ಮತ್ತೊಮ್ಮೆ ಟ್ರೋಲಿಗರಿಗೆ ಆಹಾರವಾದ ನಿವೇದಿತಾ ಗೌಡ, ಬಾರ್ಬಿ ಡಾಲ್ ಮೇಲ್ಯಾಕೆ ಇಷ್ಟು ಸಿಟ್ಟು..?

By ಫಿಲ್ಮಿಬೀಟ್ ಡೆಸ್ಕ್

ಸೋಶಿಯಲ್ ಮೀಡಿಯಾದಲ್ಲಿ ಬೆಳಗಾದರೆ ಆ ಸೆಲೆಬ್ರೆಟಿಗಳು ಹಂಗೆ, ಈ ಸೆಲೆಬ್ರೆಟಿಗಳು ಹಿಂಗೇ ಎನ್ನುವಂತಹ ಪೋಸ್ಟುಗಳು, ಸ್ಟಾರ್ ಸೆಲೆಬ್ರೆಟಿಗಳ ಕುರಿತಾದ ಟ್ರೋಲುಗಳು, ಕಿಂಡಲ್ಲುಗಳು ಬರೋದು ಕಾಮನ್ನು. ಸೆಲೆಬ್ರೆಟಿಗಳೆಂದ ಮೇಲೆ ಅಷ್ಟೂ ಮಾಡದೇ ಇದ್ದರೆ ಹೇಗೆ? ಇಂತಹ ಸಾಕಷ್ಟು ವಿವಾದಾತ್ಮಕ ವಿಚಾರಗಳಿಗೆ ಬಹುತೇಕ ಸೆಲೆಬ್ರೆಟಿಗಳು ಉರಿದು ಬೀಳುತ್ತಾರೆ. ಪ್ರತಿಕ್ರಿಯೆ ನೀಡುತ್ತಾರೆ. ಕೆಲವರಂತೂ ಕಾನೂನಿನ ಮೆಟ್ಟಿಲನ್ನು ಹತ್ತುತ್ತಾರೆ. ಇನ್ನೂ ಕೆಲವರು ಇಂತಹ ಯಾವ ಅನಗತ್ಯ ವಿಚಾರಗಳಿಗೆ ತಲೆ ಕೆಡಿಸಿಕೊಳ್ಳದೇ ತಮ್ಮದೇ ಕೆಲಸಗಳಲ್ಲಿ ಬ್ಯುಸಿಯಾಗಿತ್ತಾರೆ. ಉದಾಹರಣೆಗೆ ನಿವೇದಿತಾ ಗೌಡ.

ಹೌದು, ಇಲ್ಲಿಯವರೆಗೆ ನಿವೇದಿತಾ ಗೌಡ ಅವರ ಮೇಲೆ ಅನೇಕರು ಕೆಂಡ ಕಾರಿದ್ದಾರೆ. ಚಂದನ್ ಶೆಟ್ಟಿ ಜೊತೆ ಇದ್ದಾಗಲೂ ಇವರನ್ನು ಬ್ಯೆಯುತ್ತಿದ್ದ ಅನೇಕರು, ಈಗ ಚಂದನ್ ಶೆಟ್ಟಿ ಅವರಿಂದ ನಿವೇದಿತಾ ದೂರವಾದ ನಂತರವೂ ಕೂಡ ತೆಗಳುವ ಕಾರ್ಯಕ್ರಮವನ್ನು ಮುಂದುವರೆಸಿದ್ದಾರೆ. ಇದಕ್ಕೆ ನಿವೇದಿತಾ ಗೌಡ ಅವರ ರೀಲ್ಸ್ ಹವ್ಯಾಸ ಪ್ರಮುಖ ಕಾರಣ ಅನ್ನುವುದು ಮತ್ತೆ ಪ್ರತೈಕವಾಗಿ ಹೇಳಬೇಕಿಲ್ಲ.

video-of-niveditha-gowda-ex-wife-of-chandan-shetty-from-the-gowri-celebrity-show-goes-viral

