'ತಂದೆ'ಯಾದ ತೆಲುಗು ನಟ ವಿಜಯ್ ದೇವರಕೊಂಡ.!
"ತಂದೆ'ಯಾದ ತೆಲುಗು ನಟ ವಿಜಯ್ ದೇವರಕೊಂಡ.!"- ಎಂಬ ಶೀರ್ಷಿಕೆ ಓದಿದ ಕೂಡಲೇ ಗಾಬರಿಯಾಗಬೇಡಿ. ನಾವು ಹೇಳುತ್ತಿರುವುದು ರಿಯಲ್ ಅಲ್ಲ ರೀಲ್ ಸುದ್ದಿ ಅನ್ನೋದು ನಿಮ್ಮ ಗಮನದಲ್ಲಿರಲಿ.
'ಪೆಳ್ಳಿ ಚೂಪುಲು', 'ಅರ್ಜುನ್ ರೆಡ್ಡಿ' ಚಿತ್ರಗಳ ಮೂಲಕ ತೆಲುಗು ಸಿನಿ ಅಂಗಳದಲ್ಲಿ ಸಂಚಲನ ಸೃಷ್ಟಿಸಿದ ನಟ ವಿಜಯ್ ದೇವರಕೊಂಡ. 'ಗೀತ ಗೋವಿಂದಂ' ಚಿತ್ರದ ಮೂಲಕ ಹುಡುಗಿಯರ ಹಾರ್ಟ್ ಗೆ ಕನ್ನ ಹಾಕಿದ ವಿಜಯ್ ದೇವರಕೊಂಡ, ಸದ್ಯ 'ಡಿಯರ್ ಕಾಮ್ರೇಡ್' ಚಿತ್ರದ ಚಿತ್ರೀಕರಣದಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ.
ಹೀಗಿರುವಾಗಲೇ ಒಂದು ಹೊಸ ಸಿನಿಮಾಗೆ ವಿಜಯ್ ದೇವರಕೊಂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಆ ಚಿತ್ರದಲ್ಲಿ ತಂದೆಯಾಗಿ ವಿಜಯ್ ದೇವರಕೊಂಡ ಕಾಣಿಸಿಕೊಳ್ಳಲಿದ್ದಾರೆ. ಹೆಚ್ಚಿನ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿದೆ ಓದಿರಿ....

ಕ್ರಾಂತಿ ಮಾಧವ್ ಚಿತ್ರದಲ್ಲಿ ವಿಜಯ್ ದೇವರಕೊಂಡ
ನಿರ್ದೇಶಕ ಕ್ರಾಂತಿ ಮಾಧವ್ ಆಕ್ಷನ್ ಕಟ್ ಹೇಳಲಿರುವ ಹೊಸ ಚಿತ್ರದಲ್ಲಿ ಅಭಿನಯಿಸಲು ವಿಜಯ್ ದೇವರಕೊಂಡ ಹಸಿರು ನಿಶಾನೆ ಕೊಟ್ಟಿದ್ದಾರಂತೆ. ಇಂಟರೆಸ್ಟಿಂಗ್ ಅಂದರೆ ಈ ಸಿನಿಮಾದಲ್ಲಿ ಅವರು ತಂದೆಯ ಪಾತ್ರ ಪೋಷಿಸುತ್ತಿದ್ದಾರೆ.

ಎಂಟು ವರ್ಷದ ಮಗುವಿನ ತಂದೆ
ನಟ ವಿಜಯ್ ದೇವರಕೊಂಡ ರವರಿಗೆ ಇನ್ನೂ 29 ವರ್ಷ ವಯಸ್ಸು. ಹೀಗಿದ್ದರೂ ತೆರೆ ಮೇಲೆ ಎಂಟು ವರ್ಷದ ಮಗುವಿನ ತಂದೆಯಾಗಿ ನಟಿಸಲು ವಿಜಯ್ ದೇವರಕೊಂಡ ಒಪ್ಪಿಕೊಂಡಿದ್ದಾರಂತೆ. ಯಾವುದೇ ಪಾತ್ರ ಕೊಟ್ಟರೂ, ಅದಕ್ಕೆ ಜೀವ ತುಂಬುವ ವಿಜಯ್ ದೇವರಕೊಂಡ ತಂದೆಯಾಗಿ ಹೇಗೆ ಕಾಣಿಸಿಕೊಳ್ಳುತ್ತಾರೆ ಎಂಬುದೇ ಸದ್ಯದ ಕುತೂಹಲ.

ನಾಯಕಿಯರು ಯಾರು.?
ಕ್ರಾಂತಿ ಮಾಧವ್ ನಿರ್ದೇಶನದ ಇನ್ನೂ ಹೆಸರಿಡದ ಈ ಚಿತ್ರಕ್ಕೆ ನಾಯಕಿಯರಾಗಿ ರಾಶಿ ಖನ್ನ, ಐಶ್ವರ್ಯ ರಾಜೇಶ್, ಇಸಬೆಲ್ ಆಯ್ಕೆ ಆಗಿದ್ದಾರೆ. 'ಡಿಯರ್ ಕಾಮ್ರೇಡ್' ಶೂಟಿಂಗ್ ಮುಗಿದ ಬಳಿಕ ಈ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ.

'ಡಿಯರ್ ಕಾಮ್ರೆಡ್' ಮೇಲೆ ಎಲ್ಲರ ಕಣ್ಣು
'ಗೀತ ಗೋವಿಂದಂ' ಸೂಪರ್ ಹಿಟ್ ಆದ ಮೇಲೆ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಕಾಂಬಿನೇಷನ್ ನಲ್ಲಿ ತಯಾರಾಗುತ್ತಿರುವ ಚಿತ್ರ 'ಡಿಯರ್ ಕಾಮ್ರೇಡ್'. ಹೀಗಾಗಿ ಈ ಚಿತ್ರದ ಮೇಲೆ ಎಲ್ಲರ ನಿರೀಕ್ಷೆ ತುಸು ಹೆಚ್ಚಿದೆ.


Click it and Unblock the Notifications











