For Quick Alerts
  ALLOW NOTIFICATIONS  
  For Daily Alerts

  ಲಾಕ್‌ಡೌನ್ ಸಮಯದಲ್ಲಿ ಹೊರಬಂದ ವಿಜಯ್ ದೇವರಕೊಂಡ ಸೇರಿದ್ದು ಪೊಲೀಸ್ ಠಾಣೆ!

  |

  ತೆಲುಗು ನಟ ವಿಜಯ್ ದೇವರಕೊಂಡ ಲಾಕ್‌ಡೌನ್ ಸಮಯದಲ್ಲಿ ಮನೆಯಿಂದ ಹೊರಗೆ ಬಂದಿದ್ದಾರೆ. ಹೊರಗೆ ಬಂದ ಅವರು ಸೀದಾ ಪೊಲೀಸ್ ಠಾಣೆ ಸೇರಿದ್ದಾರೆ.

  ಮದುವೆ ಮೂಡ್ ನಲ್ಲಿದ್ದರೂ ನಿಖಿಲ್ ಬ್ಯುಸಿ | Nikhil weds Revathi | Kumarswamy | AP Arjun

  ಆದರೆ ಅಭಿಮಾನಿಗಳು ಆತಂಕಪಡುವಂತದ್ದೇನೂ ಆಗಿಲ್ಲ. ವಿಜಯ್ ದೇವರಕೊಂಡ ಮನೆಯಿಂದ ಹೊರಗೆ ಬಂದಿರುವುದು, ಪೊಲೀಸ್ ಠಾಣೆಗೆ ಹೋಗಿರುವುದು ನಿಜವೇ ಆದರೂ, ಉದ್ದೇಶ ಬೇರೆ.

  ಕೊರೊನಾ ಪರಿಸ್ಥಿತಿಯಲ್ಲಿ ಬಿಡುವಿಲ್ಲದೆ ದುಡಿಯುತ್ತಿರುವ ಪೊಲೀಸರಿಗೆ ಆತ್ಮಸ್ಥೈರ್ಯ ತುಂಬಲು ವಿಜಯ್ ದೇವರಕೊಂಡ ಅವರು ಹೈದರಾಬಾದ್ ಪೊಲೀಸರೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದರು. ಪೊಲೀಸರಿಗೆ ಆತ್ಮ ಸ್ಥೈರ್ಯ ತುಂಬುವ ಕಾರ್ಯವನ್ನು ಮಾಡಿದ್ದಾರೆ.

  ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತು

  ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತು

  ಹೈದರಾಬಾದ್ ಪೊಲೀಸ್‌ ಕಂಟ್ರೋಲ್‌ ರೂಂ ಗೆ ಭೇಟಿ ನೀಡಿದ್ದ ವಿಜಯ್ ದೇವರಕೊಂಡ ಮೊದಲಿಗೆ ಅಲ್ಲಿದ್ದವರಿಗೆ ಉಚಿತ ಮಾಸ್ಕ್ ವಿತರಣೆ ಮಾಡಿದರು. ನಂತರ ಅಲ್ಲಿಯೇ ಇದ್ದ ಕೆಲವು ಪೊಲೀಸರು ಮತ್ತು ವಿಡಿಯೋ ಕಾಲ್ ಮೂಲಕ ಹಲವು ಪೊಲೀಸರನ್ನುದ್ದೇಶಿಸಿ ಮಾತುಕತೆ ನಡೆಸಿದರು.

  ಪೊಲೀಸರ ಕಾರ್ಯ ಶ್ಲಾಘಿಸಿದ ವಿಜಯ್ ದೇವರಕೊಂಡ

  ಪೊಲೀಸರ ಕಾರ್ಯ ಶ್ಲಾಘಿಸಿದ ವಿಜಯ್ ದೇವರಕೊಂಡ

  ಪೊಲೀಸರು ಮಾಡುತ್ತಿರುವ ಕಾರ್ಯವನ್ನು ಮನಸಾರೆ ಶ್ಲಾಘಿಸಿದ ವಿಜಯ್ ದೇವರಕೊಂಡ, ಸಿನಿಮಾ ವಿಷಯ ಸೇರಿದಂತೆ ತಮಾಷೆಯಾಗಿ ಮಾತನಾಡುತ್ತಾ, ದುಡಿದು ದಣಿದ ಪೊಲೀಸರಿಗೆ ಉತ್ಸಾಹ ತುಂಬುವ ಯತ್ನ ಮಾಡಿದರು.

  ಚಿತ್ರಕ್ಕೆ ನೆಗೆಟಿವ್ ಕಮೆಂಟ್‌ಗಳು ಬಂದಿವೆ

  ಚಿತ್ರಕ್ಕೆ ನೆಗೆಟಿವ್ ಕಮೆಂಟ್‌ಗಳು ಬಂದಿವೆ

  ವಿಜಯ್ ದೇವರಕೊಂಡ ಕಂಟ್ರೋಲ್‌ ರೂಂ ಗೆ ಭೇಟಿ ನೀಡಿದ್ದ ಚಿತ್ರಗಳನ್ನು ಹೈದರಾಬಾದ್ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆದರೆ ಇದಕ್ಕೆ ಹಲವು ನೆಗೆಟಿವ್ ಕಮೆಂಟ್‌ಗಳು ಸಹ ಬಂದಿವೆ.

  ಬಾಲಿವುಡ್ ಪ್ರವೇಶಿಸುತ್ತಿರುವ ವಿಜಯ್ ದೇವರಕೊಂಡ

  ಬಾಲಿವುಡ್ ಪ್ರವೇಶಿಸುತ್ತಿರುವ ವಿಜಯ್ ದೇವರಕೊಂಡ

  ವಿಜಯ್ ದೇವರಕೊಂಡ ಅವರು ಬಾಲಿವುಡ್ ಪ್ರವೇಶ ಮಾಡಲು ಸಕಲ ಸನ್ನದ್ಧರಾಗಿದ್ದಾರೆ. ಕರಣ್ ಜೋಹರ್ ನಿರ್ಮಾಣದ ಸಿನಿಮಾದಲ್ಲಿ ಅವರು ನಾಯಕರಾಗಲಿದ್ದಾರೆ. ಪ್ರಸ್ತುತ ಪುರಿ ಜಗನ್ನಾಥ್ ನಿರ್ದೇಶನದ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ. ಚಿತ್ರದ ನಾಯಕಿ ಅನನ್ಯಾ ಪಾಂಡೆ.

  English summary
  Actor Vijay Devarkonda had chit-chat with Hyderabad police through video conference.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X