twitter
    For Quick Alerts
    ALLOW NOTIFICATIONS  
    For Daily Alerts

    'ಲೈಗರ್' ಸಿನಿಮಾ ಸುದ್ದಿಗೋಷ್ಠಿ ಅವಾಂತರಗಳು: ತಳಬುಡ ಗೊತ್ತಿಲ್ಲದ ಆಯೋಜಕರಿಗೆ ಏನ್ ಹೇಳೋದು?

    |

    ಯೂಟ್ಯೂಬ್‌ಗಳ ಭರಾಟೆಯಲ್ಲಿ ನಿಜವಾದ ಪತ್ರಿಕೋದ್ಯಮ ಬೆಲೆಯೇ ಇಲ್ಲದಂತಾಗಿದೆ. ಅದರಲ್ಲೂ ಸಿನಿಮಾ ಪತ್ರಕರ್ತರ ಪಾಡು ಆ ದೇವರಿಗೆ ಪ್ರೀತಿ. ಹಿಂದೆ ಐದಾರು ಪತ್ರಿಕೆಗಳ ವರದಿಗಾರರು ಸಿನಿಮಾ ವರದಿಗಾರಿಕೆಗೆ ಬರುತ್ತಿದ್ದರು. ನಂತರ ವಿದ್ಯುನ್ಮಾನ ಮಾಧ್ಯಮಗಳು ಶುರುವಾದವು. ಆಗಲೂ ಒಂದು ಮಟ್ಟಿಗೆ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಯೂಟ್ಯೂಬ್‌ಗಳ ಹಾವಳಿ ಶುರುವಾದ ಮೇಲೆ ವರದಿಗಾರಿಕೆಗೆ ಬೆಲೆಯೇ ಇಲ್ಲದಂತಾಗಿದೆ. ಇವತ್ತು ನಡೆದ 'ಲೈಗರ್' ಸಿನಿಮಾ ಸುದ್ದಿಗೋಷ್ಠಿಯಲ್ಲಿ ಇಂತಹ ಅವಾಂತರಗಳಿಗೆ ಸಾಕ್ಷಿಯಾಗಿತ್ತು. ಕಂಡ ಕಂಡವರೆಲ್ಲಾ ಕ್ಯಾಮರಾ ಹಿಡಿದು ಬಂದ ಪರಿಣಾಮ ಸುದ್ದಿಗೋಷ್ಠಿಗೆ ಅರ್ಥವೇ ಇಲ್ಲದಂತಾಗಿತ್ತು. ಪತ್ರಕರ್ತರು ಇದೆಂಥಹ ಸುದ್ದಿಗೋಷ್ಠಿ ಎಂದು ತಲೆ ಕೆಡಿಸಿಕೊಳ್ಳುವಂತಾಯಿತು.

    ಪ್ಯಾನ್ ಇಂಡಿಯಾ ಸಿನಿಮಾಗಳ ಆರ್ಭಟ ಜೋರಾಗಿದೆ. ಪರಭಾಷೆಯ ಸ್ಟಾರ್‌ಗಳು ಬಂದಾಗ ಬೇರೆಯವರು ಯಾರೋ ಪರ್ತಕರ್ತರ ಹೆಸರಿನಲ್ಲಿ ಸುದ್ದಿಗೋಷ್ಠಿಗೆ ಬಂದು ಬಿಡುತ್ತಾರೆ. ಬಾಯಿಗೆ ಬಂದಂತೆಲ್ಲಾ ಪ್ರಶ್ನೆಗಳನ್ನು ಕೇಳುತ್ತಾರೆ. ನಿಮ್ಮನ್ನು ತಬ್ಬಿಕೊಳ್ಳಬಹುದಾ? ನಿಮ್ಮನ್ನು ಮುಟ್ಟಬಹುದಾ? ಅಂತೆಲ್ಲಾ ಮಂಗಾಟ ಆಡುವುದಕ್ಕೆ ಶುರು ಮಾಡುತ್ತಾರೆ. ಇನ್ನು ವೇದಿಕೆಯಲ್ಲಿರುವ ನಿರೂಪಕಿಯರು ಬಲವಂತವಾಗಿ ಪರಭಾಷಾ ಕಲಾವಿದರ ಬಾಯಲ್ಲಿ ಕನ್ನಡ ಮಾತನಾಡಿಸುವ ಸಾಹಸ ಮಾಡುತ್ತಾರೆ. ಪತ್ರಕರ್ತರ ನಡುವೆ ಅಭಿಮಾನಿಗಳು ಕೂಡ ಇಂತಹ ಸುದ್ದಿಗೋಷ್ಠಿಗೆ ಬಂದು ದೊಂಬಿಯಾಗುತ್ತದೆ. ನಿಜವಾಗಿಯೂ ವರದಿಗಾರಿಕೆಗೆ ಹೋದವರು ಸರಿಯಾದ ಮಾಹಿತಿ ಸಿಗದೇ ಸುದ್ದಿಗೋಷ್ಠಿ ಆಯೋಜರನ್ನು ಬೈದುಕೊಂಡು ಬರುವಂತಾಗಿದೆ. ಇತ್ತೀಚೆಗೆ ಎಲ್ಲಾ ದೊಡ್ಡ ದೊಡ್ಡ ಸಿನಿಮಾಗಳ ಸುದ್ದಿಗೋಷ್ಠಿಯಲ್ಲಿ ಇದು ಸರ್ವೇಸಾಧಾರಾಣ ಅನ್ನುವಂತಾಗಿಬಿಟ್ಟಿದೆ.

