ವಿಯೆಟ್ನಾಂ ಬೀದಿಯಲ್ಲಿ ಗಳಗಳನೆ ಅತ್ತ ನಿವೇದಿತಾ ಗೌಡ -ಅಂತದ್ದೇನಾಯ್ತು?
ಚಿತ್ರರಂಗದಲ್ಲಿರುವ ಅನೇಕರು ಏನೇ ಮಾಡಿದರು ನೋಡುಗರಿಗದು ಎಲೆ ಅಡಿಕೆಯೇ. ಕೆಮ್ಮಿದರೂ ಸುದ್ದಿ, ಪಾರ್ಟಿ ಮಾಡಿದರೂ ಸುದ್ದಿ, ಬಿಕಿನಿ ಹಾಕಿಕೊಂಡರು ಸುದ್ದಿ, ಅಷ್ಟರ ಮಟ್ಟಿಗೆ ಸೆಲೆಬ್ರೆಟಿಗಳ ವ್ಯೆಯಕ್ತಿಕ ಬದುಕು ಮೂರಾ ಬಟ್ಟೆಯಾಗಿರುತ್ತೆ. ಇನ್ನು ಮದುವೆ ಆಗಿ ಆ ನಂತರ ವಿಚ್ಛೇದನವಾಗಿದ್ದರಂತೂ ಮುಗೀತು. ಕಾಲೆಳೆಯಲು ಅಂತಾನೇ ಇರುವ ಒಂದು ಗುಂಪು ಇವರ ಮೇಲೆ ನಿಗಾ ವಹಿಸಿರುತ್ತೆ. ಚೂರು ಎಲ್ಲಾದರೂ ಎಡವಿದರೂ ಸಾಕು ಟ್ರೋಲ್ ಮಾಡುತ್ತೆ.
ಹೀಗೆ ಟ್ರೋಲ್ ಆದಾಗೆಲ್ಲ ಕೆಲವರು ತಲೆ ಕೆಡಿಸಿಕೊಳ್ಳುತ್ತಾರೆ. ಸೈಬರ್ ಕ್ರೈಮ್ ಮೊರೆ ಹೋಗುತ್ತಾರೆ. ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಎಚ್ಚರಿಕೆ ನೀಡುತ್ತಾರೆ. ಇತಿಮಿತಿಯಲ್ಲಿ ಇರುವಂತೆ ಹೇಳುತ್ತಾರೆ. ಇನ್ನು ಹಲವರು ಚಲ್ತಾ ಹೈ ಎಂದು ಮುನ್ನಡೆಯುತ್ತಾರೆ. ಉದಾಹರಣೆಗೆ ನಿವೇದಿತಾ ಗೌಡ.

ಹೌದು. ಯಾರೇನೇ ಅಂದರು, ಎಷ್ಟೇ ಟೀಕೆ ಟಿಪ್ಪಣಿ ಮಾಡಿದರೂ, ಕಾಲೆಳೆದರೂ, ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಉಫ್ ಎಂದು ಮುಂದೆ ಸಾಗುವುದು ಬಹುಮುಖ ಪ್ರತಿಭೆ ನಿವೇದಿತಾ ಗೌಡ ಅವರ ಮೂಲ ಗುಣ.
ಯಾರೇ ಕೂಗಾಡಲಿ, ಬಾತ್ ರೂಮ್ ಅಲ್ಲಾಡಲಿ ಎನ್ನುವ ವ್ಯಕ್ತಿತ್ವವನ್ನು ರೂಢಿಸಿಕೊಂಡಿರುವ ನಿವೇದಿತಾ ಗೌಡ ಸದ್ಯ ಎಲ್ಲಿದ್ದಾರೆ ಎನ್ನುವುದು ಗೊತ್ತಿಲ್ಲವಾದರೂ ಇವರ ವಿಯೆಟ್ನಾಂ ಪ್ರವಾಸದ ವಿಡಿಯೋ ಒಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ನಡುರಾತ್ರಿಯಲ್ಲಿ ವಿಯೆಟ್ನಾಂನ ಬೀದಿಯಲ್ಲಿ ನಿಂತು ನಿವೇದಿತಾ ಗೌಡ ಒಂದೇ ಸಮನೆ ಕಣ್ಣೀರು ಹಾಕಿದ್ದಾರೆ. ನಿವೇದಿತಾ ಕಣ್ಣೀರು ಹಾಕುತ್ತಿರುವ ವಿಡಿಯೋವನ್ನು ಅವರ ಗೆಳತಿ ಪ್ರತಿಭಾ ಗೌಡ ಸೆರೆ ಹಿಡಿದಿದ್ದು, ನಿವೇದಿತಾ ಕಣ್ಣೀರು ಹಾಕುತ್ತಿದ್ದರೆ.. ಈ ಸ್ನೇಹಿತೆ ಪ್ರತಿಭಾ ಮಾತ್ರ ನಿರಾಳವಾಗಿ ಕುಂತಿದ್ದಾರೆ.
ಇನ್ನು ನಿವೇದಿತಾ ಗೌಡ ಇದೊಂದೇ ವಿಡಿಯೋವನ್ನು ಹಂಚಿಕೊಂಡಿಲ್ಲ. ಒಟ್ಟು 6 ವಿಡಿಯೋಗಳನ್ನು ಫೋಸ್ಟ್ ಮಾಡಿರುವ ನಿವೇದಿತಾ Postcards from Vietnam ಎಂದು ಕ್ಯಾಪ್ಷನ್ ನೀಡಿದ್ದಾರೆ. ಈ 6 ವಿಡಿಯೋಗಳಲ್ಲಿ ಒಂದು ವಿಡಿಯೋದಲ್ಲಿ ಕಣ್ಣೀರು ಹಾಕಿರುವ ನಿವೇದಿತಾ ಜೊತೆಯಲ್ಲಿ ಮೇಕಪ್ ಮಾಡಿಸಿಕೊಳ್ಳುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ಧಾರೆ. ಈ ಬೇರೆ ವಿಡಿಯೋಗಳ ಕುರಿತು ತಲೆ ಕೆಡಿಸಿಕೊಳ್ಳದ ಇವರ ಅಭಿಮಾನಿಗಳು ನಿವೇದಿತಾ ಗೌಡ ಕಣ್ಣೀರು ಹಾಕುತ್ತಿರುವ ವಿಡಿಯೋವನ್ನು ನೋಡಿ ಸದ್ಯ ಚಿಂತೆಯಲ್ಲಿ ಮುಳುಗಿದ್ದಾರೆ.

