ಬಿಸಿಲಿನ ಬೇಗೆಗೆ ಬೇಸತ್ತು ಈ ಕೆಲಸ ಮಾಡಿದ್ರು ವಿಜಯ್ ದೇವರಕೊಂಡ

By Pavithra

ಬಿಸಿಲಿನ ಬೇಗೆ ಯಾರನ್ನು ಬಿಡುವುದಿಲ್ಲ .ಈ ವರ್ಷ ಸೂರ್ಯನ ತಾಪ ಸ್ವಲ್ಪ ಹೆಚ್ಚಾಗಿಯೇ ಇದೆ. ಬಿಸಿಲಿಗೆ ಸಾಮಾನ್ಯ ಜನರು, ಸೆಲಬ್ರೆಟಿಗಳು ಎನ್ನುವ ಬೇದ ಬಾವವಿಲ್ಲ. ಸಿನಿಮಾ ಸ್ಟಾರ್ ಗಳು ಬಿಸಿಲಿನ ಬೇಗೆಗೆ ಬೇಸತ್ತಿದ್ದಾರೆ.

ಬಿಸಿಲಿಗೆ ತಡೆದುಕೊಳ್ಳಲು ಸಾಧ್ಯವಿಲ್ಲದೆ ನಟ ವಿಜಯ್ ದೇವರಕೊಂಡ ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಬಿಸಿಲಿನ ಬೇಗೆಯಲ್ಲಿ ಸುಸ್ತಾಗಿರುವ ಕಾರ್ಮಿಕರಿಗೆ, ಟ್ರಾಫಿಕ್ ಪೋಲೀಸರಿಗೆ ಹಾಗೂ ವಿದ್ಯಾರ್ಥಿಗಳಿಗೆ ಉಚಿತವಾಗಿ ಐಸ್ ಕ್ರೀಂ ನೀಡಲು ನಿರ್ಧರಿಸಿದ್ದಾರೆ.

ಹೈದ್ರಾಬಾದ್ ನಲ್ಲಿ 'ದಿ ದೇವರಕೊಂಡ ಬರ್ತಡೇ ಟ್ರಕ್' ಎನ್ನುವ ಹೆಸರಿನಲ್ಲಿ ಮೂರು ಗಾಡಿಗಳು ಹೈದ್ರಾಬಾದ್ ನಲ್ಲಿ ಓಡಾಡುತ್ತಿವೆ. ಬಿಸಿಲು ಹೆಚ್ಚಾಗಿರುವುದನ್ನ ಅರಿತುಕೊಂಡಿರುವ ವಿಜಯ್ ಈ ನಿರ್ಧಾರ ಮಾಡಿದ್ದಾರೆ.

Vijay Devakon has bought three ice cream trucks to distribute free ice cream

ಈ ಬಗ್ಗೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ವಿಜಯ್ ದೇವರಕೊಂಡ ನಿಮಗೆ ಐಸ್ ಕ್ರೀಂ ಗಾಡಿ ಸಿಕ್ಕಿದರೆ, ಒಂದು ಸೆಲ್ಫಿಯನ್ನ ನನಗೆ ಕಳುಹಿಸಿ. ನಾನು ನಿಮ್ಮ ಮುಖದಲ್ಲಿನ ಸಂತೋಷ ನೋಡಬೇಕು ಎಂದಿದ್ದಾರೆ. ಸಿನಿಮಾ ನಾಯಕರು ಕೇವಲ ತಮ್ಮ ಒಳಿತನ್ನು ಮಾತ್ರ ಯೋಚಿಸದೇ ಜನ ಸಾಮಾನ್ಯರ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುವುದು ಖುಷಿಯ ವಿಚಾರ.

English summary
Telugu actor Vijay Devakon has bought three ice cream trucks to give free ice cream to street bearers, traffic policemen and students in Hyderabad. He wrote about this on Twitter.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X