ರಶ್ಮಿಕಾ ಜೊತೆ ಮತ್ತೆ ಸಿನಿಮಾ ಮಾಡುವುದಿಲ್ಲವಂತೆ ವಿಜಯ್ ದೇವರಕೊಂಡ

Recommended Video

ಅಭಿಮಾನಿಗಳಿಗೆ ಶಾಕ್ ನೀಡಿದ ರಶ್ಮಿಕಾ ಮಂದಣ್ಣ ಹೇಳಿಕೆ..? | Rashmika Mandanna | FILMIBEAT KANNADA

ಸ್ಯಾಂಡಲ್ ವುಡ್ ನ ಕಿರಿಕ್ ಸುಂದರಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ಸೌತ್ ಸಿನಿ ಇಂಡಸ್ಟ್ರಿಯ ಹಾಟ್ ಟಾಪಿಕ್ ಆಗಿದ್ದಾರೆ. ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದು ಎರಡೇ ಸಿನಿಮಾ. ಆದ್ರೂ ಸಿಕ್ಕಾಪಟ್ಟೆ ಸುದ್ದಿಯಲ್ಲಿರುವ ಖ್ಯಾತ ಜೋಡಿ.

ಡಿಯರ್ ಕಾಮ್ರೇಡ್ ಸಿನಿಮಾ ನಂತರ ಇಬ್ಬರ ಖ್ಯಾತಿ ಮತ್ತಷ್ಟು ಹೆಚ್ಚಾಯಿತು. ಲಿಪ್ ಲಾಕ್, ರೋಮ್ಯಾನ್ಸ್ ಹೀಗೆ ಆನ್ ಸ್ಕ್ರೀನ್ ಕೆಮಿಸ್ಟ್ರಿ ಎಷ್ಟರ ಮಟ್ಟಿಗೆ ಫೇಮಸ್ ಆಯಿತೊ, ತೆರೆ ಹಿಂದಿನ ಇಬ್ಬರ ಅನ್ಯೂನತೆ ಕೂಡ ಅಷ್ಟೆ ಟ್ರೋಲ್ ಆಗುತ್ತಿದೆ. ಇಬ್ಬರು ಸ್ನೇಹಿತರಷ್ಟೆ ಎಂದು ಎಷ್ಟೇ ಬಾರಿ ಹೇಳಿಕೊಂಡರು, ಇಬ್ಬರ ನಡುವೆ ಸ್ನೇಹಕ್ಕಿಂತ ಮಿಗಿಲಾದ ಸಂಬಂದವಿದೆ ಎಂದೇ ಹೇಳಲಾಗುತ್ತಿದೆ. ಈ ಬಗ್ಗೆ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ರಶ್ಮಿಕಾ ಹೀಗೆ ಹೇಳಿದ್ದಾರೆ.

ವಿಜಯ್ ಜೊತೆ ಯಾಕೆ ಡೇಟ್ ಮಾಡಬಾರದು?

ವಿಜಯ್ ಜೊತೆ ಯಾಕೆ ಡೇಟ್ ಮಾಡಬಾರದು?

ಅಭಿಮಾನಿಯೊಬ್ಬರು ರಶ್ಮಿಕಾಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಹಾಕಿದ್ದರು. "ನೀವು ಮತ್ತು ವಿಜಯ್ ಇಬ್ಬರು ಒಳ್ಳೆಯ ಜೋಡಿ. ನೀವಿಬ್ಬರು ಯಾಕೆ ಡೇಟಿಂಗ್ ಮಾಡಬಾರದು" ಎಂದು ಪ್ರಶ್ನೆ ಮಾಡಿದ್ದರು. ಅಭಿಮಾನಿಯ ಪ್ರಶ್ನೆಗೆ ರಶ್ಮಿಕಾ ಉತ್ತರ ನೀಡಿದ್ದಾರೆ.

'ನಿಮಗೆ ನಿರಾಸೆ ಮಾಡಿದ್ದಕ್ಕೆ ಕ್ಷಮೆ ಇರಲಿ'

'ನಿಮಗೆ ನಿರಾಸೆ ಮಾಡಿದ್ದಕ್ಕೆ ಕ್ಷಮೆ ಇರಲಿ'

"ನಿಮಗೆ ನಿರಾಸೆ ಮಾಡಿದ್ದಕ್ಕೆ ಕ್ಷಮೆ ಇರಲಿ. ಇಬ್ಬರು ಕುಳಿತು ಡೇಟಿಂಗ್ ಮಾಡಲು, ನಮ್ಮಿಬ್ಬರಿಗೂ ಮಾಡಲು ಸಖತ್ ಕೆಲಸಗಳಿವೆ. ನಾವು ಕೆಲಸದ ಮೂಲಕ ಪ್ರೀತಿ ಮತ್ತು ಗೌರವವನ್ನು ಕೊಡುತ್ತೇವೆ" ಎಂದು ಅಭಿಮಾನಿಯ ಪ್ರಶ್ನೆಗೆ ಖಡಕ್ ಪ್ರತಿಕ್ರಿಯೆ ನೀಡಿರುವ ರಶ್ಮಿಕಾ ಡೇಟಿಂಗ್ ವಿಚಾರಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

'ವಿಜಯ್ ಗೆ ತುಂಬ ಕಿರಿಕಿರಿ ಮಾಡಿದ್ದೀನಿ'

'ವಿಜಯ್ ಗೆ ತುಂಬ ಕಿರಿಕಿರಿ ಮಾಡಿದ್ದೀನಿ'

"ಈಗಾಗಲೆ ವಿಜಯ್ ದೇವರಕೊಂಡಗೆ ತುಂಬಾ ಕಿರಿಕಿರಿ ಮಾಡಿದ್ದೀನಿ. ಹಾಗಾಗಿ ವಿಜಯ್ ನನ್ನ ಜೊತೆ ಸಿನಿಮಾಡಲು ಒಪ್ಪಿಕೊಳ್ಳುತ್ತಿಲ್ಲ. ಕಮ್ಮಿ ಎಂದರು ಮುಂದಿನ ಎರಡು ವರ್ಷಗಳು ವಿಜಯ್ ನನ್ನ ಜೊತೆ ಸಿನಿಮಾ ಮಾಡುವುದಿಲ್ಲ" ಎಂದು ಹೇಳಿದ್ದಾರೆ.

2 ವರ್ಷ ಸಿನಿಮಾ ಮಾಡದಿರಲು ಅಸಲಿ ಕಾರಣ

2 ವರ್ಷ ಸಿನಿಮಾ ಮಾಡದಿರಲು ಅಸಲಿ ಕಾರಣ

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಇಬ್ಬರು ಎರಡು ವರ್ಷ ಸಿನಿಮಾ ಮಾಡದಿರಲು ನಿಜವಾದ ಕಾರಣ ಇಬ್ಬರ ಬಳಿಯೂ ಕೈ ತುಂಬ ಸಿನಿಮಾಗಳಿವೆ. ರಶ್ಮಿಕಾ ಈಗಾಗಲೆ ಕನ್ನಡ, ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ವಿಜಯ್ ದೇವರಕೊಂಡ ಸದ್ಯ ಪುರಿ ಜಗನ್ನಾಥ್ ನಿರ್ದೇಶನದ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಇನ್ನು ಅನೇಕ ಸಿನಿಮಾಗಲು ವಿಜಯ್ ಕೈಯಲ್ಲಿದೆ.

More from Filmibeat

English summary
Tollywood actor Vijay Devarakonda has said that he will not make a film with Rashmika Mandanna for the next two years.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X