ಪೊಲೀಸರ ನೋಟಿಸ್‌ಗೆ ಕ್ಯಾರೇ ಎನ್ನದ ಕನ್ನಡ ಚಿತ್ರರಂಗದ ನಟಿ..!

ಕನ್ನಡ ಚಿತ್ರರಂಗದಲ್ಲಿ ಸರಿಸುಮಾರು 500ಕ್ಕೂ ಅಧಿಕ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಮಿಂಚಿದವರು ಶಶಿಕಲಾ. ತೀರಾ ಚಿಕ್ಕ ವಯಸ್ಸಿನಲ್ಲಿಯೇ ಗಂಡನನ್ನು ಕಳೆದುಕೊಂಡ ಶಶಿಕಲಾ ಮಗನನ್ನು ಸಾಕಿ ಬೆಳಸಲು ಚಿತ್ರರಂಗಕ್ಕೆ ಬಂದರು. ನಟನಾ ವೃತ್ತಿಯನ್ನು ಶುರು ಮಾಡಿದರು.

ಇಂಥಾ ಶಶಿಕಲಾ ವಿರುದ್ಧ ಮೊನ್ನೆ ಇವರ ಎರಡನೇ ಗಂಡ ಡಿಜೆ ಹರ್ಷವರ್ಧನ ಅಲಿಯಾಸ್ ವಿಜಯ ಭಾರ್ಗವ ವಿದ್ಯಾರಣ್ಯಪುರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ನನ್ನನ್ನು ಬೆದರಿಸಿ ಬಲವಂತದಿಂದ ಮದುವೆಯಾಗಿದ್ದಾರೆ ಎಂದು ಹೇಳಿದ್ದರು. ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ದೂರು ಸಲ್ಲಿಸಿದ್ದರು. ಈ ಹಿನ್ನೆಲೆ ವಿದ್ಯಾರಣ್ಯಪುರ ಪೊಲೀಸರು ಶಶಿಕಲಾ ವಿರುದ್ದ ನೋಟಿಸ್ ಜಾರಿ ಮಾಡಿದ್ದರು.

vidyaranyapura-police-issued-a-second-notice-to-actress-sashikala-in-her-husbands-harassment-case

ಆದರೆ, ಶಶಿಕಲಾ ಮಾತ್ರ ಪೊಲೀಸರ ನೋಟಿಸ್‌ಗೆ ಕ್ಯಾರೇ ಎಂದಿಲ್ಲ. ವಿಚಾರಣೆಗೆ ಹಾಜರಾಗಿಲ್ಲ. ಹೀಗಾಗಿಯೇ ಪೊಲೀಸರು ಈಗ ಶಶಿಕಲಾ ವಿರುದ್ದ ಮತ್ತೊಂದು ನೋಟಿಸ್ ಜಾರಿ ಮಾಡಿದ್ದಾರೆ. ಇದಕ್ಕೂ ಹಾಜರಾಗದಿದ್ದರೆ ಮೂರನೇ ಬಾರಿ ನೋಟಿಸ್ ನೀಡಬಹುದು. ಒಂದು ವೇಳೆ ಮೂರನೇ ನೋಟಿಸ್‌ಗೂ ಉತ್ತರ ಕೊಡದಿದ್ದರೆ ಅರೆಸ್ಟ್ ಮಾಡುವ ಸಾಧ್ಯತೆ ಇರುತ್ತದೆ. ಶಶಿಕಲಾ ಇಂತಹ ತಪ್ಪನ್ನು ಮಾಡಲಾರರು ಎನ್ನುವ ನಂಬಿಕೆ ಸದ್ಯ ಪೊಲೀಸರಿಗೆ ಇದೆ.

