ಒಂದ್ಕಾಲದಲ್ಲಿ 500 ರೂಪಾಯಿ ಇರಲಿಲ್ಲ: ಈಗ ಫೋರ್ಬ್ಸ್ ಪಟ್ಟಿ ಸೇರಿದ ವಿಜಯ್ ದೇವರಕೊಂಡ.!
Recommended Video

ಕೆಲವೇ ಕೆಲವು ವರ್ಷಗಳ ಹಿಂದಿನ ಫ್ಲಾಶ್ ಬ್ಯಾಕ್ ಗೆ ಹೋದರೆ ತೆಲುಗು ನಟ ವಿಜಯ್ ದೇವರಕೊಂಡ ಯಾರು ಅನ್ನೋದೇ ಗೊತ್ತಿರಲಿಲ್ಲ. ಆದರೆ ಈಗ ಪರಿಸ್ಥಿತಿ ಹಾಗೆ ಉಳಿದಿಲ್ಲ. ಟಾಲಿವುಡ್ ನಲ್ಲಿ ವಿಜಯ್ ದೇವರಕೊಂಡ ಬಹುಬೇಡಿಕೆಯ ನಟನಾಗಿದ್ದಾರೆ.
'ಪೆಳ್ಳಿ ಚೂಪುಲು', 'ಅರ್ಜುನ್ ರೆಡ್ಡಿ', 'ಗೀತ ಗೋವಿಂದಂ' ಅಂತಹ ಸೂಪರ್ ಹಿಟ್ ಸಿನಿಮಾಗಳನ್ನ ನೀಡಿ ವಿಜಯ್ ದೇವರಕೊಂಡ ಟಾಪ್ಗೇರಿದ್ದಾರೆ.
ಚಿತ್ರರಂಗದಲ್ಲಿ ಯಶಸ್ಸಿನ ಎತ್ತರೆತ್ತರಕ್ಕೆ ಏರುತ್ತಿರುವ ವಿಜಯ್ ದೇವರಕೊಂಡ ಇದೀಗ ಪ್ರತಿಷ್ಠಿತ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಮುಂದೆ ಓದಿರಿ..

500 ರೂ ಬ್ಯಾಲೆನ್ಸ್ ಮೇನ್ಟೇನ್ ಮಾಡಿರಲಿಲ್ಲ.!
4 ವರ್ಷಗಳ ಹಿಂದೆ ಬ್ಯಾಂಕ್ ಅಕೌಂಟ್ ನಲ್ಲಿ 500 ರೂಪಾಯಿ ಮಿನಿಮಮ್ ಬ್ಯಾಲೆನ್ಸ್ ಮೇನ್ಟೇನ್ ಮಾಡೋಕೆ ವಿಜಯ ದೇವರಕೊಂಡ ಹೆಣಗಾಡುತ್ತಿದ್ದರಂತೆ. ಆದರೆ ಈಗ ಅದೇ ವ್ಯಕ್ತಿ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿದ್ದಾರೆ ಅಂದ್ರೆ ನೀವೇ ಊಹಿಸಿ ಅವರ ಶ್ರಮ ಮತ್ತು ಲಕ್ ಹೇಗಿದೆ ಅಂತ.!

ಹೆಮ್ಮೆ ಪಟ್ಟ ವಿಜಯ್ ದೇವರಕೊಂಡ
ಟಾಲಿವುಡ್ ನ ಯಶಸ್ವಿ ನಟ ವಿಜಯ್ ದೇವರಕೊಂಡ 2019ರ 30 ವಯಸ್ಸಿಗಿಂತ ಕಡಿಮೆ ವಯೋಮಾನದ ಸಾಧಕರ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಈ ಬಗ್ಗೆ ಟ್ವಿಟರ್ ನಲ್ಲಿ ನಟ ವಿಜಯ ದೇವರಕೊಂಡ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ವಿಜಯ್ ದೇವರಕೊಂಡ ಮಾಡಿರುವ ಟ್ವೀಟ್ ನೋಡಿ...
''ನನಗಾಗ 25 ವರ್ಷ. ಆಂಧ್ರ ಬ್ಯಾಂಕ್ ನಲ್ಲಿ 500 ರೂಪಾಯಿ ಮಿನಿಮಮ್ ಬ್ಯಾಲೆನ್ಸ್ ಮೇನ್ಟೇನ್ ಮಾಡಲಿಲ್ಲ ಅಂತ ಅಕೌಂಟ್ ಲಾಕ್ ಮಾಡ್ಬಿಟ್ರು. ಆಗ, 30 ವರ್ಷದ ಒಳಗೆ ಸೆಟಲ್ ಆಗುವಂತೆ ಅಪ್ಪ ನನಗೆ ಹೇಳಿದ್ದರು. ನಾಲ್ಕು ವರ್ಷಗಳ ನಂತರ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದಿರುವೆ'' ಎಂದು ವಿಜಯ್ ದೇವರಕೊಂಡ ಟ್ವೀಟ್ ಮಾಡಿದ್ದಾರೆ.

ವಿಜಯ್ ದೇವರಕೊಂಡ ಸಖತ್ ಬಿಜಿ
ಸದ್ಯ ವಿಜಯ್ ದೇವರಕೊಂಡ ಕೈಯಲ್ಲಿ 'ಡಿಯರ್ ಕಾಮ್ರೇಡ್' ಸೇರಿದಂತೆ ಎರಡು-ಮೂರು ಚಿತ್ರಗಳಿವೆ. ತೆಲುಗು ಸಿನಿಮಾ ಅಂಗಳದಲ್ಲಿ ವಿಜಯ್ ದೇವರಕೊಂಡ ಸಿಕ್ಕಾಪಟ್ಟೆ ಬಿಜಿಯಾಗಿದ್ದಾರೆ.


Click it and Unblock the Notifications











