For Quick Alerts
  ALLOW NOTIFICATIONS  
  For Daily Alerts

  ವಿಜಯ್ ದೇವರಕೊಂಡರನ್ನ ಮೀರಿಸುವತ್ತಾ ಆನಂದ್ ದೇವರಕೊಂಡ.!

  |

  'ಅರ್ಜುನ್ ರೆಡ್ಡಿ' ಸಿನಿಮಾ ಬಂದ್ಮೇಲೆ ವಿಜಯ್ ದೇವರಕೊಂಡ ಹೆಸರು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತ್ತು. ಅದಕ್ಕೂ ಮುಂಚೆ 'ಪೆಳ್ಳಿಚೂಪುಲು' ಎಂಬ ಸಿನಿಮಾ ಮಾಡಿದ್ದರೂ 'ಅರ್ಜುನ್ ರೆಡ್ಡಿ' ತಂದುಕೊಟ್ಟ ಖ್ಯಾತಿ ಅಷ್ಟಿಷ್ಟಲ್ಲ.

  ಅದಾದ ಬಳಿಕ 'ಗೀತಾ ಗೋವಿಂದಂ' ಎಂಬ ಸಿನಿಮಾ ಬಂತು. ಈ ಸಿನಿಮಾನೂ ಸೂಪರ್ ಹಿಟ್ ಆಯ್ತು. ವಿಜಯ್-ರಶ್ಮಿಕಾ ಕಾಂಬಿನೇಷನ್ ಗೆ ಸಿನಿರಸಿಕರು ಫುಲ್ ಫಿದಾ. ಇಲ್ಲಿಂದ ವಿಜಯ್ ದೇವರಕೊಂಡ ಅಂದ್ರೆ ಹೊಸ ಬ್ರಾಂಡ್ ಹುಟ್ಟಿಕೊಳ್ತು. ಈಗ ಸ್ಟಾರ್ ನಟರನ್ನ ಮೀರಿಸುವಂತಹ ಅಭಿಮಾನಿ ಬಳಗ ಬೆಳೆಯುತ್ತಿದೆ.

  ವಿಜಯ ದೇವರಕೊಂಡಗೆ ಅಭಿಮಾನಿ ಅಂತೆ ಶಿವಣ್ಣ: ಯಾಕ್ ಗೊತ್ತಾ.?

  ಹೀಗೆ, ಬಹಳ ಕಡಿಮೆ ಸಮಯದಲ್ಲಿ ಬಹುದೊಡ್ಡ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡ ವಿಜಯ್ ದೇವರಕೊಂಡಗೆ ಈಗ ಅವರ ಸಹೋದರ ಆನಂದ್ ದೇವರಕೊಂಡ ಸಾಥ್ ಕೊಡಲು ಬರ್ತಿದ್ದಾರೆ. ಹೌದು, 'ಅರ್ಜುನ್ ರೆಡ್ಡಿ' ತಮ್ಮ ಆನಂದ್ ಈಗ ಬೆಳ್ಳಿತೆರೆ ಮೇಲೆ ಮೋಡಿ ಮಾಡಲು ಸಜ್ಜಾಗಿದ್ದಾರೆ. ಯಾವ ಸಿನಿಮಾ? ಮುಂದೆ ಓದಿ.....

  'ದೊರಸಾನಿ' ಚಿತ್ರದಲ್ಲಿ ದೇವರಕೊಂಡ ಬ್ರದರ್.!

  'ದೊರಸಾನಿ' ಚಿತ್ರದಲ್ಲಿ ದೇವರಕೊಂಡ ಬ್ರದರ್.!

  ಕೆವಿಆರ್ ಮಹೇಂದ್ರ ನಿರ್ದೇಶಿಸುತ್ತಿರುವ 'ದೊರಸಾನಿ' ಚಿತ್ರದ ಮೂಲಕ ವಿಜಯ್ ದೇವರಕೊಂಡ ತಮ್ಮ ಆನಂದ್ ದೇವರಕೊಂಡ ಸಿನಿಮಾ ಇಂಡಸ್ಟ್ರಿಗೆ ಲಗ್ಗೆಯಿಡ್ತಿದ್ದಾರೆ. ಈ ಚಿತ್ರದ ಟೀಸರ್ ಈಗ ರಿಲೀಸ್ ಗೆ ರೆಡಿಯಾಗಿದ್ದು, ಕುತೂಹಲ ಹುಟ್ಟುಹಾಕಿದೆ.

