ಯಾವುದೇ ಮುಜುಗರವಿಲ್ಲದೇ ಈ ವಿಚಾರ ಹಂಚಿಕೊಳ್ಳುತ್ತಿದ್ದೇನೆ, ಶ್ರೀಮುರಳಿ ಪತ್ನಿಯ ಭಾವನಾತ್ಮಕ ಬರಹ..!
ಪ್ರೀತಿ ಎನ್ನುವುದು ಗುರು ಇಲ್ಲದೆ ಕಲಿಯುವ ವಿದ್ಯೆ ಎಂದು ಹೇಳುತ್ತಾರೆ. ಯಾರೂ ತಿಳಿಸಿ ಕೊಡದ ಈ ವಿದ್ಯೆಯನ್ನು ವ್ಯಕ್ತಿ ತನ್ನ ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳುತ್ತಾನೆ ಎನ್ನುವುದೇ ಮುಖ್ಯವಾದ ಸಂಗತಿ. ನನ್ನ ಜೀವ ಎನ್ನುವ ಪ್ರೀತಿಯ ಭಾವನೆಯು ರಕ್ಷಣೆಯ ಭರವಸೆ ಪಡೆದುಕೊಂಡಾಗ ವ್ಯಕ್ತಿಗಳ ನಡುವೆ ಪ್ರೀತಿ ಗಟ್ಟಿಯಾಗುತ್ತೆ. ಪ್ರೀತಿ ಎನ್ನುವ ಒಂದು ಉತ್ತಮ ಭಾವನೆ ಯಶಸ್ಸನ್ನು ಪಡೆದುಕೊಳ್ಳಲು ಪ್ರೇರೇಪಿಸುತ್ತೆ. ಇದಕ್ಕೆ ಕನ್ನಡ ಚಿತ್ರರಂಗದ ರೋರಿಂಗ್ ಸ್ಟಾರ್ ಶ್ರೀಮುರಳಿ ಮತ್ತು ಅವರ ಪತ್ನಿ ವಿದ್ಯಾ ಅತ್ಯುತ್ತಮ ಉದಾಹರಣೆ.
ಹೌದು, ಕಾಲೇಜ್ ನಲ್ಲಿ ಓದುತ್ತಾ ಓದುತ್ತಾ ಪ್ರೀತಿಯಲ್ಲಿ ಬಿದ್ದ ಶ್ರೀಮುರಳಿ ಸರಿಯಾಗಿ 25 ವರ್ಷಗಳ ಹಿಂದೆ ಅಂದರೆ ಡಿಸೆಂಬರ್ 30-1999ರಂದು ತಮಗಿಂತ ಒಂದು ವರ್ಷ ಜೂನಿಯರ್ ಆಗಿದ್ದ ವಿದ್ಯಾ ಅವರಿಗೆ ಪ್ರಪೋಸ್ ಮಾಡಿದ್ದರು. ನಾನು ನಿನ್ನ ಪ್ರೀತಿಸುತ್ತಿದ್ದೇನೆ, ಮದ್ವೆ ಕೂಡ ಆಗಬೇಕೆಂದುಕೊಂಡಿದ್ದೇನೆ. ಹೊಸ ವರ್ಷ ಶುರುವಾಗೋಕೆ ಇನ್ನೂ ಸಮಯ ಇದೆ. ಮನೆಗೆ ಹೋಗಿ ಕಾಲ್ ಮಾಡ್ತೀನಿ ನೀನು ನನ್ನ ಕರೆ ಸ್ವೀಕರಿಸಿದರೆ ನಿನ್ನ ಒಪ್ಪಿಗೆ ಇದೆ ಎಂದರ್ಥ ಎಂದು ಹೇಳಿ ಅಲ್ಲಿಂದ ಹೋಗಿದ್ದರು.

