ರಾಕಿ ಭಾಯ್ ಜೊತೆ ರೌಡಿ: ಒಂದೇ ಕಲರ್, ಒಂದೇ ಸ್ಟೈಲ್ ನಲ್ಲಿ ಅಣ್ತಮ್ಮಾಸ್.!
Recommended Video

ಟಾಲಿವುಡ್ ಇಂಡಸ್ಟ್ರಿಯಲ್ಲಿ ಸದ್ಯ ಸಿಕ್ಕಾಪಟ್ಟೆ ಹವಾ ಮಾಡ್ತಿರುವ ನಟ ವಿಜಯ್ ದೇವರಕೊಂಡ. 'ಅರ್ಜುನ್ ರೆಡ್ಡಿ' ಬಳಿಕ ಒಂದೊಂದೆ ಹಿಟ್ ಸಿನಿಮಾ ಮಾಡ್ತಾ, ಸೌತ್ ಇಂಡಿಯಾದಲ್ಲಿ ದೊಡ್ಡ ನೇಮೂ ಫೇಮೂ ಗಳಿಸಿಕೊಂಡರು. ಒಂದು ಸಮಯದಲ್ಲಿ ಯಾವ ಸ್ಟಾರ್ ಪಟ್ಟವೂ ಇಲ್ಲದೇ ಸಾಮಾನ್ಯವಾಗಿದ್ದ ವಿಜಯ್ ದೇವರಕೊಂಡ, ಇಂದು ಬಹುಬೇಡಿಕೆ ಹಿಂದಿರುವ ದೊಡ್ಡ ಸ್ಟಾರ್.
ನಿನ್ನೆಯಷ್ಟೇ (ಜುಲೈ 12) 'ಡಿಯರ್ ಕಾಮ್ರೇಡ್' ಸಿನಿಮಾದ ಪ್ರಚಾರಕ್ಕಾಗಿ ವಿಜಯ್ ದೇವರಕೊಂಡ ಬೆಂಗಳೂರಿಗೆ ಬಂದಿದ್ದರು. ಈ ಕಾರ್ಯಕ್ರಮಕ್ಕೂ ಮುಂಚೆಯೇ, ಸ್ಯಾಂಡಲ್ ವುಡ್ ರಾಕಿಂಗ್ ಸ್ಟಾರ್ ಯಶ್ ಅವರನ್ನ ಭೇಟಿ ಮಾಡಿದ್ದಾರೆ.
ಈ ಫೋಟೋವನ್ನ ಕೆಲ ಗಂಟೆಗಳ ಹಿಂದೆಯಷ್ಟೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ತಮ್ಮ ಭೇಟಿಯ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ. ''ನಮ್ಮ ಹಿಂದಿನ ಮತ್ತು ಮುಂದಿನ ಭವಿಷ್ಯದ ಬಗ್ಗೆ ಚರ್ಚಿಸಿದ್ವಿ'' ಎಂದು ಕ್ಯಾಪ್ಷನ್ ಕೂಡ ಕೊಟ್ಟಿದ್ದಾರೆ.

ಈ ಫೋಟೋ ನೋಡಿದ ಸಿನಿಮಾ ಅಭಿಮಾನಿಗಳು ಮತ್ತಷ್ಟು ಸಂತೋಷವಾಗಿದ್ದಾರೆ. ಯಾಕಂದ್ರೆ, ಈ ಫೋಟೋದಲ್ಲಿ ವಿಜಯ್ ದೇವರಕೊಂಡ ಮತ್ತು ಯಶ್ ಒಂದೇ ಸ್ಟೈಲ್ ನಲ್ಲಿ ಗಡ್ಡ ಬಿಟ್ಟು, ಒಂದೇ ಬಣ್ಣದ ಟಿ-ಶರ್ಟ್ ತೊಟ್ಟು ಸಹೋದರರಂತೆ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳು ಕೂಡ 'ನೀವಿಬ್ಬರು ಅಣ್ಣ-ತಮ್ಮ ಇದ್ದಂತೆ ಕಾಣ್ತಿದ್ದೀರಾ' ಎಂದು ಕಾಮೆಂಟ್ ಮಾಡುತ್ತಿದ್ದಾರೆ.
'ನೀವಿಬ್ಬರು ಆದಷ್ಟೂ ಬೇಗ ಒಂದು ಮಲ್ಟಿಸ್ಟಾರ್ ಸಿನಿಮಾ ಮಾಡಿ' ಎಂದು ಕೂಡ ಅನೇಕ ಆಸೆ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ, ಕೆಜಿಎಫ್ ಚಾಪ್ಟರ್-2 ಚಿತ್ರದಲ್ಲಿ ನಟಿಸುತ್ತಿದ್ದಾರೆ ಯಶ್. ಈ ಕಡೆ 'ಡಿಯರ್ ಕಾಮ್ರೇಡ್' ಸಿನಿಮಾದ ರಿಲೀಸ್ ಗಾಗಿ ದೇವರಕೊಂಡ ಕಾಯುತ್ತಿದ್ದಾರೆ.
ಅಂದ್ಹಾಗೆ, 'ಡಿಯರ್ ಕಾಮ್ರೇಡ್' ಸಿನಿಮಾ ನಾಲ್ಕು ಭಾಷೆಯಲ್ಲಿದೆ ಬರ್ತಿದೆ. ತೆಲುಗು, ತಮಿಳು, ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಿ ಸಿನಿಮಾ ತೆರೆಕಾಣುತ್ತಿದೆ. ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದಾರೆ. ಈ ಹಿಂದೆ 'ಗೀತಾ ಗೋವಿಂದಂ' ಚಿತ್ರದಲ್ಲಿ ಇಬ್ಬರು ಒಟ್ಟಿಗೆ ನಟಿಸಿದ್ದರು.


Click it and Unblock the Notifications