  ಕನ್ನಡಕ್ಕೆ ಬಂದ ವಿಜಯ್ ದೇವರಕೊಂಡ: ರಶ್ಮಿಕಾ ಮಂದಣ್ಣ ನಾಯಕಿ.!

  ಸ್ಟಾರ್ ನಟನ ಮಗಳು ನಾಯಕಿ

  ಸ್ಟಾರ್ ನಟನ ಮಗಳು ನಾಯಕಿ

  ಅಂದ್ಹಾಗೆ, ಆನಂದ್ ದೇವರಕೊಂಡ ನಾಯಕನಾಗಿ ಅಭಿನಯಿಸುತ್ತಿರುವ 'ದೊರಸಾನಿ' ಚಿತ್ರಕ್ಕೆ ತೆಲುಗು ಹಿರಿಯ ನಟ ರಾಜಶೇಖರ್ ಅವರ ಪುತ್ರಿ ಶಿವಾತ್ಮಿಕ ನಾಯಕಿಯಾಗಿದ್ದಾರಂತೆ. ಶಿವಾತ್ಮಿಕಗೂ ಕೂಡ ಇದು ಮೊದಲ ಸಿನಿಮಾ.

  ಅಣ್ಣನ ಹಾದಿಯಲ್ಲಿ ತಮ್ಮ

  ಅಣ್ಣನ ಹಾದಿಯಲ್ಲಿ ತಮ್ಮ

  ಅರ್ಜುನ್ ರೆಡ್ಡಿ ಮತ್ತು ಗೀತಾ ಗೋವಿಂದಂ ಚಿತ್ರಗಳಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದ ವಿಜಯ್ ದೇವರಕೊಂಡ, ಕಿಸ್ಸಿಂಗ್ ದೃಶ್ಯಗಳಲ್ಲಿ ಅಭಿನಯಿಸಿದ್ದರು. ಈಗ ರಿಲೀಸ್ ಗೆ ರೆಡಿಯಾಗಿರುವ ಡಿಯರ್ ಕಾಮ್ರೇಡ್ ಚಿತ್ರದಲ್ಲೂ ಲಿಪ್ ಲಾಕ್ ಮಾಡುವ ಮೂಲಕ ಸದ್ದು ಮಾಡಿದ್ದರು. ಇದೀಗ, ಆನಂದ್ ದೇವರಕೊಂಡ ಕೂಡ ಚೊಚ್ಚಲ ಚಿತ್ರದಲ್ಲೇ ಲಿಪ್ ಲಾಕ್ ಮಾಡಲಿದ್ದಾರಂತೆ. ಈ ದೃಶ್ಯ ಟೀಸರ್ ನಲ್ಲಿ ಕೂಡ ಇರಲಿದೆ ಎನ್ನಲಾಗಿದೆ.

  ಸೌತ್ ಇಮ್ರಾನ್ ಹಶ್ಮಿಯಾದ ತುಂಟ ನಟ ಯಾರು ಗೊತ್ತೆ?

  ಬ್ರಾಂಡ್ ಗೆ ರಾಯಭಾರಿ ದೇವರಕೊಂಡ ಬ್ರದರ್ಸ್?

  ಬ್ರಾಂಡ್ ಗೆ ರಾಯಭಾರಿ ದೇವರಕೊಂಡ ಬ್ರದರ್ಸ್?

  ಈಗಾಗಲೇ ಕಿಸ್ಸಿಂಗ್ ಸೀನ್ ಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿರುವ ವಿಜಯ್ ದೇವರಕೊಂಡರಂತೆ ಅವರನ್ನ ಸೌತ್ ಇಂಡಸ್ಟ್ರಿಯ ಇಮ್ರಾನ್ ಹಶ್ಮಿ ಎಂದೇ ಕರೆಯಲಾಗುತ್ತಿದೆ. ಈಗ ಆನಂದ್ ದೇವರಕೊಂಡ ಕೂಡ ಅದೇ ಹಾದಿಯಲ್ಲಿ ಸಾಗುವ ಸೂಚನೆ ಸಿಕ್ಕಿದೆ. ಈ ಮೂಲಕ ಇಂಡಸ್ಟ್ರಿಯಲ್ಲಿ ಕಿಸ್ಸಿಂಗ್ ದೃಶ್ಯಗಳಿಗೆ ಬ್ರದರ್ಸ್ ಇಬ್ಬರು ಬ್ರಾಂಡ್ ಆಗಬಹದಾ ಎಂಬ ಮಾತುಗಳು ಇವೆ.

  English summary
  Telugu star actor vijay devarakonda's brother anand devarakonda making debut to tollywood with dorasani movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X