ಹೀಗೆ ಅಂದು ಶುರುವಾದ ಇವರ ಪ್ರೀತಿಗೆ ಈಗ 25ರ ಹರೆಯ. ಹೀಗಾಗಿ ತಮ್ಮ ಖುಷಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಶ್ರೀಮುರಳಿ ಅವರ ಪತ್ನಿ ವಿದ್ಯಾ ನಿನ್ನಂತಹ ವ್ಯಕ್ತಿಯನ್ನು ಪಡೆಯಲು ನಾನು ಪುಣ್ಯ ಮಾಡಿದ್ದೇ ಎಂದಿದ್ದಾರೆ. ಈ 25 ವರ್ಷಗಳ ಸುಧೀರ್ಘ ಪ್ರಯಾಣವನ್ನು ನೆನೆದು ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ
ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ವಿದ್ಯಾ ಡಿಸೆಂಬರ್ 30-1999ರಂದು ಐ ಲವ್ ಯು ಎಂದು ನನಗೆ ಹೇಳಿದ್ದಕ್ಕೆ ಧನ್ಯವಾದ. ಥ್ಯಾಂಕ್ ಯು ನನ್ನನ್ನು ಖುಷಿ ಪಡಿಸಿರುವುದಕ್ಕೆ. ಥ್ಯಾಂಕ್ ಯು ನನ್ನ ಮೇಲೆ ಯಾವುದೇ ದೊಡ್ಡ ಭಾರ ಹಾಕದೇ ಇರುವುದಕ್ಕೆ, ಥ್ಯಾಂಕ್ ಯು ರಸ್ತೆ ದಾಟುವಾಗ ನನ್ನ ಕೈ ಹಿಡಿದು ನಡೆದಿರುವುದಕ್ಕೆ, ಥ್ಯಾಂಕ್ ಯು ನನ್ನ ಇಷ್ಟವಾದ ಚಿಕನ್ ಮತ್ತು ಕೇಕ್ ಉಳಿಸಿದ್ದಕ್ಕೆ, ಥ್ಯಾಂಕ್ ಯು ನನ್ನ ನೈಟ್ ಸ್ಟ್ಯಾಂಡ್‌ನಲ್ಲಿ ಪ್ರತಿ ದಿನ ರಾತ್ರಿ ನೀರು ಇಟ್ಟಿದ್ದಕ್ಕೆ, ಥ್ಯಾಂಕ್ ಯು ಸರಿಯಾದ ಸಮಯಕ್ಕೆ ಔಷದಿಗಳನ್ನು ತೆಗೆದುಕೊಳ್ಳಲು ನೆನಪು ಮಾಡಿದ್ದಕ್ಕೆ, ಥ್ಯಾಂಕ್ ಯು ನನ್ನ ಕೂದಲು ಕೆದರಿದಾಗ ಸರಿ ಪಡಿಸಿದ್ದಕ್ಕೆ, ಥ್ಯಾಂಕ್ ಯು ನನ್ನ ಕಷ್ಟದ ದಿನಗಳಲ್ಲಿ ನನ್ನ ಜೊತೆ ನಿಂತಿದ್ದಕ್ಕೆ, ಥ್ಯಾಂಕ್ ಯು ನನ್ನನ್ನೂ ನಗಿಸಿದ್ದಕ್ಕೆ, ಥ್ಯಾಂಕ್ ಯು ಜಗಳವನ್ನು ಬೇಗ ನಿಲ್ಲಿಸಿದ್ದಕ್ಕೆ, ಥ್ಯಾಂಕ್ ಯು ಹಾರರ್ ಚಿತ್ರಗಳನ್ನು ನೋಡಿದ ನಂತರ ನನಗೆ ನಿದ್ದೆ ಬಾರದಿದ್ದಾಗ ನನ್ನ ಜೊತೆ ಎದ್ದು ಕುಳಿತುಕೊಳ್ಳುವುದಕ್ಕೆ, ನನಗೆಂದು ನೀನು ಮಾಡುವ ಚಿಕ್ಕ ಚಿಕ್ಕ ಕೆಲಸಗಳಿಗೆ ಥ್ಯಾಂಕ್ ಯು ಎಂದು ಬರೆದುಕೊಂಡಿದ್ದಾರೆ.
ಮುಂದುವರೆದು ತಾಯಿ ತನ್ನ ಮಕ್ಕಳನ್ನು ಪ್ರೀತಿಸುವಂತೆ ನನ್ನನ್ನು ಪ್ರೀತಿಸಿ ಮುದ್ದು ಮಾಡುವುದಕ್ಕೆ ಥ್ಯಾಂಕ್ ಯು ಎಂದಿರುವ ವಿದ್ಯಾ, ನನಗೆ ಹುಶಾರಿಲ್ಲದಿದ್ದಾಗ ಯಾವುದೇ ನರ್ಸ್ ಇಟ್ಟುಕೊಳ್ಳದೇ ನೀವೇ ನನ್ನನ್ನು ನೋಡಿಕೊಂಡಿರುವುದಕ್ಕೆ ಥ್ಯಾಂಕ್ ಯು ಎಂದಿದ್ದಾರೆ. ನಡೆಯಲು ಕಷ್ಟ ಪಡುತ್ತಿದ್ದ ನನಗೆ ಸ್ನಾನ ಮಾಡಿಸಿರುವುದಕ್ಕೆ, ಬಾತ್‌ರೂಮ್ ಹೋಗಲು ಸಹಾಯ ಮಾಡಿದ್ದಕ್ಕೆ, ನನ್ನನ್ನು ಕ್ಲೀನ್ ಮಾಡಿದ್ದಕ್ಕೆ ಥ್ಯಾಂಕ್ ಯು ಎಂದಿದ್ದಾರೆ. ಯಾವುದೇ ಮುಜುಗರವಿಲ್ಲದೆ ನಾನು ಈ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದೇನೆ ಯಾಕೆಂದರೆ ನಿಮ್ಮ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ ಎಂದು ಹೇಳಿದ್ದಾರೆ. ನಿಮ್ಮಂತ ದಯಾಳು ಮತ್ತು ಉತ್ತಮವಾದ ವ್ಯಕ್ತಿಯನ್ನು ಪಡೆದ ನಾನೇ ಅದೃಷ್ಟವಂತೆ ಎಂದಿದ್ದಾರೆ.


Click it and Unblock the Notifications











