ನಾನು ಬಾತ್‌ರೂಮ್ ಸಿಂಗರ್ ಅಲ್ಲ ಆಯ್ತಾ ಎಂದ ನಿವೇದಿತಾ, ಶೆಟ್ರಿಗೆ ಸವಾಲಾ ಎಂದ ನೆಟ್ಟಿಗರು..!
ಸೆಲೆಬ್ರಿಟಿಗಳು ತಮ್ಮ ವೈಯಕ್ತಿಕ ಜೀವನದಲ್ಲಿ ಒಂದು ಬೊಂಬೆಯ ಜತೆಗೆ ಆಟವಾಡಿದರೂ ಸೋಶಿಯಲ್ ಮೀಡಿಯಾದಲ್ಲಿ ಅದು ಸುದ್ದಿಯಾಗಬಹುದು. ಟ್ರೋಲಿಗರ ಹಸಿವಿಗೆ ಆಹಾರವೂ ಆಗಬಹುದು. ಇದಕ್ಕೆ ನಿವೇದಿತಾ ಗೌಡ ಅವರ ಹೊಸ ರೀಲ್ಸ್ ಸದ್ಯದ ಉದಾಹರಣೆ.
ಹೌದು, ಚಂದನ್ ಶೆಟ್ಟಿ ಅವರಿಂದ ದೂರವಾದ ನಂತರ, ನಿವೇದಿತಾ ಗೌಡ ಅವರಿಗೆ ರೀಲ್ಸ್ ಮೇಲಿನ ಮೋಹ ಇನ್ನೂ ಹೆಚ್ಚಾಗಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ನಿವೇದಿತಾ ದಿನಕ್ಕೊಂದು ವಿಡಿಯೋ ತುಣುಕು ಹಂಚಿಕೊಳ್ಳುತ್ತಿದ್ದಾರೆ. ಎಷ್ಟೇ ಟ್ರೋಲ್ ಆದರೂ ನಿವೇದಿತಾ ತಲೆ ಕೆಡಿಸಿಕೊಳ್ಳದೇ ತಮ್ಮ ಪಾಡಿಗೆ ರೀಲ್ಸ್ ಮಾಡುತ್ತಲೇ ಇದ್ದಾರೆ. ಇದೀಗ ಇವರ ಈ ರೀಲ್ಸ್ ಪ್ರಪಂಚಕ್ಕೆ ಇವರ ಸಹೋದರ ಕೂಡ ಬಂದಿದ್ದಾರೆ. ತಮ್ಮ ಸಹೋದರಿಯ ರೀಲ್ಸ್‌ನಲ್ಲಿ ಭಾಗಿಯಾಗಿದ್ದಾರೆ.

