'ಲಿಪ್ ಲಾಕ್ ಅಂದ್ರೆ ನಂಗೆ ಆಗಲ್ಲ' : ಮುತ್ತಿನ ಅರ್ಥ ಹೇಳಿದ ದೇವರಕೊಂಡ

Recommended Video

ಲಿಪ್ ಲಾಕ್ ಬಗ್ಗೆ ಕೇಳಿದ್ದಕ್ಕೆ ರಶ್ಮಿಕಾ, ವಿಜಯ್ ಹೇಳಿದ್ದೇನು ಗೊತ್ತಾ..? | Rashmika Mandanna

ಇಮ್ರಾನ್ ಹಶ್ಮಿ ಎಂದ ತಕ್ಷಣ ನೆನಪಾಗುವುದು ಅವರ ಮುತ್ತಿನ ದೃಶ್ಯಗಳು. ಅದೇ ರೀತಿ ಸೌತ್ ಇಂಡಿಯಾದ ಇಮ್ರಾನ್ ಹಶ್ಮಿ ಯಾರು ಎಂದರೆ ಮೊದಲು ಬರುವ ಹೆಸರು ನಟ ವಿಜಯ ದೇವರಕೊಂಡ.

'ಅರ್ಜುನ್ ರೆಡ್ಡಿ' ಚಿತ್ರದಿಂದ ಶುರುವಾದ ವಿಜಯ ದೇವರಕೊಂಡ ಮುತ್ತಿನ ಮಳೆ ಮುಂದುವರೆಯುತ್ತಲೇ ಇದೆ. ಇತ್ತೀಚಿಗೆ 'ಡಿಯರ್ ಕಾಮ್ರೇಡ್' ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಅದರಲ್ಲಿಯೂ ಕಿಸ್ಸಿಂಗ್ ದೃಶ್ಯಗಳು ಇವೆ.

ಈ ಸಿನಿಮಾದ ಪ್ರಚಾರಕ್ಕಾಗಿ ವಿಜಯ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಇಂದು (ಜುಲೈ 12) ಬೆಂಗಳೂರಿಗೆ ಬಂದಿದ್ದರು. ಈ ವೇಳೆ 'ಲಿಪ್ ಲಾಕ್' ಬಗ್ಗೆಯೂ ಪ್ರಶ್ನೆಗಳು ಬಂತು. ಆಗ ವಿಜಯ ದೇವರಕೊಂಡ 'ಲಿಪ್ ಲಾಕ್' ಬಗ್ಗೆ ತಮ್ಮ ವ್ಯಾಕ್ಯಾನ ಹೇಳಿದರು....

ಲಿಪ್ ಲಾಕ್ ಅನ್ನೋ ಪದವೇ ನಂಗೆ ಆಗಲ್ಲ

ಲಿಪ್ ಲಾಕ್ ಅನ್ನೋ ಪದವೇ ನಂಗೆ ಆಗಲ್ಲ

ಲಿಪ್ ಲಾಕ್ ಎನ್ನುವ ಪದವನ್ನು ಆಗಾಗ ಟಿವಿ, ಪೇಪರ್ ನಲ್ಲಿ ಕೇಳುತ್ತೇವೆ.. ಓದುತ್ತೇವೆ. ಆದರೆ, ಲಿಪ್ ಲಾಕ್ ಎಂಬ ಪದ ವಿಜಯ್ ದೇವರಕೊಂಡಗೆ ಆಗುವುದಿಲ್ಲವಂತೆ. ''ಲಿಪ್ ಲಾಕ್ ಎಂದರೆ ಏನು? ಆ ಪದವನ್ನು ಬಳಸುವುದು ನನಗೆ ಇಷ್ಟ ಆಗುವುದಿಲ್ಲ. ಲಿಪ್ ಲಾಕ್ ಎಂದರೆ ಅದು ಮುತ್ತು ಅಷ್ಟೇ'' ಎಂದು ಹೇಳಿದ್ದಾರೆ.

