For Quick Alerts
  ALLOW NOTIFICATIONS  
  For Daily Alerts

  ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ನಡುವಿನ ಸಂಬಂಧದ ಬಗ್ಗೆ ಸತ್ಯಾಂಶ ಬಿಚ್ಚಿಟ್ಟ ಕರಣ್ ಜೋಹರ್!

  |

  ಕಳೆದ ವಾರವಷ್ಟೇ ಕಾಫಿ ವಿತ್ ಕರಣ್ ಸೀಸನ್ 7 ಮಹೀಪ್ ಕಪೂರ್, ಭಾವನಾ ಪಾಂಡೆ ಹಾಗೂ ಗೌರಿ ಖಾನ್ ಭಾಗವಹಿಸಿದ್ದ ಎಪಿಸೋಡ್ ಮೂಲಕ ಮುಕ್ತಾಯಗೊಂಡಿದೆ. ಈ ಕಾರ್ಯಕ್ರಮ ಮುಕ್ತಾಯಗೊಂಡ ನಂತರ ವಿಶೇಷ ಸಂಚಿಕೆಯೊಂದು ಗುರುವಾರ ಪ್ರಸಾರಗೊಂಡಿದೆ. ಈ ಸಂಚಿಕೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ವಿಡಿಯೋಗಳನ್ನು ಮಾಡುವುದರ ಮೂಲಕ ವೈರಲ್ ಆಗಿರುವ ಕನ್ನಡದ ಡ್ಯಾನಿಶ್ ಸೇಠ್, ನಿಹಾರಿಕಾ ಕೆ ಎಂ, ತನ್ಮಯ್ ಭಟ್ ಹಾಗೂ ಪುಷ್ಪಾ ಕಪಿಲಾ ಭಾಗವಹಿಸಿದ್ದರು.

  ಹೀಗೆ ಈ ಸಂಚಿಕೆಯಲ್ಲಿ ಭಾಗವಹಿಸಿದ್ದ ಎಲ್ಲರೂ ಸಹ ಒಳ್ಳೆಯ ಮಾತುಗಾರರಾಗಿದ್ದ ಕಾರಣ ಕಾರ್ಯಕ್ರಮ ಭರ್ಜರಿ ಮನರಂಜನೆಯಿಂದ ಕೂಡಿತ್ತು. ಇದೇ ವೇಳೆ ವಿಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಮದುವೆಯ ವಿಚಾರವನ್ನು ತೆಗೆದ ಕರಣ್ ಜೋಹರ್ ಇಬ್ಬರೂ ಸಹ ತನ್ನನ್ನು ಅವರ ವಿವಾಹ ಕಾರ್ಯಕ್ರಮಕ್ಕೆ ಆಹ್ವಾನಿಸಲೇ ಇಲ್ಲ ಎಂಬ ಬೇಸರದ ಸಂಗತಿಯನ್ನು ಹೊರಹಾಕಿದರು.

  ಇಷ್ಟು ಸ್ನೇಹಿತರಾಗಿದ್ದರು ಸಹ ಆ ಇಬ್ಬರೂ ತನ್ನನ್ನು ಯಾಕೆ ಆಹ್ವಾನಿಸಲಿಲ್ಲ ಎಂದು ಯೋಚಿಸುತ್ತಿದ್ದ ತನಗೆ ವಿಕ್ಕಿ ಕೌಶಾಲ್ ಸಿನಿ ಜರ್ನಿಯಲ್ಲಿ ದೊಡ್ಡ ಪಾತ್ರ ನಿರ್ವಹಿಸಿದ್ದ ನಿರ್ದೇಶಕ ಅನುರಾಗ್ ಕಶ್ಯಪ್ ಅವರನ್ನು ಸಹ ಮದುವೆಗೆ ಆಹ್ವಾನಿಸಿರಲಿಲ್ಲ ಎಂಬ ವಿಚಾರ ತುಸು ನೆಮ್ಮದಿಯನ್ನು ತಂದಿತ್ತು ಎಂದು ಹೇಳಿಕೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಇದಕ್ಕೆ ಉತ್ತರ ನೀಡಲು ಆರಂಭಿಸಿದ ನಿಹಾರಿಕಾ ಯೋಚನೆ ಮಾಡ್ಬೇಡಿ ನನ್ನ ಮದುವೆಗೆ ನಿಮ್ಮನ್ನು ