ಚೊಚ್ಚಲ 100 ಕೋಟಿಯನ್ನ ರಶ್ಮಿಕಾಗೆ ಅರ್ಪಿಸಿದ ವಿಜಯ ದೇವರಕೊಂಡ
'ಕಿರಿಕ್ ಪಾರ್ಟಿ' ಚೆಲುವೆ ರಶ್ಮಿಕಾ ಮಂದಣ್ಣ ಹಾಗೂ ವಿಜಯ ದೇವರಕೊಂಡ ಅಭಿನಯದ 'ಗೀತಾ ಗೋವಿಂದ' ತೆಲುಗು ಸಿನಿಮಾ ಕರ್ನಾಟಕ ಸೇರಿದಂತೆ ಎಲ್ಲಾ ಕಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ.
ಸದ್ಯದ ಮಾಹಿತಿ ಪ್ರಕಾರ ಬಾಕ್ಸ್ ಆಫೀಸ್ ನಲ್ಲಿ ಯಶಸ್ವಿ ಗಳಿಕೆ ಕಾಣುತ್ತಿದ್ದು, 12 ದಿನಗಳಲ್ಲಿ 100 ಕೋಟಿ ಗಳಿಸಿದೆ ಎನ್ನಲಾಗಿದೆ. ಈ ಸಂತಸದ ಸುದ್ದಿಯನ್ನ ಸ್ವತಃ ವಿಜಯ ದೇವರಕೊಂಡ ಅವರೇ ಹಂಚಿಕೊಂಡಿದ್ದಾರೆ. ಈ ಖುಷಿಯ ಕ್ಷಣವನ್ನ ಹಾಗೂ ಯಶಸ್ಸನ್ನ ತಮ್ಮ ಸಹ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಅರ್ಪಿಸಿರುವುದು ವಿಶೇಷ.

ಈ ಬಗ್ಗೆ ವಿಜಯ ದೇವರಕೊಂಡ ಟ್ವೀಟ್ ಮಾಡಿದ್ದು, ''ನನ್ನ ಮೊದಲ 100 ಕೋಟಿಯನ್ನ ನನ್ನ ಕ್ಯಾಪ್ಟನ್ ಬುಜ್ಜಿ, ನನ್ನ ಲವ್ಲಿ ಪಾಟ್ನರ್ ರಶ್ಮಿಕಾ ಮಂದಣ್ಣ ಅವರಿಗೆ ಅರ್ಪಿಸಲು ಇಷ್ಟಪಡುತ್ತೇನೆ. ಅದೇ ರೀತಿ ತೆಲುಗು, ತಮಿಳು, ಮಲಯಾಳಂ ಹಾಗೂ ಕನ್ನಡ ಜನತೆಗೆ ಥ್ಯಾಂಕ್ ಯೂ ಹೇಳುತ್ತೇನೆ'' ಎಂದು ಟ್ವೀಟ್ ಮಾಡಿದ್ದಾರೆ.
ರಶ್ಮಿಕಾ ಮಂದಣ್ಣ ಅಭಿನಯದ ಎರಡನೇ ತೆಲುಗು ಸಿನಿಮಾ ಇದು. ಇದಕ್ಕು ಮೊದಲು 'ಚಲೋ' ಎಂಬ ಸಿನಿಮಾ ಮಾಡಿದ್ದರು. ಆ ಚಿತ್ರವೂ ತಕ್ಕ ಮಟ್ಟಿಗೆ ಯಶಸ್ಸು ಕಂಡಿತ್ತು. ಹೀಗೆ, ರಶ್ಮಿಕಾ ಅಭಿನಯದ ಎರಡು ತೆಲುಗು ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಹಿಟ್ ಆಗಿದೆ.
ಈಗ ಮೂರನೇ ಚಿತ್ರವನ್ನ ತೆಲುಗಿನಲ್ಲಿ ಮಾಡ್ತಿದ್ದು, ಆ ಚಿತ್ರಕ್ಕೆ ವಿಜಯದೇವರಕೊಂಡ ನಾಯಯಕರಾಗಿದ್ದಾರೆ. ಇನ್ನುಳಿದಂತೆ ಕನ್ನಡದಲ್ಲಿ ದರ್ಶನ್ ಜೊತೆ 'ಯಜಮಾನ' ಸಿನಿಮಾ ಮಾಡುತ್ತಿದ್ದಾರೆ.


Click it and Unblock the Notifications