ಇಂಗ್ಲಿಷ್ ಹಾಡೊಂದಕ್ಕೆ ತಮ್ಮ ಕಂಠ ಕುಣಿಸಲು ನಿವೇದಿತಾ ಪ್ರಯತ್ನಕ್ಕೆ ಮುಂದಾದಾಗ ಬರುವ ಸಹೋದರ ಗೋಳು ಹೊಯ್ದುಕೊಳ್ಳುತ್ತಾರೆ. ಆಗ ನಿವೇದಿತಾ ಇಲ್ಲಿಂದ ಹೋಗು ಪ್ಲೀಸ್ ಎನ್ನುತ್ತಾರೆ. ನಾನು ಬಾತುರೂಮ್ ಸಿಂಗರ್ ಅಲ್ಲ ಆಯ್ತಾ ಎಂದು ನಿವೇದಿತಾ ಹೇಳಿದ್ದಕ್ಕೆ ತಮ್ಮ ನೀನು ಸಿಂಗರೇ ಅಲ್ಲ ಎಂದು ಕಾಲೆಳೆದಿದ್ದಾರೆ.
ಆ ನಂತರ ಇವರ ಸಹೋದರ ಇದು ಸ್ಟುಪ್ಪಿಡ್ ಎಂದಿದ್ದಕ್ಕೆ ಹೌದು ನಾನು ಸ್ಟುಪಿಡ್ ಆಯ್ತಾ, ನಾನು ಸರಿ ಆಗುವವರೆಗೆ ಹಾಡುತ್ತಲೇ ಇರುತ್ತೇನೆ ಎಂದಿದ್ದಾರೆ ನಿವೇದಿತಾ. ಇನ್ನೂ ನನಗೆ ಹಸಿವು ಆಗುತ್ತಿದೆ ಏನಾದರೂ ಅಡುಗೆ ಮಾಡು ಎಂದು ತಮ್ಮ ಹೇಳಿದ್ದಕ್ಕೆ ನೀನು ಊಟಕ್ಕೆ ಇನ್ನೊಬ್ಬರನ್ನು ಡಿಪೆಂಡ್ ಆಗಿರುವುದ್ಯಾಕೆ ಎಂದು ಕೇಳಿದ್ದಾರೆ ನಿವೇದಿತಾ.
ಹೀಗೆ ತರಲೆ ತಮಾಷೆ ಒಳಗೊಂಡ ವಿಡಿಯೋವನ್ನು ಹಂಚಿಕೊಂಡಿರುವ ನಿವೇದಿತಾ, ಸಹೋದರರೆಲ್ಲರೂ ಇದೇ ರೀತಿ ಕಿರಿಕಿರಿನಾ..? ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಆದರೆ ಈ ಪ್ರಶ್ನೆಗೆ ಉತ್ತರವನ್ನ ನೀಡದ ಹಲವರು ನಿವೇದಿತಾ ಅವರಿಗೆ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಒಳ್ಳೆಯ ಸಿಂಗರ್ ಚಂದನ್‌ಗೆ ಡಿವೋರ್ಸ್ ಕೊಟ್ಟು ಈಗ ಶೆಟ್ರಿಗೆ ಇಂಗ್ಲೀಷ್‌ನಲ್ಲಿ ಸ್ಪರ್ಧೆ ಕೊಡೋಕೆ ಬರುತ್ತಿದ್ದಾರೆ ಎಂದು ನಿವೇದಿತಾ ಕಾಲೆಳೆದಿದ್ದಾರೆ.
ಅಂದ್ಹಾಗೇ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ನಿಜ ಜೀವನದಲ್ಲಿ ದೂರ ದೂರವಾದರೂ, ಸಿನಿಮಾ ಮೂಲಕ ನಿಮ್ಮೆದುರು ಸದ್ಯದಲ್ಲಿಯೇ ಜೊತೆಯಾಗಿ ಬರಲಿದ್ದಾರೆ. ಕ್ರೈಮ್ ಥ್ರಿಲ್ಲರ್ ಮಾದರಿಯ ಪುನೀತ್ ಶ್ರೀನಿವಾಸ್ ನಿರ್ದೇಶನದ ಕ್ಯಾಂಡಿ ಕ್ರಶ್ ಚಿತ್ರದಲ್ಲಿ ನಾಯಕ-ನಾಯಕಿ ಪಾತ್ರವನ್ನು ನಿರ್ವಹಿಸಿದ್ದಾರೆ. ಕ್ಯಾಂಡಿ ಕ್ರಶ್ ಸಿನಿಮಾ ಹೊರತು ಪಡಿಸಿದರೆ ನಿವೇದಿತಾ ಗೌಡ ಸೃಜನ್ ಲೋಕೇಶ್ ನಿರ್ದೇಶನದ ಜಿಎಸ್‌ಟಿ ಚಿತ್ರದಲ್ಲಿ ಕೂಡ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ವಿಶೇಷ ಅಂದರೆ ಈ ಚಿತ್ರಕ್ಕೆ ಚಂದನ್ ಶೆಟ್ಟಿ ಸಂಗೀತ ನಿರ್ದೇಶನ ಇದೆ.

ಸದ್ಯಕ್ಕೆ ನಿವೇದಿತಾ ಗೌಡ ಹಂಚಿಕೊಂಡ ಈ ಹೊಸ ರೀಲ್ಸ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹತ್ತಾರು ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಆದರೂ ಎಂದಿನಂತೆ ನಿವೇದಿತಾ ಗೌಡ ಅವರು ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ.ಬಹುಶಃ ಮುಂದೆಯೂ ತಲೆಕೆಡಿಸಿಕೊಳ್ಳುವುದೇ ಇಲ್ಲ.


Click it and Unblock the Notifications











