For Quick Alerts
  ALLOW NOTIFICATIONS  
  For Daily Alerts

  ವೈರಲ್ ಆಗಿದೆ ತೆಲುಗು ನಟನ ಜೊತೆಗೆ ರಶ್ಮಿಕಾ ಲಿಪ್-ಲಾಕ್ ವಿಡಿಯೋ.!

  By Harshitha
  |
  ವೈರಲ್ ಆಗ್ತಿದೆ ರಶ್ಮಿಕಾ ಮಂದಣ್ಣ ಕಿಸ್ಸಿಂಗ್ ಸೀನ್..! | Filmibeat Kannada

  ಇತ್ತೀಚೆಗಂತೂ 'ಕಿರಿಕ್ ಪಾರ್ಟಿ' ಬೆಡಗಿ ರಶ್ಮಿಕಾ ಮಂದಣ್ಣ ಸಿಕ್ಕಾಪಟ್ಟೆ ಸದ್ದು ಮಾಡ್ತಿದ್ದಾರೆ. ಟಾಲಿವುಡ್ ನಲ್ಲಿ ಹೆಚ್ಚು ಬಿಜಿಯಾಗಿರುವ ರಶ್ಮಿಕಾ ಮಂದಣ್ಣ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ಸ್ ಹೆಚ್ಚಾಗುತ್ತಿವೆ.

  ಹೇಳಿ ಕೇಳಿ, ರಶ್ಮಿಕಾ ಮಂದಣ್ಣ ಅಭಿನಯದ ತೆಲುಗು ಸಿನಿಮಾ 'ಗೀತ ಗೋವಿಂದಂ' ಇನ್ನೆರಡು ದಿನಗಳಲ್ಲಿ (ಆಗಸ್ಟ್ 15) ಬಿಡುಗಡೆ ಆಗುತ್ತಿದೆ. ಹೀಗಿರುವಾಗಲೇ, ಸಿನಿಮಾದ ಪೋಸ್ಟರ್ ಹಾಗೂ ಹಾಡುಗಳಲ್ಲಿ ನಟ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ನಡುವಿನ ಕೆಮಿಸ್ಟ್ರಿ ಕನ್ನಡ ಸಿನಿ ಪ್ರಿಯರಿಗೆ ಕಿರಿಕಿರಿ ತಂದಿದೆ.

  ರಶ್ಮಿಕಾ ಮಂದಣ್ಣ-ರಕ್ಷಿತ್ ಶೆಟ್ಟಿಗೆ ನಿಶ್ಚಿತಾರ್ಥ ಆಗಿದೆ. ಇನ್ನೇನು ಮದುವೆ ಆಗಬೇಕಿರುವ ನಟಿ ರಶ್ಮಿಕಾ, ಸಿನಿಮಾದಲ್ಲಿ ಇನ್ನೊಬ್ಬ ಹೀರೋ ಜೊತೆಗೆ ರೋಮ್ಯಾನ್ಸ್ ಮಾಡುವುದು ಕನ್ನಡಾಭಿಮಾನಿಗಳಿಗೆ ಇಷ್ಟ ಆಗುತ್ತಿಲ್ಲ. ಹೀಗಾಗಿ, ಸಾಮಾಜಿಕ ಜಾಲತಾಣಗಳಲ್ಲಿ ನೆಗೆಟಿವ್ ಕಾಮೆಂಟ್ಸ್ ಮಾಡುತ್ತಿದ್ದಾರೆ.

  ಈ ನಡುವೆ ಮತ್ತೊಂದು ಎಡವಟ್ಟಾಗಿದೆ. ವಿಜಯ್ ದೇವರಕೊಂಡ ಜೊತೆಗೆ ರಶ್ಮಿಕಾ ಲಿಪ್ ಲಾಕ್ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಲೀಕ್ ಆಗಿದೆ. ಮುಂದೆ ಓದಿರಿ...

  ವೈರಲ್ ಆಗಿದೆ ಲಿಪ್ ಲಾಕ್ ವಿಡಿಯೋ

  ಕನ್ನಡ ಹುಡುಗಿ, ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅಭಿನಯದ ತೆಲುಗಿನ 'ಗೀತ ಗೋವಿಂದಂ' ಸಿನಿಮಾದ ಕಿಸ್ಸಿಂಗ್ ದೃಶ್ಯವೊಂದು ಲೀಕ್ ಆಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

  ರಶ್ಮಿಕಾ ಮಂದಣ್ಣ ಬಗ್ಗೆ ಏನೇನೋ ಸುದ್ದಿ: ಯಾವುದನ್ನೂ ನಂಬಬೇಡಿ.!ರಶ್ಮಿಕಾ ಮಂದಣ್ಣ ಬಗ್ಗೆ ಏನೇನೋ ಸುದ್ದಿ: ಯಾವುದನ್ನೂ ನಂಬಬೇಡಿ.!

  ಬಸ್ ನಲ್ಲಿ ಲಿಪ್ ಲಾಕ್

  ಬಸ್ ನಲ್ಲಿ ಲಿಪ್ ಲಾಕ್

  ಬಸ್ ನಲ್ಲಿ ಪ್ರಯಾಣ ಮಾಡುತ್ತಿರುವಾಗ ನಾಯಕನ ಜೊತೆ ನಾಯಕಿ ಲಿಪ್ ಲಾಪ್ ಮಾಡುವ ದೃಶ್ಯ ಇದಾಗಿದ್ದು, 'ಡಾರ್ಕ್' ಎಂಬ ಟ್ವಿಟ್ಟರ್ ಅಕೌಂಟ್ ನಿಂದ ವೈರಲ್ ಆಗಿದೆ.

  ಪುನೀತ್, ದರ್ಶನ್, ಸುದೀಪ್ ಬಗ್ಗೆ ನಟಿ ರಶ್ಮಿಕಾ 'ಹೀಗೆ' ಹೇಳಿದರು.!ಪುನೀತ್, ದರ್ಶನ್, ಸುದೀಪ್ ಬಗ್ಗೆ ನಟಿ ರಶ್ಮಿಕಾ 'ಹೀಗೆ' ಹೇಳಿದರು.!

  'ಗೀತ ಗೋವಿಂದಂ' ಚಿತ್ರಕ್ಕೆ ಕಾಡುತ್ತಿದೆ ಪೈರಸಿ ಭೂತ

  'ಗೀತ ಗೋವಿಂದಂ' ಚಿತ್ರಕ್ಕೆ ಕಾಡುತ್ತಿದೆ ಪೈರಸಿ ಭೂತ

  'ಗೀತ ಗೋವಿಂದಂ' ಸಿನಿಮಾ ಇನ್ನೂ ಬಿಡುಗಡೆ ಆಗಿಲ್ಲ. ಆಗಲೇ, ಸಿನಿಮಾದ ಕೆಲ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ಲೀಕ್ ಆಗಿದೆ. ಎಡಿಟರ್ ಟೇಬಲ್ ನಿಂದಲೇ ಕೆಲ ದೃಶ್ಯಗಳು ಲೀಕ್ ಆಗಿರುವುದು ಕನ್ಫರ್ಮ್ ಆಗಿದೆ. ಈ ಬಗ್ಗೆ ನಿರ್ಮಾಪಕರು ಪೊಲೀಸರಿಗೆ ದೂರು ನೀಡಿದ್ದಾರೆ.

  ರಕ್ಷಿತ್ ಶೆಟ್ಟಿ-ರಶ್ಮಿಕಾ ಮಂದಣ್ಣ ಎಂಗೇಜ್ಮೆಂಟ್ ವಿಡಿಯೋ ನೋಡಿ...ರಕ್ಷಿತ್ ಶೆಟ್ಟಿ-ರಶ್ಮಿಕಾ ಮಂದಣ್ಣ ಎಂಗೇಜ್ಮೆಂಟ್ ವಿಡಿಯೋ ನೋಡಿ...

  ಬುಧವಾರ ಸಿನಿಮಾ ಬಿಡುಗಡೆ

  ಬುಧವಾರ ಸಿನಿಮಾ ಬಿಡುಗಡೆ

  ವಿಜಯ ದೇವರಕೊಂಡ-ರಶ್ಮಿಕಾ ಮಂದಣ್ಣ ಅಭಿನಯದ 'ಗೀತ ಗೋವಿಂದಂ' ಸಿನಿಮಾ ಆಗಸ್ಟ್ 15 ರಂದು ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. ರೋಮ್ಯಾಂಟಿಕ್-ಕಾಮಿಡಿ ಅಂಶಗಳು ಹೆಚ್ಚಾಗಿರುವ ಈ ಚಿತ್ರಕ್ಕೆ ಪರಶುರಾಮ್ ಆಕ್ಷನ್ ಕಟ್ ಹೇಳಿದ್ದಾರೆ.

  English summary
  Kannada Actress Rashmika Mandanna and Telugu Actor Vijay Devarakonda lip lock video goes viral in Social Media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X