ ತೋಟದ ಮನೆ, ಬೆಂಗಳೂರು ಮನೆಗಳಿಗೆ ಓಡಾಡಿಕೊಂಡಿದ್ದಾರೆ.

  ವಿವಾದದ ಕಿಡಿ ಹೊತ್ತಿಸಿದ ನಿಖಿಲ್-ರೇವತಿ ಮದುವೆಯ ಫೋಟೊವಿವಾದದ ಕಿಡಿ ಹೊತ್ತಿಸಿದ ನಿಖಿಲ್-ರೇವತಿ ಮದುವೆಯ ಫೋಟೊ

  English summary
  Nikhil Kumaraswamy and his wife Revathi work out in middle of nature. Nikhil Kumaraswamy shares video.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X