ಬೆಂಗಳೂರಿಗೆ ಬಂದಿದ್ದ ವಿಜಯ ದೇವರಕೊಂಡ ರಕ್ಷಿತ್, ರಶ್ಮಿಕಾ ಬಗ್ಗೆ ಹೀಗಂದ್ರು!

Recommended Video

ರಶ್ಮಿಕಾಗೆ ಮುತ್ತು ಕೊಟ್ಟ ಬಗ್ಗೆ ವಿಜಯ್ ಹೇಳಿದ್ದೇನು..? | Filmibeat Kannada

ಸ್ಯಾಂಡಲ್ ವುಡ್ ನ ಕಿರಿಕ್ ಜೋಡಿ ಎಂದೇ ಫೇಮಸ್ ಆಗಿದ್ದ ನಟ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ನಡುವೆ ಬಿರುಕು ಮೂಡಿರುವ ಸಂಗತಿ ಎಲ್ಲರಿಗೆ ತಿಳಿದಿದೆ. ಈ ಪ್ರೇಮ ಪಕ್ಷಗಳು ಆಕಾಶದಲ್ಲಿ ಹಾರುವ ಸಮಯಕ್ಕೆ ಬ್ರೇಕ್ ಅಪ್ ಎಂಬ ಕಲ್ಲು ಬಿದ್ದಿದೆ.

ರಕ್ಷಿತ್ ಹಾಗೂ ರಶ್ಮಿಕಾ ಇಬ್ಬರು ಬೇರೆ ಬೇರೆ ಆಗುವುದಕ್ಕೆ ಸೂಕ್ತ ಕಾರಣ ಏನು? ಎಂಬುದು ಯಾರಿಗೂ ತಿಳಿದಿಲ್ಲ. ಆದರೆ, ಇಷ್ಟೆಲ್ಲ ರಾದ್ಧಾಂತ ಮೊದಲು ಶುರು ಆಗಿದ್ದು 'ಗೀತಾ ಗೋವಿಂದಂ' ಸಿನಿಮಾದ ಕಿಸ್ಸಿಂಗ್ ದೃಶ್ಯದಿಂದ ಎನ್ನುವ ಗಾಸಿಪ್ ಒಂದು ಕಡೆ ಇದೆ. ಹಾಗಾದ್ರೆ, ಅದು ನಿಜಾನಾ ಈ ಬಗ್ಗೆ ಈಗ ನಟ ವಿಜಯ್ ದೇವರಕೊಂಡ ಮಾತನಾಡಿದ್ದಾರೆ.

ಸದ್ಯ, ರಕ್ಷಿತ್ ಹಾಗೂ ರಶ್ಮಿಕಾ ಬಗ್ಗೆ ತೆಲುಗು ನಟ ವಿಜಯ್ ದೇವರಕೊಂಡ ಹೇಳಿಕೆ ನೀಡಿದ್ದಾರೆ. ಅವರಿಬ್ಬರ ಬ್ರೇಕ್ ಅಪ್ ಗೆ ಸಿನಿಮಾದ ಈ ದೃಶ್ಯ ಕಾರಣವಾಯ್ತಾ? ಎನ್ನುವ ಪ್ರಶ್ನೆಗೆ ಅವರು ಮೊದಲ ಬಾರಿಗೆ ಉತ್ತರ ನೀಡಿದ್ದಾರೆ. ಮುಂದೆ ಓದಿ...

ಬೆಂಗಳೂರಿಗೆ ಬಂದಿದ್ದ ವಿಜಯ್ ದೇವರಕೊಂಡ

ಬೆಂಗಳೂರಿಗೆ ಬಂದಿದ್ದ ವಿಜಯ್ ದೇವರಕೊಂಡ

ನಿನ್ನೆ ತೆಲುಗು ನಟ ವಿಜಯ್ ದೇವರಕೊಂಡ‌ ತಮ್ಮ 'ನೋಟ' ಸಿನಿಮಾದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಈ ಸುದ್ದಿಗೋಷ್ಠಿ ಕಾರ್ಯಕ್ರಮದಲ್ಲಿ ವಿಜಯ್ ಗೆ ರಶ್ಮಿಕಾ ಬ್ರೇಕ್ ಅಪ್ ಪ್ರಶ್ನೆ ಕೂಡ ತೇಲಿ ಬಂತು. ಸೊ, ಇಷ್ಟ ಇಲ್ಲದ್ದರೂ ವಿಜಯ್ ಉತ್ತರ ನೀಡಲು ಮುಂದಾದರು.

