For Quick Alerts
  ALLOW NOTIFICATIONS  
  For Daily Alerts

  ಕನ್ನಡದಲ್ಲಿ ಬೈದ ವಿದ್ಯಾ ಬಾಲನ್! ಎಲ್ಲಾ ಶ್ರೇಯ ದಾನಿಶ್ ಸೇಠ್‌ಗೆ

  |

  ಸದಾ ನಗುವ, ಮುದ್ದು ಮುಖದ ನಟಿ ವಿದ್ಯಾ ಬಾಲನ್ ಬೈದರೆ ಹೇಗಿರಬಹುದು? ಅದೂ ಕನ್ನಡದಲ್ಲಿ ಕೆಟ್ಟದಾಗಿ ಬೈದರೆ!

  Kushee Ravi Alias Dia Soup Photoshoot | Filmibeat Kannada

  ನಟಿ ವಿದ್ಯಾ ಬಾಲನ್ ಕನ್ನಡ ಸಿನಿಮಾದಲ್ಲಿ ನಟಿಸಿಲ್ಲ, ಆಕೆ ಕನ್ನಡತಿಯೂ ಅಲ್ಲ, ಆದರೂ ಆಕೆಗೆ ಕನ್ನಡದ ತುಸು ಪರಿಚಯ ಇದೆ. ಇತ್ತೀಚೆಗೆ ನಡೆದ ತಮಾಷೆಯ ಸಂವಾಂದದಲ್ಲಿ ವ್ಯಕ್ತಿಯೊಬ್ಬರಿಗೆ ಕನ್ನಡದಲ್ಲಿ ಬೈದಿದ್ದಾರೆ ವಿದ್ಯಾ. ಆದರೆ ಅದು ತಮಾಷೆಗಾಗಿಯಷ್ಟೆ.

  ನಟಿ ವಿದ್ಯಾ ಬಾಲನ್ ಕನ್ನಡದಲ್ಲಿ ಬೈಯ್ಯಲು ಮುಖ್ಯ ಕಾರಣ ನಟ, ರೆಡಿಯೋ ಜಾಕಿ, ವಿವಿಧ ಧ್ವನಿಗಳ ಗಾರುಡಿಗ ದಾನಿಶ್ ಸೇಠ್. ವಿದ್ಯಾ ಬಾಲನ್ ಕೆಟ್ಟದಾಗಿ ಬೈದದ್ದೂ ಸಹ ಇದೇ ದಾನಿಶ್ ಸೇಠ್‌ಗೆ ಆದರೆ ತಮಾಷೆಗಾಗಿಯಷ್ಟೆ.

  ಶಕುಂತಲಾದೇವಿ ಸಿನಿಮಾ ಬಿಡುಗಡೆ ಆಗಿದೆ

  ಶಕುಂತಲಾದೇವಿ ಸಿನಿಮಾ ಬಿಡುಗಡೆ ಆಗಿದೆ

  ನಟಿ ವಿದ್ಯಾ ಬಾಲನ್ ನಟನೆಯ 'ಶಕುಂತಲಾದೇವಿ' ಸಿನಿಮಾ ಇತ್ತೀಚೆಗಷ್ಟೆ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆಯಾಗಿ ಉತ್ತಮ ಪ್ರಕತಿಕ್ರಿಯೆ ಪಡೆದಿದೆ. ಬೆಂಗಳೂರಿನ ಶಕುಂತಲಾದೇವಿ ಬಗ್ಗೆ ವಿದ್ಯಾ ಸಿನಿಮಾ ಮಾಡಿರುವುದು ಕನ್ನಡಿಗರ ಮೆಚ್ಚುಗೆಗೂ ಕಾರಣವಾಗಿದೆ. ಇದರ ನೆವವಾಗಿ ದಾನಿಶ್ ಸೇಠ್ ತಮ್ಮ ಫೇಮಸ್ ಪಾತ್ರಗಳ ರೂಪದಲ್ಲಿ ವಿದ್ಯಾ ಜೊತೆ ಸಂವಾದ ಮಾಡಿದ್ದಾರೆ.

