'ಗೋಧಿ ಬಣ್ಣ ಸಾಧರಣ ಮೈ ಕಟ್ಟು' ಪತ್ತೆ ಹಚ್ಚಲಾದ ಪಾತ್ರಗಳು
'ಗೋಧಿ ಬಣ್ಣ ಸಾಧರಣ ಮೈ ಕಟ್ಟು' ಈ ಹೆಸರು ಕೇಳುತ್ತಿದ್ದಂತೆ ಏನಪ್ಪಾ ಇದು ಆಕಾಶವಾಣಿಯಲ್ಲಿ ಕಳೆದು ಹೋದವರ ಅಡ್ರೆಸ್ ಹೇಳಿದಂಗೆ ಇದೆ ಅನ್ಕೊಂಡ್ರ. ಹೌದು ಸದ್ಯಕ್ಕೆ ಸ್ಯಾಂಡಲ್ ವುಡ್ ನ ಪ್ರೇಕ್ಷಕರಲ್ಲಿ ಈ ಚಿತ್ರ ಭಾರೀ ನಿರೀಕ್ಷೆ ಹುಟ್ಟುಹಾಕಿದೆ.
ರಕ್ಷಿತ್ ಶೆಟ್ಟಿ, ಅನಂತ್ ನಾಗ್, ಶ್ರುತಿ ಹರಿಹರನ್, ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿರುವ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರಕ್ಕೆ ಹೇಮಂತ್ ಎಮ್.ರಾವ್ ಆಕ್ಷನ್-ಕಟ್ ಹೇಳಿದ್ದಾರೆ. ಚರಣ್ ರಾಜ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.
ಸ್ಯಾಂಡಲ್ ವುಡ್ ಖ್ಯಾತ ನಟ ಅನಂತ್ ನಾಗ್, ಅವರ ಮಗನ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಕ್ಷಿತ್ ಶೆಟ್ಟಿ ಕಳೆದು ಹೋದ ಅಪ್ಪ ವೆಂಕೋಬ್ ರಾವ್ ಅಲಿಯಾಸ್ ಅನಂತ್ ನಾಗ್ ನನ್ನು ಹುಡುಕುವಲ್ಲಿ ಯಶಸ್ವಿಯಾಗುತ್ತಾರ ಅನ್ನೋದು ಚಿತ್ರದ ಹೂರಣ.
ಈ ಮೊದಲು ಚಿತ್ರದ ಕ್ಯಾರೆಕ್ಟರ್ ಪರಿಚಯ ಮಾಡುವ ಪ್ರೋಮೋಗಳನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಇದೀಗ ಅನಂತ್ ನಾಗ್ ಹುಡುಕಾಟದ ಕಾರ್ಯಚರಣೆಯಲ್ಲಿ ಡಾಕ್ಟರ್ ಸಹನಾ ಪಾತ್ರವಹಿಸಿರುವ ಶ್ರುತಿ ಹರಿಹರನ್ ಸಾಥ್ ನೀಡುವ ಹೊಸ ಸಾಂಗ್ ಪ್ರೋಮೋ ಒಂದನ್ನು ಬಿಡುಗಡೆ ಮಾಡಿದ್ದಾರೆ. ಚಿತ್ರದ ಎಲ್ಲಾ ಪ್ರೋಮೋಗಳನ್ನು ನೋಡಲು ಕೆಳಗಿನ ಸ್ಲೈಡ್ ಕ್ಲಿಕ್ ಮಾಡಿ..
ಡಾ.ಸಹನಾ ಅಲಿಯಾಸ್ ಶ್ರುತಿ ಹರಿಹರನ್ ಕಳೆದು ಹೋಗಿರುವ ತಮ್ಮ ಪೇಷೆಂಟ್ ವೆಂಕೋಬ್ ರಾವ್ ಅಲಿಯಾಸ್ ಅನಂತ್ ನಾಗ್ ಅವರನ್ನು ಹುಡುಕಾಡುವ ಸಾಂಗ್ ಪ್ರೋಮೋ ಇಲ್ಲಿದೆ ನೋಡಿ...
