ಪತಿಯ ಶ್ರಮ ಕಂಡು ಮತ್ತೆ ಪ್ರೀತಿಯಲ್ಲಿ ಬಿದ್ದ ವಿದ್ಯಾ ಶ್ರೀ ಮುರಳಿ

By Pavithra

ರೋರಿಂಗ್ ಸ್ಟಾರ್ ಶ್ರೀ ಮುರಳಿ ಸದ್ಯ ಕನ್ನಡದ ಸ್ಟಾರ್ ನಟರ ಲೀಸ್ಟ್ ನಲ್ಲಿರುವ ನಾಯಕ. ಕಮರ್ಷಿಯಲ್ ಸಿನಿಮಾಗಳನ್ನೇ ವಿಭಿನ್ನ ರೀತಿಯಲ್ಲಿ ಪ್ರೇಕ್ಷಕರ ಮುಂದೆ ತರುವಂತಹ ನಿರ್ದೇಶಕರನ್ನು ಮತ್ತು ತಂಡವನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ಕಲಾವಿದ.

ಫ್ಯಾಮಿಲಿ ಎಂಟರ್ಟೈನ್ಮೆಂಟ್ ಆದರೂ ಸರಿ ಕಮರ್ಷಿಯಲ್ ಚಿತ್ರವಾದರೂ ಸರಿ ಎಲ್ಲಾ ರೀತಿಯ ಸಿನಿಮಾಗಳಲ್ಲಿಯೂ ಅಭಿನಯಿಸಿ ಸೈ ಎನ್ನಿಸಿಕೊಳ್ಳುವ ಕಲಾವಿದ ಶ್ರೀ ಮುರಳಿ. 'ಉಗ್ರಂ', 'ರಥಾವರ', ಮಫ್ತಿ ಸಿನಿಮಾಗಳ ನಂತರ ಶ್ರೀ ಮುರಳಿ ಅವರ ಲೀಸ್ಟ್ ನಲ್ಲಿ ಅಭಿಮಾನಿಗಳು ಮತ್ತಷ್ಟು ಹೆಚ್ಚಾಗಿದ್ದಾರೆ.

ಹಾಗೆ ಶ್ರೀ ಮುರಳಿ ತಮ್ಮ ವೃತ್ತಿ ಜೀವನಕ್ಕೆ ಸಮಯ ನೀಡುವಷ್ಟೇ ಕಾಲವಕಾಶವನ್ನು ವಯಕ್ತಿಕ ಜೀವನಕ್ಕೂ ನೀಡುತ್ತಾರೆ. ಮಕ್ಕಳು ಹಾಗೂ ಪತ್ನಿಯ ಜೊತೆ ಆರಾಮಾಗಿ ಕಾಲಕಳೆಯುತ್ತಾರೆ. ಶ್ರೀ ಮುರಳಿ ಪತ್ನಿ ವಿದ್ಯಾ ಶ್ರೀ ಮುರಳಿ ಕೂಡ ಪತಿಯ ಮೇಲೆ ಹೆಚ್ಚು ಕಾಳಜಿ ಪ್ರೀತಿ ತೋರಿಸುತ್ತಾರೆ. ಇತ್ತೀಚಿಗಷ್ಟೆ ನಡೆದ ಒಂದು ಸಂಗತಿ ಶ್ರೀ ಮುರಳಿ ಮೇಲಿನ ಪ್ರೀತಿಯನ್ನು ಮತ್ತಷ್ಟು ಹೆಚ್ಚು ಮಾಡಿದೆ. ಯಾವುದು ಆ ಸಂಗತಿ ಅಂತೀರಾ? ಮುಂದೆ ಓದಿ

ಹತ್ತು ವರ್ಷದ ನಂತರ ಮತ್ತೆ ಪ್ರೀತಿಯಲ್ಲಿ

ಹತ್ತು ವರ್ಷದ ನಂತರ ಮತ್ತೆ ಪ್ರೀತಿಯಲ್ಲಿ

ಶ್ರೀ ಮುರಳಿ ಹಾಗೂ ವಿದ್ಯಾ ಶ್ರೀ ಮುರಳಿ ಸ್ಯಾಂಡಲ್ ವುಡ್ ನಲ್ಲಿ ಕ್ಯೂಟ್ ಜೋಡಿಗಳಲ್ಲೊಂದು. ಹತ್ತು ವರ್ಷ ಸುಖ ಸಂಸಾರ ನಡೆಸಿರುವ ಈ ಜೋಡಿಗೆ ಮತ್ತೆ ಪ್ರೀತಿ ಆಗಿದೆ. ಅದರಲ್ಲಿಯೂ ಮುರಳಿ ಅವರ ಶ್ರಮ ಕಂಡು ಪತ್ನಿ ಪ್ರೀತಿ ದುಪ್ಪಟ್ಟಾಗಿದೆ.