  ವಿದ್ಯಾ ಜೊತೆಗೆ ಆನ್‌ಲೈನ್ ಸಂವಾದ

  ವಿದ್ಯಾ ಜೊತೆಗೆ ಆನ್‌ಲೈನ್ ಸಂವಾದ

  ರಾಮಮೂರ್ತಿ, ಹೌಸ್‌ ಮೇಡ್ ಜಯಾ, ಜಯಾಳ ದೀದಿ, ಬೇವರ್ಸಿ ಕುಡುಕ, ಬೇಬ್ಸ್‌ ಹೀಗೆ ಹಲವು ಪಾತ್ರಗಳನ್ನು ಸೃಷ್ಟಿಸಿ ತಾವೇ ಆ ಎಲ್ಲಾ ಪಾತ್ರಗಳನ್ನು ಮಾಡುತ್ತಾ ಎಲ್ಲರನ್ನೂ ನಗಿಸುತ್ತಿರುವ ದಾನಿಶ್. ಅದೇ ತಮ್ಮ ಪಾತ್ರಗಳ ಮೂಲಕ ವಿದ್ಯಾ ಜೊತೆಗೆ ಆನ್‌ಲೈನ್‌ನಲ್ಲಿ ಸಂವಾದ ನಡೆಸಿದ್ದಾರೆ.

  ಜಯಾಳನ್ನು ಮುಂಬೈಗೆ ಆಹ್ವಾನಿಸಿದ ವಿದ್ಯಾ

  ಜಯಾಳನ್ನು ಮುಂಬೈಗೆ ಆಹ್ವಾನಿಸಿದ ವಿದ್ಯಾ

  ರಾಮಮೂರ್ತಿ, ಜಯಾ , ಬೇಬ್ಸ್‌, ಬೇಬ್ಸ್‌ನ ಪೋಲಿ ಬಾಯ್‌ಫ್ರೆಂಡ್‌ ಎಲ್ಲರೊಟ್ಟಿಗೆ ವಿದ್ಯಾ ನಗುತ್ತಲೇ ಮಾತನಾಡಿದ್ದಾರೆ. ಜಯಾಳನ್ನಂತೂ ಮುಂಬೈನ ತಮ್ಮ ಮನೆಗೆ ಬಂದು ಬಿಡಲು ಸಹ ಆಹ್ವಾನಿಸಿದರು. ಆದರೆ ಬೇವರ್ಸಿ ಕುಡುಕನನ್ನು ಮಾತ್ರ ಬೈದುಬಿಟ್ಟರು ವಿದ್ಯಾ.

  ಬೇವರ್ಸಿ ಕುಡುಕನನ್ನು ಬೈದ ವಿದ್ಯಾ

  ಬೇವರ್ಸಿ ಕುಡುಕನನ್ನು ಬೈದ ವಿದ್ಯಾ

  ಬೇವರ್ಸಿ ಕುಡುಕ, ಮ್ಯಾತ್ಸ್‌ ಅನ್ನು ಮ್ಯಾಡ್ಸ್‌ ಎಂದಾಗ ಸಿಟ್ಟಾದ ವಿದ್ಯಾ, 'ಥೂ ಬೇವರ್ಸಿ ಕುಡುಕ ಅದು ಮ್ಯಾಡ್ಸ್ ಅಲ್ಲ ಮ್ಯಾತ್ಸ್‌ ಹೋಗು ಇಲ್ಲಿಂದ' ಎಂದು ಬೈದರು. ಒಟ್ಟಾರೆ ದಾನಿಶ್ ಸೇಠ್ ಹಾಗೂ ವಿದ್ಯಾ ನಡುವನ ಸಂವಾದ ಚೆನ್ನಾಗಿತ್ತು. ವಿದ್ಯಾ ಬೇರ್ವಸಿ ಕುಡುಕನ ಅಭಿಮಾನಿ ಸಹ ಅಂತೆ. ಪುನೀತ್ ರಾಜ್‌ ಕುಮಾರ್ ಸಹ ಮೊನ್ನೆಯಷ್ಟೆ ಬೇವರ್ಸಿ ಕುಡುಕನನ್ನು ಬೈದಿದ್ದರು.

  English summary
  Actress Vidya Balan did fun online conversation with Danish Sait. Vidya Balan scold Danish in Kannada for fun.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X