For Quick Alerts
  ALLOW NOTIFICATIONS  
  For Daily Alerts

  ವಿಜಯ್ ಹುಟ್ಟುಹಬ್ಬಕ್ಕೆ 'ಪುಲಿ' ಟೀಸರ್ ಗಿಫ್ಟ್

  By Harshitha
  |

  ಕಾಲಿವುಡ್ ಸೂಪರ್ ಸ್ಟಾರ್, ಇಳಯದಳಪತಿ ವಿಜಯ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 41ನೇ ವಸಂತಕ್ಕೆ ಕಾಲಿಟ್ಟಿರುವ ವಿಜಯ್ ಜನ್ಮದಿನಕ್ಕೆ ಇನ್ನಷ್ಟು ಮೆರಗು ನೀಡುವುದಕ್ಕೆ 'ಪುಲಿ' ಟೀಸರ್ ರಿಲೀಸ್ ಆಗಿದೆ.

  ವಿಜಯ್-ಸುದೀಪ್-ಶ್ರೀದೇವಿ-ಶೃತಿ ಹಾಸನ್-ಹನ್ಸಿಕಾ ಮೋಟ್ವಾನಿ ರಂತಹ ದೊಡ್ಡ ತಾರಾಬಳಗ ಇರುವ 'ಪುಲಿ' ಟೀಸರ್ ಇಲ್ಲಿದೆ ನೋಡಿ...ನಿಮ್ಮ 'ಫಿಲ್ಮಿಬೀಟ್ ಕನ್ನಡ'ದಲ್ಲಿ.

  'ಪುಲಿ' ಚಿತ್ರದ ಬಗ್ಗೆ ಕನ್ನಡಿಗರು ಬಹುನಿರೀಕ್ಷೆ ಇಟ್ಟುಕೊಳ್ಳುವುದಕ್ಕೆ ಕಾರಣ ಕಿಚ್ಚ ಸುದೀಪ್. ಮೊದಲ ಬಾರಿಗೆ ವಿಜಯ್ ಜೊತೆ ತೆರೆ ಹಂಚಿಕೊಳ್ಳುತ್ತಿರುವ ಸುದೀಪ್, ತೆರೆಮೇಲೆ ಹೇಗೆ ಮಿಂಚುತ್ತಾರೆ ಅನ್ನೋದಕ್ಕೆ ಇಂದು ರಿಲೀಸ್ ಆಗಿರುವ ಟೀಸರ್ ಉತ್ತರ ನೀಡಿದೆ. [ಕಾಲಿವುಡ್ ನಲ್ಲಿ 'ಹುಲಿ'ಯಾದ ಕಿಚ್ಚ ಸುದೀಪ್!]

  ನೀಲಿ ಕಂಗಳಲ್ಲಿ ಸೇಡಿನ ಕಿಚ್ಚನ್ನು ಹೊರಹಾಕುತ್ತಾ, ಕೈಲಿ ಕತ್ತಿ ಹಿಡಿದು ಧೀರ ಯೋಧನಾಗಿ ಕಿಚ್ಚ ಸುದೀಪ್ ಮಿಂಚಿದ್ದಾರೆ. ಇನ್ನೂ ವಿಜಯ್ ಕೂಡ ಪರಾಕ್ರಮಿ ಆಗಿ ಸೂಪರ್ ಸ್ಟಂಟ್ಸ್ ಮಾಡಿದ್ದಾರೆ. [ವಾವ್..! ಕಾಲಿವುಡ್ ನಲ್ಲಿ ಸುದೀಪ್ 'ಪುಲಿ' ಆರ್ಭಟ]

  ಎರಡು ದಶಕಗಳ ನಂತ್ರ ಸುರಸುಂದರಿ ಶ್ರೀದೇವಿ, ತಮಿಳು ಚಿತ್ರರಂಗದ ಕಡೆಗೆ ಮುಖಮಾಡಿರುವುದು ಈ ಚಿತ್ರದಿಂದಲೇ. ಮಹಾರಾಣಿ ಆಗಿ ಶ್ರೀದೇವಿ ಕಾಣಿಸಿಕೊಂಡಿದ್ದರೆ, ಶೃತಿ ಹಾಸನ್ ಮತ್ತು ಹನ್ಸಿಕಾ ಮೋಟ್ವಾನಿ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ.

  ಮೊದಲ ನೋಟಕ್ಕೆ ಆಕ್ಷನ್-ಅಡ್ವೆಂಚರ್-ಫ್ಯಾಂಟಸಿ ಸಿನಿಮಾದಂತೆ ಕಾಣುವ 'ಪುಲಿ' ಚಿತ್ರಕ್ಕೆ ಚಿಂಬುದೇವನ್ ಆಕ್ಷನ್ ಕಟ್ ಹೇಳಿದ್ದಾರೆ. ಇಂದು ವಿಜಯ್ ಹುಟ್ಟುಹಬ್ಬದ ಪ್ರಯುಕ್ತ 'ಪುಲಿ' ಟೀಸರ್ ಬಿಡುಗಡೆ ಆಗಿದೆ. ಸದ್ಯದಲ್ಲೇ ಸಿನಿಮಾ ತೆರೆಗೆ ಬರಲಿದೆ.

  English summary
  Tamil Actor Ilayathalapathi Vijay is celebrating his 41st birthday today. On this occasion, Vijay and Kiccha Sudeep starrer Tamil Movie 'Puli' first look teaser is out. Watch the teaser here.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X