ರಾಜಸ್ಥಾನ ಬೀದಿಯ ನೆರಳಿನಲ್ಲೇ ಮಲಗಿದ ನಟ

ರಾಜಸ್ಥಾನ ಬೀದಿಯ ನೆರಳಿನಲ್ಲೇ ಮಲಗಿದ ನಟ

ನಟ ಶ್ರೀ ಮುರಳಿ 'ಭರಾಟೆ' ಸಿನಿಮಾದ ಚಿತ್ರೀಕರಣಕ್ಕಾಗಿ ರಾಜಸ್ಥಾನಕ್ಕೆ ತೆರೆಳಿದ್ದಾರೆ. ಚಿತ್ರೀಕರಣದ ಸಮಯದಲ್ಲಿ ಬಿಡುವಿದ್ದಾಗ ಚಿತ್ರೀಕರಣ ಸ್ಥಳದಲ್ಲಿರುವ ಕೋಟೆ ಬೀದಿಯ ನೆರಳಿನಲ್ಲಿ ವಿಶ್ರಾಂತಿ ಪಡೆದಿದ್ದಾರೆ. ಸದ್ಯ ಈ ಫೋಟೋ ಮತ್ತು ವಿಡಿಯೋ ವೈರಲ್ ಆಗಿದೆ.

ಶ್ರೀ ಮುರಳಿ ಶ್ರಮಕ್ಕೆ ಹೆಚ್ಚಾಯ್ತು ಪ್ರೀತಿ

ಶ್ರೀ ಮುರಳಿ ಶ್ರಮಕ್ಕೆ ಹೆಚ್ಚಾಯ್ತು ಪ್ರೀತಿ

ಶ್ರೀ ಮುರಳಿ ಅವರ ಶೂಟಿಂಗ್ ಸ್ಥಳದಲ್ಲಿ ಫೋಟೋಗಳನ್ನು ಶೇರ್ ಮಾಡಿರುವ ವಿದ್ಯಾ ಶ್ರೀ ಮುರಳಿ ಈ ಬಗ್ಗೆ ಕೆಲವು ಸಾಲುಗಳನ್ನು ಬರೆದುಕೊಂಡಿದ್ದಾರೆ. "ಯಾವತ್ತಿಗೂ ಇಂದಿನ ದಿನ ಹೇಗಿತ್ತು ಎಂದರೆ ಚೆನ್ನಾಗಿತ್ತು ಎನ್ನುವುದನ್ನು ಮಾತ್ರ ಹೇಳುತ್ತಿದ್ದರು. ಎಂದಿಗೂ ಯಾವುದರ ಬಗ್ಗೆಯೂ ದೂರು ಹೇಳಿಲ್ಲ. ಆದರೆ ಈ ಫೋಟೋಗಳು ನಿಮ್ಮ ಬಗ್ಗೆ ಹೇಳುತ್ತಿವೆ, ನಮಗಾಗಿ ಇಷ್ಟೆಲ್ಲಾ ಶ್ರಮ ಪಡುತ್ತಿರುವ ನಿಮ್ಮ ಬಗ್ಗೆ ಹೆಮ್ಮೆ ಆಗುತ್ತಿದೆ". ಎಂದಿದ್ದಾರೆ.

ರಾಜಸ್ಥಾನದಲ್ಲಿ ಭರಾಟೆ ಚಿತ್ರೀಕರಣ

ರಾಜಸ್ಥಾನದಲ್ಲಿ ಭರಾಟೆ ಚಿತ್ರೀಕರಣ

ಶ್ರೀ ಮುರಳಿ ಅಭಿನಯದ 'ಭರಾಟೆ' ಸಿನಿಮಾ ಚಿತ್ರೀಕರಣ ರಾಜಸ್ಥಾನದಲ್ಲಿ ನಡೆಯುತ್ತಿದೆ. ಚೇತನ್ ಕುಮಾರ್ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು ಸುಪ್ರಿತ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಶ್ರೀಲೀಲಾ ಚಿತ್ರದಲ್ಲಿ ನಾಯಕಿಯಾಗಿ ಅಭಿನಯ ಮಾಡುತ್ತಿದ್ದಾರೆ.

More from Filmibeat

English summary
Sri Murali's wife shared a photo taken during the filming of the Bharate film. Vidya Sri Murali is proud to see the efforts of Sri Murali.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X