ಕಿಸ್ ಎನ್ನುವುದೂ ಕೂಡ ಒಂದು ಎಮೋಷನ್

ಕಿಸ್ ಎನ್ನುವುದೂ ಕೂಡ ಒಂದು ಎಮೋಷನ್

''ಕಿಸ್ ಎನ್ನುವುದೂ ಕೂಡ ಒಂದು ಎಮೋಷನ್. ನಾವು ಹೇಗೆ ನಗುತ್ತೇವೆ.. ಅಳುತ್ತೇವೆ.. ಖುಷಿ.. ದುಃಖ.. ಪಡುತ್ತೇವೆ ಆ ರೀತಿ ಅದು ಕೂಡ ಒಂದು ಭಾವನೆ.'' ಎಂದು ಹೇಳುವ ಮೂಲಕ ವಿಜಯ ದೇವರಕೊಂಡ ಎಲ್ಲ ಭಾವನೆಗಳ ಹಾಗೆ ಮುತ್ತು ಕೂಡ ಸಾಮಾನ್ಯ ಭಾವನೆ ಎಂದು ವಿವರಿಸಿದ್ದಾರೆ.

ಕಿಸ್ ಕೊಡುವುದು ನಾವಲ್ಲ...ಪಾತ್ರಗಳು...

ಕಿಸ್ ಕೊಡುವುದು ನಾವಲ್ಲ...ಪಾತ್ರಗಳು...

ಸಿನಿಮಾಗೆ ಅಗತ್ಯ ಇದ್ದರೇ ಮಾತ್ರ ವಿಜಯ ದೇವರಕೊಂಡ ಕಿಸ್ಸಿಂಗ್ ಸೀನ್ ಮಾಡುತ್ತಾರಂತೆ. ''ಎರಡು ಪಾತ್ರಗಳ ಆತ್ಮೀಯತೆ ಆ ಮಟ್ಟಕ್ಕೆ ಇದ್ದರೆ, ಮುತ್ತಿನ ದೃಶ್ಯದ ಅವಶ್ಯಕತೆ ಇರುತ್ತದೆ. ಸಿನಿಮಾದಲ್ಲಿ ನಾನು - ರಶ್ಮಿಕಾ ಮುತ್ತು ಕೊಟ್ಟಿಲ್ಲ. ಆ ಪಾತ್ರಗಳು ಮುತ್ತು ಕೊಟ್ಟಿವೆ ಅದನ್ನು ಅರ್ಥ ಮಾಡಿಕೊಳ್ಳಬೇಕು.'' ಎಂಬ ಪ್ರತಿಕ್ರಿಯೆ ನೀಡಿದ್ದಾರೆ.

ಕಿಸ್ಸಿಂಗ್ ದೃಶ್ಯಗಳ ಸಿನಿಮಾಗಳು

ಕಿಸ್ಸಿಂಗ್ ದೃಶ್ಯಗಳ ಸಿನಿಮಾಗಳು

'ಅರ್ಜುನ್ ರೆಡ್ಡಿ' ಚಿತ್ರದಲ್ಲಿ ಸರಣಿ ಮುತ್ತುಗಳು ಇದ್ದವು. ಇದೇ ದೃಶ್ಯಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. 'ಗೀತಾ ಗೋವಿಂದಂ', 'ನೋಟ' ಚಿತ್ರಗಳಲ್ಲಿಯೂ ಕಿಸ್ಸಿಂಗ್ ದೃಶ್ಯಗಳು ಮುಂದುವರೆದವು. ಈಗ 'ಡಿಯರ್ ಕಮ್ರೇಡ್'ನಲ್ಲಿಯೂ ಕಿಸ್ಸಿಂಗ್ ಸೀನ್ ಗಳು ಇರುವ ಸೂಚನೆ ಟ್ರೇಲರ್ ನಲ್ಲಿಯೇ ಸಿಕ್ಕಿದೆ. ಈ ಎಲ್ಲ ಸಿನಿಮಾಗಳು ವಿಜಯ್ ದೇವರಕೊಂಡರನ್ನು ಕಿಸ್ಸಿಂಗ್ ಸ್ಟಾರ್ ಮಾಡಿದೆ.

More from Filmibeat

English summary
Telugu actor Vijay Devarakonda reaction about his lip lock sence.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X