ಈ ಸಾಂಗ್ ಪ್ರೋಮೋದಲ್ಲಿ ಶ್ರುತಿ ಹರಿಹರನ್ 66 ವರ್ಷದ ವೆಂಕೋಬ್ ರಾವ್ (ಅನಂತ್ ನಾಗ್) ಅನ್ನುವವರು ಕಳೆದು ಹೋಗಿದ್ದಾರೆ. ಅವರು ಕಾಣೆಯಾದ ಸಂದರ್ಭದಲ್ಲಿ ರೆಡ್ ಸ್ವೆಟರ್ ಹಾಗೂ ಪಿಂಕ್ ಕಲರ್ ಶರ್ಟ್ ಹಾಕಿಕೊಂಡಿರುತ್ತಾರೆ, ಅಂತ ಹುಡುಕಾಟದಲ್ಲಿ ಕಳೆದು ಹೋಗುವ ಶ್ರುತಿ ಹರಿಹರನ್ ಸಖತ್ ಎಮೋಷನಲ್ ಆಗಿ ಈ ಪ್ರೋಮೋದಲ್ಲಿ ಕಾಣಿಸಿಕೊಂಡಿದ್ದಾರೆ. 2 ನಿಮಿಷಗಳಿರುವ ಈ ಚಿತ್ರದ ಸಾಂಗ್ ಪ್ರೋಮೋದಲ್ಲಿ ರಕ್ಷಿತ್ ಶೆಟ್ಟಿ ಕೂಡ ಕಾಣಿಸಿಕೊಂಡಿದ್ದಾರೆ
'ಗೋಧಿ ಬಣ್ಣ ಸಾಧಾರಣ ಮೈ ಕಟ್ಟು' ರಕ್ಷಿತ್ ಶೆಟ್ಟಿ ಇಂಟ್ರೋ ಪ್ರೋಮೋ ಇಲ್ಲಿದೆ ನೋಡಿ....
ಪುಷ್ಪಕರ್ ಫಿಲಂ ಅರ್ಪಿಸುವ 'ಗೋಧಿ ಬಣ್ಣ ಸಾಧಾರಣ ಮೈ ಕಟ್ಟು' ಚಿತ್ರದ ನಾಯಕ ರಕ್ಷಿತ್ ಶೆಟ್ಟಿ ಅಲಿಯಾಸ್ ಶಿವ ನ ಪಾತ್ರ ಪರಿಚಯವನ್ನು ಈ ಪ್ರೋಮೋದಲ್ಲಿ ಮಾಡಲಾಗಿದೆ.
'ಗೋಧಿ ಬಣ್ಣ ಸಾಧಾರಣ ಮೈ ಕಟ್ಟು' ಚಿತ್ರದ ಮುಖ್ಯ ಪಾತ್ರಧಾರಿ ಅನಂತ್ ನಾಗ್ ಇಂಟ್ರೋ ಪ್ರೋಮೋ ಇಲ್ಲಿದೆ ನೋಡಿ....
ಚಿತ್ರದಲ್ಲಿ ಕಳೆದು ಹೋಗುವ ವೆಂಕೋಬ್ ರಾವ್ ಅಲಿಯಾಸ್ ಅನಂತ್ ನಾಗ್ ಅವರ ಪಾತ್ರ ಪರಿಚಯಿಸುವ ಪ್ರೋಮೋ. ಅಪ್ಪ-ಮಗನ ಪ್ರೀತಿ ಭಾಂದವ್ಯ ವನ್ನು ಈ ಪ್ರೋಮೋ ಸ್ಪಷ್ಟವಾಗಿ ತೋರಿಸಿಕೊಡುತ್ತದೆ.
'ಗೋಧಿ ಬಣ್ಣ ಸಾಧಾರಣ ಮೈ ಕಟ್ಟು' ಚಿತ್ರದ ಎಲ್ಲಾ ಪಾತ್ರಧಾರಿಗಳ ಹಾಗೂ ಚಿತ್ರ ತಂಡದ ಬಾಲ್ಯದ ಫೈಲ್ ಫೋಟೊಗಳ ಪ್ರೋಮೋ ನೋಡಿ...
ನಮ್ಮ ಹೀರೋಗಳು ಯಾವಾಗಲೂ ಎಲ್ಲಾ ಗಾತ್ರ ಹಾಗೂ ಆಕಾರಗಳಲ್ಲೂ ಇರುತ್ತಾರೆ ಅನ್ನುವಂತೆ ನಮಗೆ ನಮ್ಮ ನಮ್ಮ ತಂದೆಯಂದಿರೆ ಹೀರೋಗಳು ಅನ್ನೋದನ್ನ ಈ ಪ್ರೋಮೋದಲ್ಲಿ ಹೇಳುವ ಪ್ರಯತ್ನವನ್ನು ಚಿತ್ರತಂಡ ಯಶಸ್ವಿಯಾಗಿ ತೋರಿಸಿಕೊಟ್ಟಿದೆ.


Click it and Unblock the Notifications











