ರಶ್ಮಿಕಾ-ವಿಜಯ್ ಅಭಿನಯದ 'ಡಿಯರ್ ಕಾಮ್ರೇಡ್' ರಿಲೀಸ್ ಡೇಟ್ ಫಿಕ್ಸ್

Recommended Video

ಲಿಪ್ ಲಾಕ್ ಮೂಲಕ ಸದ್ದು ಮಾಡಿದ್ದ ರಶ್ಮಿಕಾ ಅಭಿಮಾನಿಗಳಿಗೆ ಕೊಟ್ರು ಸಿಹಿ ಸುದ್ದಿ..!? | FILMIBEAT KANNADA

ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಭಾರಿ ಸದ್ದು ಮಾಡುತ್ತಿರುವ 'ಡಿಯರ್ ಕಾಮ್ರೇಡ್' ಸಿನಿಮಾ ರಿಲೀಸ್ ಬಹಿರಂಗವಾಗಿದೆ. ಕನ್ನಡದ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಮತ್ತು ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡ ಅಭಿನಯದ 'ಡಿಯರ್ ಕಾಮ್ರೇಡ್' ಭಾರಿ ನಿರೀಕ್ಷೆ ಹುಟ್ಟುಹಾಕಿದ ಸಿನಿಮಾವಾಗಿದೆ.

ಪುಟ್ಟ ಟೀಸರ್ ಮೂಲಕ ಅಭಿಮಾನಿಗಳ ಹಾರ್ಟ್ ಬೀಟ್ ಹೆಚ್ಚಿಸಿರುವ 'ಡಿಯರ್ ಕಾಮ್ರೇಡ್' ಜುಲೈ 26ಕ್ಕೆ ತೆರೆಗೆ ಬರಲು ಸಜ್ಜಾಗಿದೆ. ಈ ಬಗ್ಗೆ ಸ್ವತಹಃ ನಟ ವಿಜಯ್ ದೇವರಕೊಂಡ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ರಶ್ಮಿಕಾ ಮತ್ತು ವಿಜಯ್ ನಡುವಿನ ಲಿಪ್ ಲಾಕ್ ದೃಶ್ಯದ ಟೀಸರ್ ಸೌತ್ ಸಿನಿ ಇಂಡಸ್ಟ್ರಿಯಲ್ಲಿ ಸಂಚಲನ ಮೂಡಿಸಿತ್ತು.

Vijay Deverakonda and Rashmika starrer Dear Comrade hit the the screens on july 26th

ಒಂದು ಪುಟ್ಟ ಟೀಸರ್ ಮತ್ತು ಒಂದು ಹಾಡನ್ನು ಮಾತ್ರ ರಿಲೀಸ್ ಮಾಡಿ ಅಭಿಮಾನಿಗಳ ಕುತೂಹಲ ಹೆಚ್ಚಿಸಿದ್ದ 'ಡಿಯರ್ ಕಾಮ್ರೇಡ್' ಯಾವಾಗ ರಿಲೀಸ್ ಆಗುತ್ತೆ ಅಂತ ಸಿನಿಪ್ರಿಯರು ಜಾತಕ ಪಕ್ಷಿಯಂತೆ ಕಾಯುತ್ತಿದ್ದರು. ಆದ್ರೀಗ ರಿಲೀಸ್ ಡೇಟ್ ಕೇಳಿ ಫುಲ್ ಖುಷ್ ಆಗಿದ್ದಾರೆ ರಶ್ಮಿಕಾ-ವಿಜಯ್ ಅಭಿಮಾನಿಗಳು.

ಟೀಸರ್ ನಲ್ಲಿಯೆ ಲಿಪ್ ಲಾಕ್ ಮಾಡಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ವಿಜಯ್ ಮತ್ತು ರಶ್ಮಿಕಾ ಇನ್ನು ಸಿನಿಮಾ ರಿಲೀಸ್ ಆದ್ಮೇಲೆ ಯಾವ ರೀತಿ ಪ್ರತಿಕ್ರಿಯೆ ಸಿಗಲಿದೆ ಎನ್ನುವುದನ್ನು ಕಾದು ನೋಡಬೇಕು. ವಿಶೇಷ ಅಂದ್ರೆ 'ಡಿಯರ್ ಕಾಮ್ರೇಡ್' ಕನ್ನಡದಲ್ಲೂ ತೆರೆಗೆ ಬರುತ್ತಿದೆ. ರಶ್ಮಿಕಾ ಜೊತೆ ಕನ್ನಡಕ್ಕೆ ಮೊದಲ ಬಾರಿಗೆ ಎಂಟ್ರಿ ಕೊಡುತ್ತಿರುವ ವಿಜಯ್ ದೇವರಕೊಂಡ ನೋಡಲು ಕನ್ನಡ ಅಭಿಮಾನಿಗಳು ಕಾಯುತ್ತಿದ್ದಾರೆ.

More from Filmibeat

English summary
Telugu actor Vijay Deverakonda and Rashmika Mandanna starrer Dear Comrade have announced the release date of the film. Most expected movie all set to hit the the screens on july 26th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X