ರೀಲ್ಸ್ ವಿಚಾರದಲ್ಲಿ ಕುಂತರು, ನಿಂತರು .. ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗ್ತಾನೇ ಬಂದ ನಿವೇದಿತಾ, ಈಗ ಯಾವುದಾದರೂ ಸಭೆ-ಸಮಾರಂಭಕ್ಕೆ.. ಕಾರ್ಯಕ್ರಮಕ್ಕೆ.. ಹೋಗುವುದು ಕೂಡ ಕಷ್ಟ ಎಂಬ ವಾತಾವರಣ ನಿರ್ಮಾಣವಾಗಿದೆ. ಯಾಕೆಂದರೆ, ಇವರ ಕಾಲೆಳೆಯಲು ಕಾಯುವವರಿಗೆ ನಿವೇದಿತಾ ಹಾಕಿಕೊಳ್ಳುವ ಬಟ್ಟೆಯ ವಿಚಾರ ಆಹಾರವಾಗಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ನಿವೇದಿತಾ ಗೌಡ ಅವರ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಿವೇದಿತಾ ಹಾಕಿಕೊಂಡ ಬಟ್ಟೆಯ ಬಗ್ಗೆ ಚರ್ಚೆ ನಡೆಯುತ್ತಿದೆ.

ಹೌದು, ಅಸಲಿಗೆ ನಿವೇದಿತಾ ಗೌಡ ಕಳೆದ ವಾರ ಬಿಡುಗಡೆಯಾದ ಗೌರಿ ಚಿತ್ರವನ್ನು ನೋಡಲು ತೆರಳಿದ್ದರು. ಬ್ರಾಡ್ ನೆಕ್ ವೈಟ್ ಶಾರ್ಟ್ ಬಾಡಿಕಾನ್ ಡ್ರೆಸ್ ಧರಿಸಿ ಪ್ರಿಮಿಯರ್ ಪ್ರದರ್ಶನದಲ್ಲಿ ಭಾಗಿಯಾಗಿದ್ದರು. ಈ ಬಟ್ಟೆಯ ಮೇಲೀಗ ಅನೇಕರ ಕಣ್ಣು ಬಿದ್ದಿದೆ. ನಿವೇದಿತಾ ಗೌಡ ಅವರ ಡ್ರೆಸ್ಸಿಂಗ್ ಸೆನ್ಸ್ ಕುರಿತು ಚರ್ಚೆ ಶುರುವಾಗಿದೆ. ಎಂದಿನಂತೆ ನಿವೇದಿತಾ ಗೌಡ ಅವರನ್ನು ಟ್ರೋಲ್ ಮಾಡಲಾಗುತ್ತಿದೆ. ವಿಡಿಯೋ ವೈರಲ್ ಆಗಿದೆ.

ವೈರಲ್ ಆದ ವಿಡಿಯೋಗೆ ಒಬ್ಬರು ಬಟ್ಟೆ ಇರುವುದು ಮೈ ಮುಚ್ಚಿಕೊಳ್ಳಲು, ಅಂಗಾಂಗ ಪ್ರದರ್ಶನಕ್ಕೆ ಅಲ್ಲ ಎಂದರೆ, ಮತ್ತೊಬ್ಬರು ಅಂಗಡಿಗೆ ಸ್ವಲ್ಪ ಬಾಗಿಲು ಭದ್ರವಾಗಿ ಹಾಕಿಕೊಂಡು ಬಾರಮ್ಮ ಎಂದಿದ್ದಾರೆ. ಮತ್ತೊಬ್ಬರು ಇವರೆಲ್ಲ ಯಾಕೆ ಹೀಗೆ ಎಂಬ ಪ್ರಶ್ನೆ ಮಾಡಿದ್ದಾರೆ. ಇನ್ನೊಬ್ಬರು ದುಡ್ಡು ಇದೆ ಅಂತ ಈ ತರಹದ ಬಟ್ಟೆ ಹಾಕಿಕೊಳ್ಳಬಾರದು ಎಂದಿದ್ದಾರೆ. ಅಲ್ಲಲ್ಲಿ ಕೆಲವರು ಗೊಂಬೆ ಎಂದು ಹೊಗಳಿದರೆ,ಉಳಿದವರು ಕೆಟ್ಟಾ ಕೊಳಕು ಕಾಮೆಂಟ್‌ಗಳನ್ನು ಮಾಡಿದ್ದಾರೆ.

ಕೇವಲ ಇದೊಂದೇ ವಿಡಿಯೋ ಅಲ್ಲ, ಗೌರಿ ಚಿತ್ರದ ಪ್ರೀಮಿಯರ್ ನಲ್ಲಿ ನಿವೇದಿತಾ ಗೌಡ ಕಾಣಿಸಿಕೊಂಡ ಇನ್ನೂ ಹತ್ತು ಹಲವು ವಿಡಿಯೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ನಾನಾ ಬಗೆಯ ಅಭಿಪ್ರಾಯಗಳು ಕೂಡ ವ್ಯಕ್ತವಾಗುತ್ತಿವೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X