ಸದ್ಯ ಈ ವಿಡಿಯೋಗೆ ತರಹೇವಾರಿ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಕೆಲವರು ಏಕಾಏಕಿ ಯಾಕೆ ಕಣ್ಣೀರು ಹಾಕುತ್ತಿದ್ದೀರಾ..? ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೂ ಕೆಲವರು ತಮ್ಮ ಆತಂಕವನ್ನು ಕೂಡ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಚಂದನ್ ಶೆಟ್ಟಿ ಅವರಿಂದ ದೂರವಾದ ನಿವೇದಿತಾಗೆ ಈಗ ವಿರಹ ವೇದನೆ ಕಾಡುತ್ತಿದೆ, ಒಂಟಿತನ ಕಾಡುತ್ತಿದೆ, ಹೀಗಾಗಿ ಈ ಕಣ್ಣೀರಧಾರೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಅಂದ್ಹಾಗೇ ಕೆಲ ದಿನಗಳ ಹಿಂದೆಯಷ್ಟೇ ನಿವೇದಿತಾ ಗೌಡ ಇದೇ ಪ್ರತಿಭಾ ಗೌಡ ಅವರ ಜೊತೆ ''ವಿಯೆಟ್ನಾಂ'' ನಲ್ಲಿದ್ದರು. ತಮ್ಮ ಮೋಜು ಮಸ್ತಿಯ ವಿಡಿಯೋಗಳನ್ನು ಹಂಚಿಕೊಂಡಿದ್ದರು. ಈ ಪ್ರವಾಸದಲ್ಲಿ ಬಿಗ್ ಬಾಸ್ ಸೀಸನ್ 6ರ ಧನರಾಜ್, ಬಿಗ್ ಬಾಸ್ ಸೀಸನ್ 11ರ ರಜತ್ ಮತ್ತು ಅವರ ಪತ್ನಿ ಅಕ್ಷಿತಾ ಅಣ್ಣ ತಂಗಿ ಧಾರಾವಾಹಿಯ ಅಖಿಲಾ ಪ್ರಕಾಶ್ ಜೊತೆಯಾಗಿದ್ದರು. ವರೈಟಿ ವರೈಟಿ ರೀಲ್ಸ್‌ಗಳನ್ನು ಮಾಡಿ ಎಲ್ಲರೂ ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದರು.
ಇನ್ನುಳಿದಂತೆ ಸದ್ಯ ನಿವೇದಿತಾ ಗೌಡ ಚಿತ್ರರಂಗದಲ್ಲಿ ಒಂದೊಂದೆ ಹೆಜ್ಜೆ ಇಡುತ್ತಿದ್ದಾರೆ. ಮಾಜಿ ಪತಿ ಚಂದನ್ ಶೆಟ್ಟಿ ಜೊತೆ ''ಮುದ್ದು ರಾಕ್ಷಸಿ'' ಎಂಬ ಚಿತ್ರದಲ್ಲಿ ನಿವೇದಿತಾ ಗೌಡ ನಟಿಸಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಚಿತ್ರೀಕರಣ ಮುಗಿದಿದ್ದು ಶೀಘ್ರದಲ್ಲಿಯೇ ಚಿತ್ರ ತೆರೆಗೆ ಬರುವ ನಿರೀಕ್ಷೆ ಇದೆ. ಸೃಜನ್ ಲೊಕೇಶ್ ಜೊತೆ ನಿವೇದಿತಾ ಗೌಡ ಅಭಿನಯದ ''ಜಿಎಸ್‌ಟಿ'' ಚಿತ್ರ ಸದ್ಯದಲ್ಲಿಯೇ ತೆರೆಗೆ ಬರಲಿದೆ.


Click it and Unblock the Notifications











