'ಲಿಪ್ ಲಾಕ್'ನಿಂದ ಬೇಸತ್ತ ದೇವರಕೊಂಡ ನಿರ್ಧಾರ ಬದಲಿಸಿದ್ರು.!
Recommended Video
ನಟ ವಿಜಯ್ ದೇವರಕೊಂಡ ಇತ್ತೀಚಿಗಷ್ಟೆ ಬೆಂಗಳೂರಿಗೆ ಬಂದಿದ್ದರು. ತಮ್ಮ ಮುಂದಿನ ಸಿನಿಮಾ 'ಡಿಯರ್ ಕಾಮ್ರೇಡ್' ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಲಿಪ್ ಲಾಕ್ ಬಗ್ಗೆ ಬಂದ ಪ್ರಶ್ನೆಗೆ ತಮ್ಮದೆ ವ್ಯಾಖ್ಯಾನ ನೀಡಿದ್ದರು.
ಅದರ ಬಳಿಕ ತಮಿಳಿನ ಮತ್ತೊಂದು ಸಂದರ್ಶನದಲ್ಲಿಯೂ ಲಿಪ್ ಲಾಕ್ ಬಗ್ಗೆಯೇ ಪ್ರಶ್ನೆ ಬಂದಿದೆ. ಇದೇ ವೇಳೆ ವಿಜಯ್ ದೇವರಕೊಂಡ ''ಇನ್ನು ಮುಂದೆ ಲಿಪ್ ಲಾಕ್ ದೃಶ್ಯ ಇರುವ ಸಿನಿಮಾ ಮಾಡಲ್ಲ'' ಎಂದಿದ್ದಾರೆ.
ವಿಜಯ್ ದೇವರಕೊಂಡ ಅವರ ಬಹುಪಾಲು ಸಿನಿಮಾಗಳಲ್ಲಿ ಲಿಪ್ ಲಾಕ್ ಇರುವ ಒಂದು ದೃಶ್ಯವಾದರೂ ಇರುತ್ತಿತ್ತು. ಅದೇ ಕಾರಣಕ್ಕೆ ಅವರನ್ನು ಸೌತ್ ಚಿತ್ರರಂಗದ ಇಮ್ರಾನ್ ಹಶ್ಮಿ ಎಂದೆಲ್ಲ ವರ್ಣಿಸಲಾಗುತ್ತಿತ್ತು. ಆದರೆ, ಈ ಕಿಸ್ಸಿಂಗ್ ಸ್ಟಾರ್ ಅದರಿಂದ ದೂರ ಇರಲು ನಿರ್ಧಾರ ಮಾಡಿದ್ದಾರೆ...

ಇನ್ನು ಮುಂದೆ ಲಿಪ್ ಲಾಕ್ ಸೀನ್ ಮಾಡುವುದಿಲ್ಲ
ವಿಜಯ ದೇವರಕೊಂಡ ಇತ್ತೀಚಿಗಷ್ಟೆ ನಡೆದ ತಮಿಳಿನ ಒಂದು ಸಂದರ್ಶನದಲ್ಲಿ ಲಿಪ್ ಲಾಕ್ ದೃಶ್ಯಗಳ ಬಗ್ಗೆ ಮಾತನಾಡಿದ್ದಾರೆ. ''ನನ್ನ ಮುಂದಿನ ಸಿನಿಮಾದಲ್ಲಿ ಲಿಪ್ ಲಾಕ್ ದೃಶ್ಯ ಇದೆ. ಆದರೆ, ಅದರ ನಂತರ ಲಿಪ್ ಲಾಕ್ ಸೀನ್ ಇರುವ ಯಾವ ಸಿನಿಮಾವನ್ನು ಮಾಡಲ್ಲ.'' ಎಂದು ತಮ್ಮ ನಿರ್ಧಾರವನ್ನು ಹಂಚಿಕೊಂಡಿದ್ದಾರೆ.

ವಿಜಯ್ ನಿರ್ಧಾರಕ್ಕೆ ಕಾರಣ ಏನು ?
ತಮ್ಮ ಸಿನಿಮಾಗಳಲ್ಲಿ ಮುತ್ತಿನ ಮಳೆ ಸುರಿಸುವ ವಿಜಯ್ ದೇವರಕೊಂಡ ಇದಕ್ಕಿಂತ ಹಾಗೆ ಈ ನಿರ್ಧಾರ ತೆಗೆದುಕೊಳ್ಳಲು ಕಾರಣ ಏನು ಎನ್ನುವ ಪ್ರಶ್ನೆ ಬರುತ್ತದೆ. ಅದಕ್ಕೂ ಉತ್ತರ ನೀಡಿರುವ ವಿಜಯ್ ''ಎಲ್ಲರೂ ಲಿಪ್ ಲಾಕ್ ಬಗ್ಗೆ ಪ್ರಶ್ನೆ ಮಾಡುತ್ತಾರೆ. ನನಗೆ ಅಂತಹ ಸಿನಿಮಾಗಳನ್ನು ಮಾಡಿ ಮಾಡಿ ಬೇಸರ ಆಗಿದೆ. ಅದೇ ಕಾರಣಕ್ಕೆ ಮುಂದೆ ಅಂತಹ ಸಿನಿಮಾ ಮಾಡಲ್ಲ'' ಎನ್ನುತ್ತಾರೆ.

ಲವ್ ಸ್ಟೋರಿ ಬಿಟ್ಟು ಆಕ್ಷನ್ ಕಡೆ ಒಲವು
ಲವ್ ಸ್ಟೋರಿ ಸಿನಿಮಾ ಎಂದ ಮೇಲೆ ಕಿಸ್ ಇರುತ್ತದೆ. ಹಾಗಾಗಿ ವಿಜಯ್ ದೇವರಕೊಂಡ ಲವ್ ಸ್ಟೋರಿ ಸಿನಿಮಾಗಳನ್ನು ಇನ್ನು ಮುಂದೆ ಒಪ್ಪಿಕೊಳ್ಳುವುದಿಲ್ಲವಂತೆ. ಪ್ರೇಮಕಥೆಗಳನ್ನು ಬಿಟ್ಟು ಆಕ್ಷನ್ ಸಿನಿಮಾಗಳನ್ನು ಹೆಚ್ಚು ಮಾಡುವ ಪ್ಲಾನ್ ಮಾಡಿದ್ದಾರೆ. ರೊಮ್ಯಾಂಟಿಕ್ ಹೀರೋ, ಇನ್ನು ಮುಂದೆ ಆಕ್ಷನ್ ಹೀರೋ ಆಗುತ್ತಿದ್ದಾರೆ.

ಮುತ್ತು ಎನ್ನುವುದೂ ಕೂಡ ಒಂದು ಭಾವನೆ
ಮುತ್ತಿನ ಬಗ್ಗೆ ತಮ್ಮ ವ್ಯಾಖ್ಯಾನ ನೀಡಿರುವ ವಿಜಯ್ ದೇವರಕೊಂಡ ''ಕಿಸ್ ಎನ್ನುವುದೂ ಕೂಡ ಒಂದು ಎಮೋಷನ್. ನಾವು ಹೇಗೆ ನಗುತ್ತೇವೆ.. ಅಳುತ್ತೇವೆ.. ಖುಷಿ.. ದುಃಖ.. ಪಡುತ್ತೇವೆ ಆ ರೀತಿ ಅದು ಕೂಡ ಒಂದು ಭಾವನೆ. ಸಿನಿಮಾದಲ್ಲಿ ಎರಡು ಪಾತ್ರಗಳ ಆತ್ಮೀಯತೆ ಆ ಮಟ್ಟಕ್ಕೆ ಇದ್ದರೆ, ಮುತ್ತಿನ ದೃಶ್ಯದ ಅವಶ್ಯಕತೆ ಇರುತ್ತದೆ.'' ಎಂದು ಹೇಳಿದ್ದಾರೆ.

ಮುತ್ತಿನ ಮಳೆ ಸುರಿಸಿದ್ದ ವಿಜಯ್
'ಅರ್ಜುನ್ ರೆಡ್ಡಿ' ಚಿತ್ರದಲ್ಲಿ ಸರಣಿ ಮುತ್ತುಗಳು ಇದ್ದವು. ಇದೇ ದೃಶ್ಯಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. 'ಗೀತಾ ಗೋವಿಂದಂ', 'ನೋಟ' ಚಿತ್ರಗಳಲ್ಲಿಯೂ ಕಿಸ್ಸಿಂಗ್ ದೃಶ್ಯಗಳು ಮುಂದುವರೆದವು. ಈಗ 'ಡಿಯರ್ ಕಮ್ರೇಡ್'ನಲ್ಲಿಯೂ ಕಿಸ್ಸಿಂಗ್ ಸೀನ್ ಗಳು ಇರುವ ಸೂಚನೆ ಟ್ರೇಲರ್ ನಲ್ಲಿಯೇ ಸಿಕ್ಕಿದೆ. ಈ ಎಲ್ಲ ಸಿನಿಮಾಗಳು ವಿಜಯ್ ದೇವರಕೊಂಡರನ್ನು ಕಿಸ್ಸಿಂಗ್ ಸ್ಟಾರ್ ಮಾಡಿದೆ.


Click it and Unblock the Notifications