ಇನ್ನು ಹೆಂಡತಿ ವಿರುದ್ದ ಆರೋಪ ಮಾಡಿರುವ ಹರ್ಷವರ್ಧನ್‌ ಅವರ ವಿಚಾರಣೆಯನ್ನು ಪೊಲೀಸರು ಮಾಡಿದ್ದಾರೆ.ಈ ಸಮಯದಲ್ಲಿ ತಾವು ಮಾಡಿದ ಆರೋಪಕ್ಕೆ ಹರ್ಷವರ್ಧನ್ ಸೂಕ್ತವಾದ ಸಾಕ್ಷ್ಯಗಳನ್ನು ನೀಡಿಲ್ಲ ಎನ್ನುವ ಮಾಹಿತಿ ಇದೆ. ಈ ಹಿನ್ನೆಲೆ ಸರಿಯಾದ ದಾಖಲೆಗಳನ್ನು ಒದಗಿಸುವಂತೆ ಪೊಲೀಸರು ಹೇಳಿದ್ದಾರೆ. ಪೊಲೀಸರ ಸೂಚನೆಯ ಮೇರೆಗೆ ದಾಖಲೆಗಳ ಸಮೇತ ಬರುವುದಾಗಿ ಹೇಳಿ ಹರ್ಷವರ್ಧನ್ ತೆರಳಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಇದರ ನಡುವೆ ಈಗ ಶಶಿಕಲಾ ವಿರುದ್ದ ಎರಡನೇ ನೋಟಿಸ್‌ನ ಪೊಲೀಸರು ಜಾರಿ ಮಾಡಿದ್ದಾರೆ.

ಅಂದ್ಹಾಗೇ ಶಶಿಕಲಾ ಮತ್ತು ಡಿಜೆ ಹರ್ಷವರ್ಧನ್ ಕೊರೊನಾ ಕಾಲದಲ್ಲಿ ಪರಿಚಯವಾಗಿದ್ದರು.ಪ್ರಜಾರಾಜ್ಯ ಎಂಬ ಚಿತ್ರವನ್ನು ಡಿಜೆ ಹರ್ಷವರ್ಧನ ಅಲಿಯಾಸ್ ವಿಜಯ ಭಾರ್ಗವ ನಿರ್ದೇಶನ ಮಾಡಿದ್ದರು.ನಾಯಕನ ಪಾತ್ರಕ್ಕೆ ಕೂಡ ಬಣ್ಣ ಹಚ್ಚಿದ್ದರು. ಈ ಚಿತ್ರದಲ್ಲಿ ಶಶಿಕಲಾ ಕೂಡ ಕಾಣಿಸಿಕೊಂಡಿದ್ದರು. ಹೀಗೆ ಚಿತ್ರದ ನೆಪದಲ್ಲಿ ಪರಿಚಯರಾದ ಇಬ್ಬರು ಆ ನಂತರ ಸಹಬಾಳ್ವೆ ನಡೆಸಲು ಮುಂದಾದರು.

ಆದರೆ, ಆ ನಂತರ ಅದೊಂದು ದಿನ ಬೇರೆ ಹುಡುಗಿಯ ಹಿಂದೆ ಹರ್ಷವರ್ಧನ್ ಓಡಿ ಹೋಗಿದ್ದರು. ಈ ಸಮಯದಲ್ಲಿ ಶಶಿಕಲಾ ಪೊಲೀಸರಿಗೆ ದೂರನ್ನು ಕೂಡ ನೀಡಿದ್ದರು. ಈ ಸಮಯದಲ್ಲಿ ಕಾಡಿ ಬೇಡಿ ದೂರು ವಾಪಸು ಪಡೆಯುವಂತೆ ಶಶಿಕಲಾ ಅವರಿಗೆ ಹೇಳಿದ್ದ ಹರ್ಷವರ್ಧನ್ ಆ ನಂತರ ರಿಜಿಸ್ಟರ್ ಮ್ಯಾರೇಜ್ ಆದರು ಎಂದೆಲ್ಲ ಸುದ್ದಿಯಾಗಿತ್ತು. ಆದರೆ ಈಗ ಶಶಿಕಲಾ ವಿರುದ್ಧ ಹರ್ಷವರ್ಧನ್ ಪೊಲೀಸ್ ಠಾಣೆ ಮೆಟ್ಟಿಲನ್ನೇರಿದ್ದಾರೆ.

ಒಟ್ನಲ್ಲಿ ಸದ್ಯ ಶಶಿಕಲಾ ಅವರಿಗೆ ಪೊಲೀಸರು ಎರಡನೇ ನೋಟಿಸ್ ಜಾರಿ ಮಾಡಿದ್ದಾರೆ. ಈ ಎರಡನೇ ನೋಟಿಸ್‌ಗಾದರೂ ಶಶಿಕಲಾ ಉತ್ತರ ಕೊಡ್ತಾರಾ ? ವಿಚಾರಣೆಗೆ ಹಾಜರಾಗುತ್ತಾರಾ ? ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

Read more about: marriage filmibeat news complaint
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X