»   » ಶಾನ್ವಿ ಶ್ರೀವಾಸ್ತವ್ ಅಕ್ಕನೂ ದರ್ಶನ್ ಜೊತೆ ಆಕ್ಟ್ ಮಾಡಿದ್ದಾರೆ.!

ಶಾನ್ವಿ ಶ್ರೀವಾಸ್ತವ್ ಅಕ್ಕನೂ ದರ್ಶನ್ ಜೊತೆ ಆಕ್ಟ್ ಮಾಡಿದ್ದಾರೆ.!

Posted By:
Subscribe to Filmibeat Kannada

ದಕ್ಷಿಣದ ಖ್ಯಾತ ನಟಿ ಶಾನ್ವಿ ಶ್ರೀವಾಸ್ತವ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ತಾರಕ್' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದು, ತಮ್ಮ ಬಬ್ಲಿ ನಟನೆಯಿಂದ ಮೋಡಿ ಮಾಡಿದ್ದಾರೆ. 'ತಾರಕ್ 'ಚಿತ್ರದಲ್ಲಿನ ಶಾನ್ವಿ ಪಾತ್ರವನ್ನ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ.

ಈಗ ವಿಷ್ಯ ಏನಪ್ಪಾ ಅಂದ್ರೆ, ಶಾನ್ವಿ ಶ್ರೀವಾಸ್ತವ್ ಅವರ ಬಗ್ಗೆ ಒಂದು ಕುತೂಹಲವಾದ ಸಂಗತಿ ಇದೆ. ಅಂದ್ಹಾಗೆ, ಶಾನ್ವಿ ಶ್ರೀವಾಸ್ತವ್ ಅವರಿಗೆ ಒಬ್ಬರು ಅಕ್ಕ ಇದ್ದಾರೆ. ಈಕೆ ಕೂಡ ನಟಿ. ವಿಶೇಷ ಏನಪ್ಪಾ ಅಂದ್ರೆ, ಶಾನ್ವಿ ಸಹೋದರಿ ಕೂಡ ದರ್ಶನ್ ಜೊತೆ ಅಭಿನಯಿಸಿದ್ದಾರೆ.

ಅಷ್ಟಕ್ಕೂ, ಶಾನ್ವಿ ಶ್ರೀವಾಸ್ತವ್ ಅವರ ಅಕ್ಕ ಯಾರು? ದರ್ಶನ್ ಜೊತೆ ಇವರು ಯಾವಾಗ ಅಭಿನಯಿಸಿದ್ದಾರೆ? ಎಂದು ಮುಂದೆ ಓದಿ.....

ಶಾನ್ವಿ ಸಹೋದರಿ ವಿದಿಶಾ ಶ್ರೀವಾಸ್ತವ್

ಸದ್ಯ, ಕನ್ನಡ ಮತ್ತು ತೆಲುಗು ಸಿನಿಲೋಕದಲ್ಲಿ ಯಶಸ್ಸು ಕಂಡಿರುವ ಶಾನ್ವಿ ಶ್ರೀವಾಸ್ತವ್ ಅವರಿಗೂ ಮುಂಚೆಯೇ ನಾಯಕಿಯಾಗಿ ವಿದಿಶಾ ಚಿತ್ರರಂಗದಲ್ಲಿ ಸಕ್ಸಸ್ ಕಂಡಿದ್ದಾರೆ. ತೆಲುಗು, ಕನ್ನಡ, ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ.

ದರ್ಶನ್ 'ತಾರಕ್' ಮೊದಲ 3 ದಿನದಲ್ಲಿ ಗಳಿಸಿದ್ದೆಷ್ಟು?

2005 ರಿಂದ ನಟನೆ

2005ರಲ್ಲಿ 'ಅಭಿರಾಮಿ' ಚಿತ್ರದ ಮೂಲಕ ಬಣ್ಣ ಹಚ್ಚಿದ ವಿದಿಶಾ, 'ಅಲಾ', 'ಪ್ರೇಮ್', 'ಅಥ್ಲಿ ಸತ್ತಿಬಾಬು', 'ಕಥಾವರ್ಯನ್', 'ಲಕ್ಕಿ ಜೋಕರ್ಸ್', 'ದೇವರಾಯ' ಚಿತ್ರಗಳು ಸೇರಿದಂತೆ ಹಲವು ಚಿತ್ರದಲ್ಲಿ ನಟಿಸಿದ್ದರು.

ವಿಮರ್ಶೆ: ದರ್ಶನ್ ಇಮೇಜ್ ಬದಲಿಸಿದ 'ತಾರಕ್'

ದರ್ಶನ್ ಜೊತೆ ಯಾವ ಸಿನಿಮಾ?

2016 ರಲ್ಲಿ ಬಿಡುಗಡೆಯಾದ ವಿ'ರಾಟ್' ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಸಿನಿಮಾ ಮಾಡಿದ್ದರು. ಈ ಚಿತ್ರದಲ್ಲಿ ಮೂವರು ನಾಯಕಿಯರು ಪೈಕಿ ವಿದಿಶಾ ಕೂಡ ಒಬ್ಬರು. ಚೈತ್ರಾ ಮತ್ತು ಇಶಾ ಚಾವ್ಲಾ ಮತ್ತಿಬ್ಬರು ನಾಯಕಿಯರು.

ಹಿಂದಿ ಧಾರಾವಾಹಿಯಲ್ಲಿ ನಟನೆ

ಜೂನಿಯರ್ ಎನ್.ಟಿ.ಆರ್ ಅಭಿನಯಿಸಿದ್ದ 'ಜನತಾ ಗ್ಯಾರೆಜ್' ಚಿತ್ರದಲ್ಲಿ ವಿದಿಶಾ ಕೊನೆಯದಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ, ಹಿಂದಿಯ ಧಾರಾವಾಹಿಯೊಂದರಲ್ಲಿ ನಟಿಸುತ್ತಿದ್ದಾರೆ.

English summary
Shanvi Srivastava Sister Vidisha Srivastava has acted as heroine in Challenging Star Darshan's Viraat movie. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ವಿರಾಟ್' ಚಿತ್ರದಲ್ಲಿ ಶಾನ್ವಿ ಶ್ರೀವಾಸ್ತವ್ ಅವರ ಅಕ್ಕ ವಿದಿಶಾ ಶ್ರೀವಾಸ್ತವ್ ನಾಯಕಿಯಾಗಿ ಅಭಿನಯಿಸಿದ್ದರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada