ರಶ್ಮಿಕಾ ಹುಟ್ಟುಹಬ್ಬಕ್ಕೆ ವಿಜಯ್ ದೇವರಕೊಂಡ ಕಡೆಯಿಂದ ಸ್ಪೆಷಲ್ ಗಿಫ್ಟ್

Recommended Video

ರಶ್ಮಿಕಾಗೆ ಭರ್ಜರಿ ಗಿಫ್ಟ್ ನೀಡಿದ ವಿಜಯ್ ದೇವರಕೊಂಡ..! | FILMIBEAT KANNADA

ನಟಿ ರಶ್ಮಿಕಾ ಮಂದಣ್ಣ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕ್ಯೂಟ್ ನೆಸ್ ಮೂಲಕವೇ ಅಭಿಮಾನಿಗಳ ನಿದ್ದೆಗೆಡಿಸಿರುವ ರಶ್ಮಿಕಾಗೆ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ. ಕನ್ನಡ, ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಬ್ಯುಸಿ ಇರುವ ಸಾನ್ವಿಗೆ ಅಭಿಮಾನಿಗಳಿಂದ ಮಾತ್ರವಲ್ಲದೆ ಚಿತ್ರರಂಗದ ಕಡೆಯಿಂದನೂ ಸ್ಪೆಷಲ್ ವಿಶಸ್ ಮತ್ತು ಗಿಫ್ಟ್ ಗಳು ಸಿಗುತ್ತಿವೆ.

ಸೌತ್ ಸಿನಿ ಇಂಡಸ್ಟ್ರಿಯ ಹಾಟ್ ಫೇವರಿಟ್ ರಶ್ಮಿಕಾಗೆ ತೆಲುಗು ನಟ ವಿಜಯ್ ದೇವರಕೊಂಡ ಕಡೆಯಿಂದ ಏನು ಗಿಫ್ಟ್ ಸಿಕ್ಕಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಅದರಲ್ಲೂ ಡಿಯರ್ ಕಾಮ್ರೇಡ್ ಸಿನಿಮಾದಲ್ಲಿನ ಇಬ್ಬರ ಲಿಪ್ ಲಾಕ್ ದೃಶ್ಯ ಹಾಟ್ ಟಾಪಿಕ್ ಆಗಿರುವ ಈ ಸಮಯದಲ್ಲಿ ವಿಜಯ್ ಗಿಫ್ಟ್ ಭಾರಿ ಬಗ್ಗೆ ಚರ್ಚೆಯಾಗುತ್ತಿದೆ.

ರಶ್ಮಿಕಾ ಅವರನ್ನು ತುಂಬಾ ಕೇರ್ ಮಾಡುವ ವಿಜಯ್ ಗೆಳತಿಗೆ ಏನು ಗಿಫ್ಟ್ ಕೊಟ್ಟಿರಬಹುದು ಎನ್ನುವ ಕುತೂಹಲ ಒಂದೆಡೆ ಆದ್ರೆ, ಇನ್ನೊಂದೆಡೆ ವಿಜಯ್ ತುಂಬಾ ವಿಶೇಷವಾಗಿ ರಶ್ಮಿಕಾ ಅವರಿಗೆ ಶುಭಾಶಯ ತಿಳಿಸಿ ಅಚ್ಚರಿ ಮೂಡಿಸಿದ್ದಾರೆ. ವಿಜಯ್ ವಿಶ್ ಮಾಡಿರುವುದನ್ನು ನೋಡಿ ಹೀಗೂ ಶುಭಾಶಯ ತಿಳಿಸಬಹುದಾ ಎಂದು ಅಚ್ಚರಿ ಪಡುತ್ತಿದ್ದಾರೆ. ಮುಂದೆ ಓದಿ..

ಪ್ರೀತಿಯ ಲಿಲ್ಲಿಗೆ ವಿಜಯ್ ಶುಭಾಶಯ

ಪ್ರೀತಿಯ ಲಿಲ್ಲಿಗೆ ವಿಜಯ್ ಶುಭಾಶಯ

ವಿಜಯ್ ದೇವರಕೊಂಡ ರಶ್ಮಿಕಾ ಅವರನ್ನು ಲಿಲ್ಲಿ ಎಂದು ಕರೆಯುತ್ತಾರೆ. ಅಚ್ಚರಿ ಪಡಬೇಡಿ ಇದು 'ಡಿಯರ್ ಕಾಮ್ರೇಡ್' ಸಿನಿಮಾದಲ್ಲಿ ರಶ್ಮಿಕಾ ಹೆಸರು. ಅದೇ ಹೆಸರನ್ನು ಹೇಳಿ ಲಿಲ್ಲಿಗೆ ಶುಭಾಶಯ ತಿಳಿಸಿದ್ದಾರೆ ವಿಜಯ್. 'ನಾವು ತಮಾಷೆ ಮಾಡುತ್ತೇವೆ, ಆದ್ರೆ ನೀನು ಬೇಜಾರು ಮಾಡಿಕೊಳ್ಳಬೇಡ, ನೀನು ನಮ್ಮ ಚಿತ್ರತಂಡದಲ್ಲಿದ್ದರೆ ಸಂಭ್ರಮ, ನಿನ್ನ ಕಾರ್ಯದಕ್ಷತೆ ನಮಗೆ ಸ್ಫೂರ್ತಿ, ದಿನಪೂರ್ತಿ ನಗುತ್ತಿರು'. ಎಂದು ವಿಶೇಷವಾಗಿ ಶುಭಾಶಯ ತಿಳಿಸಿದ್ದಾರೆ.

ರಶ್ಮಿಕಾಗೆ ವಿಜಯ್ ಕೊಡ್ತಾರಂತೆ ಸ್ಪೆಷಲ್ ಗಿಫ್ಟ್

ರಶ್ಮಿಕಾಗೆ ವಿಜಯ್ ಕೊಡ್ತಾರಂತೆ ಸ್ಪೆಷಲ್ ಗಿಫ್ಟ್

ವಿಜಯ್ ಫೇವರಿಟ್ ನಟಿ ಮತ್ತು ಗೆಳತಿ ಆಗಿರುವ ರಶ್ಮಿಕಾ ಮಂದಣ್ಣಗೆ ವಿಶೇಷವಾದ ಉಡುಗೊರೆಯನ್ನು ನೀಡಲು ಪ್ಲಾನ್ ಮಾಡಿಕೊಂಡಿದ್ದಾರಂತೆ. ಆದ್ರೆ, ಇದು ವಿಜಯ್ ಕಡೆಯಿಂದ ಮಾತ್ರವಲ್ಲದೇ ಇಡೀ ಚಿತ್ರತಂಡದ ಕಡೆಯಿಂದ ಸಿಗುತ್ತಿರುವ ಗಿಫ್ಟ್ ಅಗಿದೆ. 'ಡಿಯರ್ ಕಾಮ್ರೇಡ್' ಚಿತ್ರದ ಮೊದಲ ಹಾಡನ್ನು ಮುಂದಿನ ಸೋಮವಾರ ರಿಲೀಸ್ ಮಾಡುವ ಮೂಲಕ ರಶ್ಮಿಕಾ ಅವರಿಗೆ ಗಿಫ್ಟ್ ಆಗಿ ನೀಡುತ್ತಿದೆ ಚಿತ್ರತಂಡ.

ನಿರೀಕ್ಷೆ ಹೆಚ್ಚಿಸಿದ ಡಿಯರ್ ಕಾಮ್ರೇಡ್ ಸಿನಿಮಾ

ನಿರೀಕ್ಷೆ ಹೆಚ್ಚಿಸಿದ ಡಿಯರ್ ಕಾಮ್ರೇಡ್ ಸಿನಿಮಾ

ಡಿಯರ್ ಕಾಮ್ರೇಡ್ ಸಿನಿಮಾ ಮೂಲಕ ಸೌತ್ ನಿಸಿ ಇಂಡಸ್ಟ್ರಿಯ ಗಮನ ಸೆಳೆದಿರುವ ರಶ್ಮಿಕಾ ಹುಟ್ಟಹಬ್ಬಕ್ಕೆ 'ಡಿಯರ್ ಕಾಮ್ರೇಡ್' ಚಿತ್ರದಿಂದ ರಶ್ಮಿಕಾ ಅವರ ಲಿಲ್ಲಿ ಲುಕ್ ರಿಲೀಸ್ ಮಾಡಲಾಗಿದೆ. 'ಗೀತಾ ಗೋವಿಂದಂ' ಚಿತ್ರದ ನಂತರ ಎರಡನೇ ಬಾರಿಗೆ ವಿಜಯ್ ದೇವರಕೊಂಡ ಜೊತೆ ತೆರೆ ಹಂಚಿಕೊಳ್ಳುತ್ತಿರುವ ರಶ್ಮಿಕಾ ಅವರ 'ಡಿಯರ್ ಕಾಮ್ರೇಡ್' ಸಿನಿಮಾ ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ಅಲ್ಲದೆ ಪುಟ್ಟ ಟೀಸರ್ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

ಮೂರು ಭಾಷೆಗಳಲ್ಲಿ ಬ್ಯುಸಿ ಇರುವ ರಶ್ಮಿಕಾ

ಮೂರು ಭಾಷೆಗಳಲ್ಲಿ ಬ್ಯುಸಿ ಇರುವ ರಶ್ಮಿಕಾ

ರಶ್ಮಿಕಾ ಸದ್ಯ ದಕ್ಷಿಣ ಭಾರತದ ಮೂರು ಭಾಷೆಯಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡದಲ್ಲಿ ಧ್ರುವ ಸರ್ಜಾ ಜೊತೆ 'ಪೊಗರು' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನು ತೆಲುಗಿನಲ್ಲಿ 'ಡಿಯರ್ ಕಾಮ್ರೇಡ್' ಜೊತೆಗೆ ಇತ್ತೀಚಿಗಷ್ಟೆ ನಟ ನಿತಿನ್ ಜೊತೆ 'ಭೀಷ್ಮ' ಎನ್ನುವ ಹೊಸ ಸಿನಿಮಾ ಕೂಡ ಅನೌನ್ಸ್ ಮಾಡಿದ್ದಾರೆ. ಇದರ ಜೊತೆಗೆ ತಮಿಳು ನಟ ಕಾರ್ತಿಕ್ ಗೆ ನಾಯಕಿಯಾಗುವ ಮೂಲಕ ತಮಿಳು ಚಿತ್ರರಂಗದಲ್ಲು ಬ್ಯುಸಿಯಾಗಿದ್ದಾರೆ.

More from Filmibeat

English summary
telugu actor vijay devarakonda special birthday wish to actress rashmika mandanna. he decided to give special gift to rashmika mandanna for her birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X