ನಯನತಾರ ಗೆಳೆಯ ವಿಘ್ನೇಶ್ ಹಾಕಿರುವ ಪೋಸ್ಟ್ ಬಗ್ಗೆ ದೊಡ್ಡ ಚರ್ಚೆ

By Bharath Kumar

ಸಿನಿಮಾ ಲೋಕದಲ್ಲಿ ನಟ-ನಟಿಯರ ಲವ್ ಅಫೇರ್, ಮದುವೆ ಸುದ್ದಿಗಳು ಹರಿದಾಡುವುದು ಸಾಮಾನ್ಯ. ಅದೇ ರೀತಿ ಬಹುಭಾಷಾ ತಾರೆ ನಯನತಾರ ಅವರ ಮದುವೆ ವಿಚಾರವೂ ಆಗಾಗ ಸದ್ದು ಮಾಡುತ್ತಲೇ ಇರುತ್ತೆ.

ನಿರ್ದೇಶಕ ವಿಘ್ನೇಶ್ ಶಿವನ್ ಅವರ ಜೊತೆ ಡೇಟಿಂಗ್ ನಲ್ಲಿರುವ ನಯನತಾರ ಸದ್ಯದಲ್ಲೇ ಇವರ ಜೊತೆ ಹಸಮಣೆ ಏರಲಿದ್ದಾರೆ ಎನ್ನಲಾಗಿದೆ. ಆದ್ರೆ, ಇವರಿಬ್ಬರು ಎಲ್ಲಿಯೂ ಈ ಬಗ್ಗೆ ಹೇಳಿಕೊಂಡಿಲ್ಲ.

ಇದೀಗ, ನಿರ್ದೇಶಕ ವಿಘ್ನೇಶ್ ಶಿವನ್ ಅವರ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿರುವ ಒಂದು ಪೋಸ್ಟ್ ಮತ್ತೆ ಸಂಚಲನಕ್ಕೆ ಕಾರಣವಾಗಿದೆ. ನಯನತಾರ ಮತ್ತು ವಿಘ್ನೇಶ್ ಒಟ್ಟಿಗೆ ಇರುವ ಫೋಟೋ ಹಾಕಿ ''ನನಗೆ ಮದುವೆ ವಯಸ್ಸು ಬಂದು ಬಿಟ್ಟಿದೆ. ನಿನಗಾಗಿ ಎದುರು ನೋಡುತ್ತಿದ್ದೇನೆ'' ಅಡಿಬರಹ ಹಾಕಿದ್ದಾರೆ. ಇದು ಚರ್ಚೆಗೆ ಕಾರಣವಾಗಿದೆ.

Vignesh Shivn and Nayanthara post viral

ಮತ್ತೊಂದೆಡೆ ನಯನತಾರ ಅಭಿನಯದ 'ಕೋಲಮಾವು ಕೋಕಿಲಾ' ಚಿತ್ರದ 'ಕಲ್ಯಾಣ ವಯಸ್ಸು' ಎಂಬ ಹಾಡು ಬಿಡುಗಡೆಯಾಗಿದ್ದು, ಈ ಹಾಡು ಟ್ರೆಂಡಿಂಗ್ ನಲ್ಲಿದೆ. ಈ ಹಾಡಿನ ಮೊದಲ ಸಾಲನ್ನ ತಮ್ಮ ಫೋಟೋಗೆ ಅಡಿಬರಹವಾಗಿ ಹಾಕಿದ್ದಾರೆ.

ಇದೊಂದು ರೀತಿಯಲ್ಲಿ ಹಾಡಿನ ಪ್ರಮೋಷನ್ ಅಥವಾ ನಯನತಾರ ಅವರ ಜೊತೆಗಿನ ಸಂಬಂಧದ ಪ್ರತೀಕನಾ ಗೊತ್ತಾಗ್ತಿಲ್ಲ. ಆದ್ರೆ, ಇವರಿಬ್ಬರ ಸಂಬಂಧದ ಬಗ್ಗೆ ಮಾತ್ರ ಗುಸಗುಸು ಕೇಳಿಬರುತ್ತಿದೆ. ಇವರ ವರಸೆ ನೋಡಿದರೆ ಶೀಘ್ರದಲ್ಲೇ ಗಟ್ಟಿಮೇಳ ಮೊಳಗುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

More from Filmibeat

English summary
Director Vignesh Shivn, who has been rumoured to be dating actress Nayanthara for a last few years, seems to have openly proposed to her on social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X