    'ಲೈಗರ್'ಗೆ ಸೆನ್ಸಾರ್ ಬೋರ್ಡ್‌ನಿಂದ ಆಕ್ಷೇಪಣೆ!'ಲೈಗರ್'ಗೆ ಸೆನ್ಸಾರ್ ಬೋರ್ಡ್‌ನಿಂದ ಆಕ್ಷೇಪಣೆ!

    ಹಿರಿಯ ಸಿನಿಮಾ ಪತ್ರಿಕಾ ಪ್ರಚಾರಕರಾದ ಸುಧೀಂದ್ರ ವೆಂಕಟೇಶ್, ನಾಗೇಂದ್ರ , ವಿಜಯ್‌ಕುಮಾರ್‌ರಂತಹವರು ಬಹಳ ವ್ಯವಸ್ಥಿತವಾಗಿ ಸುದ್ದಿಗೋಷ್ಠಿಗಳನ್ನು ಆಯೋಜಿಸುತ್ತಾರೆ. ಅವರಿಗೂ ಕೂಡ ಇತ್ತೀಚಿನ ದಿನಗಳಲ್ಲಿ ಯೂಟ್ಯೂಬರ್‌ಗಳ ಹಾವಳಿ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೂ ಪತ್ರಿಕೆ ಹಾಗೂ ವಿದ್ಯುನ್ಮಾನ ಮಾಧ್ಯಮ ವರದಿಗಾರರಿಗೆ ಪ್ರಶ್ನೆಗಳನ್ನು ಕೇಳಲು, ಉತ್ತರಗಳನ್ನು ಪಡೆಯಲು ಅನುವು ಮಾಡಿಕೊಡುತ್ತಾರೆ. ಆದರೆ, ಹಿರಿಯ ಪತ್ರಿಕಾ ಸಂಪರ್ಕಾಧಿಕಾರಿಗಳ ದಾಟಿಯನ್ನು ಬದಲಿಸಲು ಬಂದ ಹೊಸ ಸಿನಿಮಾ ಪತ್ರಿಕಾ ಪ್ರಚಾರಕರಿಗೆ ಇದೆಲ್ಲಾ ಬೇಕಾಗಿಲ್ಲ.

    Vijay Devarakonda Starrer Liger Movie Bangalore Press Meet Journalists Show Angry towards PRO

    ಕ್ಯಾಮರಾಗಳನ್ನು ತೋರಿಸಿ ಬಡಾಯಿ ಕೊಚ್ಚಿಕೊಳ್ಳುವುದೇ ಅವರಿಗೆ ಹೆಚ್ಚುಗಾರಿಕೆಯಾಗಿಬಿಟ್ಟಿದೆ. ನಮಗೆ ಬಂದಷ್ಟು ಬರಲಿ, ಯಾರು ಸುದ್ದಿಗೋಷ್ಠಿಗೆ ಬಂದರೆ ಏನು ? ಬರದೇ ಇದ್ದರೆ ಏನು ? ಅನ್ನುವ ಮನಸ್ಥಿತಿಗೆ ಬಂದುಬಿಟ್ಟಂತೆ ಕಾಣುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾಗಳ ಸುದ್ದಿಗೋಷ್ಠಿ ಆಯೋಜನೆಯ ಅವಕಾಶ ಸಿಕ್ಕಿದರಂತೂ ಮುಗಿದೇ ಹೋಯಿತು. ಪತ್ರಕರ್ತರಿಗೆ ಜಾಗವೇ ಸಿಗದಂತೆ ಮಂಗಾಟ ಆಡಲು ಬರುವವರನ್ನೆಲ್ಲಾ ಕೂರಿಸಿ ಸುದ್ದಿಗೋಷ್ಠಿ ನಡೆಸುತ್ತಾರೆ. ಕೆಲವರು ಸ್ಟಾರ್‌ಗಳನ್ನು ನೋಡಿ, ಮೈಕ್ ಹಿಡಿದು ಮಾತನಾಡಿ ಚಪಲ ತೀರಿಸಿಕೊಳ್ಳೋ ಹಪಾಹಪಿ. ಇಂತಹವರ ಮಧ್ಯೆ ಪತ್ರಕರ್ತರ ಗೋಳು ಕೇಳುವವರೇ ಇಲ್ಲದಂತಾಗುತ್ತದೆ.

