ಮುಂಬೈ ಅಪಾರ್ಟ್ ಮೆಂಟ್, 40 ಕೋಟಿ ಆಫರ್ ತಿರಸ್ಕರಿಸಿದ ವಿಜಯ್ ದೇವರಕೊಂಡ.!

ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ ಈಗ ನ್ಯಾಷನಲ್ ಸ್ಟಾರ್. ಅರ್ಜುನ್ ರೆಡ್ಡಿ ಸಿನಿಮಾದ ಬಳಿಕ ರಿಲೀಸ್ ಆದ ಗೀತಾ ಗೋವಿಂದಂ ಮತ್ತು ಡಿಯರ್ ಕಾಮ್ರೇಡ್ ಕೂಡ ಕೊಂಚ ಮಟ್ಟಿಗೆ ಎಲ್ಲ ವರ್ಗದ ಪ್ರೇಕ್ಷಕರ ಗಮನ ಸೆಳೆದಿದೆ.

ವಿಜಯ್ ದೇವರಕೊಂಡ ಅವರಿಗೆ ಈ ಹಿಂದೆಯಿಂದಲೂ ಬಾಲಿವುಡ್ ಆಫರ್ ಬರ್ತಿದೆ. ಆದರೆ, ಅದ್ಯಾಕೋ ದೇವರಕೊಂಡ ಮಾತ್ರ ಬಿಟೌನ್ ಮೆಟ್ಟಿಲೇರಲು ಒಪ್ಪುತ್ತಿಲ್ಲ.

40 ಕೋಟಿ ಮತ್ತು ಮುಂಬೈನಲ್ಲೊಂದು ಮೆಗಾ ಅಪಾರ್ಟ್ ಮೆಂಟ್ ಆಫರ್ ನೀಡಿದ್ದರೂ 'ಬೇಡ' ಎಂದು ನಿರಾಕರಿಸಿದ್ದಾರಂತೆ. ಹೌದು, ಬಾಲಿವುಡ್ ಸ್ಟಾರ್ ನಿರ್ಮಾಪಕ ಕರಣ್ ಜೋಹರ್, ದೇವರಕೊಂಡ ಅವರನ್ನ ಹಿಂದಿ ಚಿತ್ರರಂಗದಲ್ಲಿ ಪರಿಚಯಿಸುವ ಆಸಕ್ತಿ ತೋರಿದ್ದರಂತೆ. 'ಡಿಯರ್ ಕಾಮ್ರೇಡ್' ಚಿತ್ರದ ಹಿಂದಿ ರೀಮೇಕ್ ಚಿತ್ರಕ್ಕಾಗಿ ಸ್ವತಃ ದೇವರಕೊಂಡ ಅವರನ್ನೇ ಕರೆತರುವ ಪ್ಲಾನ್ ಮಾಡಿದ್ದರಂತೆ.

Vijay Devarakonda Rejects 40 Crores Offer from Bollywood

ಇದಕ್ಕಾಗಿ ದೇವರಕೊಂಡಗೆ 40 ಕೋಟಿ ಆಫರ್ ನೀಡಿದ್ದರಂತೆ. ಬಟ್, ಈ ಅವಕಾಶವನ್ನ ವಿಜಯ್ ತಿರಸ್ಕರಿಸಿದ್ದಾರೆ. ಈ ಹಿಂದೆ 'ಅರ್ಜುನ್ ರೆಡ್ಡಿ' ಸಿನಿಮಾ ಬಂದಾಗಲೂ ಕರಣ್ ಜೋಹರ್ ಇಂತಹ ಪ್ರಯತ್ನ ಮಾಡಿದ್ದರು. ಮುಂಬೈನಲ್ಲಿ ದುಬಾರಿ ಅಪಾರ್ಟ್ ಮೆಂಟ್ ಆಫರ್ ನೀಡಲಾಗಿತ್ತು. ಆಗಲೂ ವಿಜಯ್ ದೇವರಕೊಂಡ ಆಗಲ್ಲ ಎಂದಿದ್ದರು.

ಒಮ್ಮೆ ನಟಿಸಿದ ಪಾತ್ರದಲ್ಲಿ ಮತ್ತೊಮ್ಮೆ ನಟಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ, ಅರ್ಜುನ್ ರೆಡ್ಡಿ ರೀಮೇಕ್ ಮತ್ತು ಡಿಯರ್ ಕಾಮ್ರೇಡ್ ರೀಮೇಕ್ ನಲ್ಲಿ ನಟಿಸಲು ವಿಜಯ್ ಒಪ್ಪಲಿಲ್ಲವಂತೆ. ಅರ್ಜುನ್ ರೆಡ್ಡಿ ರೀಮೇಕ್ ನಲ್ಲಿ ಶಾಹೀದ್ ಕಪೂರ್ ನಟಿಸಿದರು. ಸದ್ಯ, 'ಡಿಯರ್ ಕಾಮ್ರೇಡ್' ರೀಮೇಕ್ ಚಿತ್ರದಲ್ಲಿ ದಢಕ್ ಸಿನಿಮಾ ಖ್ಯಾತಿಯ ಜಾಹ್ನವಿ ಕಪೂರ್ ಮತ್ತು ಇಶಾನ್ ಕತ್ತಾರ್ ನಟಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

More from Filmibeat

English summary
Telugu star actor vijay devarakonda rejects 40 crores and mega apartement offer from karan johar?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X