ರಶ್ಮಿಕಾ ಒಬ್ಬ ಅದ್ಭುತ ಸಹ ನಟಿ

ರಶ್ಮಿಕಾ ಒಬ್ಬ ಅದ್ಭುತ ಸಹ ನಟಿ

"ರಶ್ಮಿಕಾ ಒಬ್ಬ ಅದ್ಭುತ ಸಹ ನಟಿ. 'ಗೀತಾ ಗೋವಿಂದಂ' ಸಿನಿಮಾದಲ್ಲಿ ನಾಯಕಿ ಪಾತ್ರಕ್ಕೆ ತುಂಬ ಪ್ರಾಮುಖ್ಯತೆ ಇತ್ತು. ರಶ್ಮಿಕಾ ಬ್ರಿಲಿಯಂಟ್ ಆಗಿ ಚಿತ್ರದಲ್ಲಿ ನಟಿಸಿದ್ದಾರೆ. ಕೆಲವೇ ಕೆಲವು ಸಿನಿಮಾದಲ್ಲಿ ಮಾತ್ರ ಹೀರೋಯಿನ್ ಹೆಸರನ್ನು ಚಿತ್ರದ ಪೋಸ್ಟರ್ ನಲ್ಲಿ ಹಾಕಲಾಗುತ್ತದೆ. ಆದರೆ, 'ಗೀತಾ ಗೋವಿಂದಂ' ಚಿತ್ರದಲ್ಲಿ ನನ್ನ ಹೆಸರಿನ ಜೊತೆಗೆ ರಶ್ಮಿಕಾ ಮಂದಣ್ಣ starting ಎಂದು ಅವರ ಹೆಸರು ಕೂಡ ಇತ್ತು'' - ವಿಜಯ ದೇವರಕೊಂಡ, ನಟ

 I love Rakshith's work

I love Rakshith's work

"ಕಿಸ್ಸಿಂಗ್ ದೃಶ್ಯ ಲೀಕ್ ಆಗಿದ್ದು, ನನಗೂ ಬೇಸರ ತಂದಿರುವ ಸಂಗತಿ. ಇದರಿಂದ ಯಾವ ರೀತಿಯ ತೊಂದರೆ ಆಗುತ್ತದೆ ಎನ್ನುವುದು ನನಗೆ ತಿಳಿದಿದೆ. ಇಬ್ಬರು ವ್ಯಕ್ತಿಗಳ ವೈಯಕ್ತಿಕ ವಿಚಾರದ ಬಗ್ಗೆ ನಾನು ಮಾತನಾಡುವುದು ಸೂಕ್ತವಲ್ಲ. ಅವರಿಬ್ಬರನ್ನು ನಾನು ಗೌರವಿಸುತ್ತೇನೆ. I love Rakshith's work, i love Rashmika as a co star." - ವಿಜಯ ದೇವರಕೊಂಡ, ನಟ

ಈ ಬಗ್ಗೆ ಮಾತನಾಡಲು ನಾನು ಮೂರನೇಯ ವ್ಯಕ್ತಿ

ಈ ಬಗ್ಗೆ ಮಾತನಾಡಲು ನಾನು ಮೂರನೇಯ ವ್ಯಕ್ತಿ

"ರಕ್ಷಿತ್ ಹಾಗೂ ರಶ್ಮಿಕಾ ನಡುವಿನ ಘಟನೆಯ ಬಗ್ಗೆ ಮಾತನಾಡಲು ನಾನು ಮೂರನೇಯ ವ್ಯಕ್ತಿ. ಅವರಿಗೆ ಈ ಸುದ್ದಿಗಳಿಂದ ಎಷ್ಟು ನೋವಾಗುತ್ತದೆ ಎನ್ನುವ ಅರಿವು ನನಗೆ ಇದೆ. ಅವರನ್ನು ಅವರ ಪಾಡಿಗೆ ಸ್ಪಲ್ಪ ಬಿಡಿ. ಅವರ ಭಾವನೆ ಮತ್ತು ನೋವುಗಳು ಬೇರೆಯವರ ಮನರಂಜನೆ ಆಗಬಾರದು.'' - ವಿಜಯ ದೇವರಕೊಂಡ, ನಟ

ನಾಳೆ 'ನೋಟ' ಬಿಡುಗಡೆ

ನಾಳೆ 'ನೋಟ' ಬಿಡುಗಡೆ

ವಿಜಯ ದೇವರಕೊಂಡ ಅವರ 'ನೋಟ' ಸಿನಿಮಾ ನಾಳೆ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಸುದ್ದಿಗೋಷ್ಟಿ ಕಾರ್ಯಕ್ರಮ ನಿನ್ನೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದಿದೆ. ನಟ ಶಿವರಾಜ್ ಕುಮಾರ್ ಹಾಗೂ ನಿರ್ಮಾಪಕ ರಾಜ್ ಲೈನ್ ವೆಂಕಟೇಶ್ ಈ ಕಾರ್ಯಕ್ರಮದಲ್ಲಿ ವಿಜಯ್ ಗೆ ಸಾಥ್ ನೀಡಿದ್ದಾರೆ.

More from Filmibeat

English summary
Telugu actor Vijay Devarakonda spoke about Rakshith Shetty and Rashmika Mandanna's break up controversy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X