    ಇನ್ನಾದರೂ ಆಯೋಜಕರು, ಸಿನಿಮಾ ನಿರ್ಮಾಪಕರು ಈ ಬಗ್ಗೆ ಗಮನ ಹರಿಸಬೇಕಿದೆ. ಇಲ್ಲದೇ ಹೋದರೆ ಅವರು ನಡೆಸುವ ಸುದ್ದಿಗೋಷ್ಠಿಯಿಂದ ಯಾರಿಗೂ ಲಾಭ ಇಲ್ಲದಂತಾಗುತ್ತದೆ. ಇದೇ ಕಾರಣಕ್ಕೆ ಪ್ಯಾನ್‌ ಇಂಡಿಯಾ ಸಿನಿಮಾ ಜವಾಬ್ದಾರಿ ವಹಿಸಿಕೊಳ್ಳಲು ಹಿರಿಯ ಸಿನಿಮಾ ಪತ್ರಿಕಾ ಪ್ರಚಾರಕರು ಹಿಂದೇಟು ಹಾಕುತ್ತಾರೆ. ಸುದ್ದಿಗೋಷ್ಠಿಗಳಲ್ಲಿ ಇನ್ನಾದರೂ ಈ ವಾತಾವರಣ ಬದಲಾಗಬೇಕಿದೆ. ಇಲ್ಲದೇ ಇದ್ದರೆ ನಿಜವಾದ ಪತ್ರಿಕೋದ್ಯಮಕ್ಕೆ ಬೆಲೆಯೇ ಇಲ್ಲದಂತಾಗುತ್ತದೆ.

    Vijay Devarakonda Starrer Liger Movie Bangalore Press Meet Journalists Show Angry towards PRO

    ಪೂರಿ ಜಗನ್ನಾಥ್ ನಿರ್ದೇಶನದ 'ಲೈಗರ್' ಚಿತ್ರದಲ್ಲಿ ವಿಜಯ್ ದೇವರಕೊಂಡ, ಅನನ್ಯಾ ಪಾಂಡೆ ಲೀಡ್ ರೋಲ್‌ಗಳಲ್ಲಿ ನಟಿಸಿದ್ದಾರೆ. ಕರಣ್ ಜೋಹರ್, ಚಾರ್ಮಿ, ಪೂರಿ ಜಗನ್ನಾಥ್ ಈ ಬಹುಕೋಟಿ ವೆಚ್ಚದ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಬಿ. ಕೆ ಗಂಗಾಧರ್ ಹಾಗೂ ಕ್ರಿಸ್ಟಲ್ ಪಾರ್ಕ್ ಚಂದ್ರಶೇಖರ್ ಚಿತ್ರದ ಕರ್ನಾಟಕದ ಹಕ್ಕುಗಳನ್ನು ಖರೀದಿಸಿದ್ದಾರೆ. ಆಗಸ್ಟ್ 25ಕ್ಕೆ ವಿಶ್ವದಾದ್ಯಂತ 'ಲೈಗರ್' ಆರ್ಭಟ ಶುರುವಾಗಲಿದೆ.

    Recommended Video

    Vijay Deverakonda | ಆಗಸ್ಟ್‌ 25ಕ್ಕೆ ಚಿಂದಿ ಉಡಾಯಿಸೊಣ ಎಂದ ವಿಜಯ್ ದೇವರಕೊಂಡ | Filmibeat Kannada

    English summary
    Vijay Devarakonda Starrer Liger Movie Bangalore Press Meet Journalists Show Angry towards PRO. Know More.
    Saturday, August 20, 2022, 0:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X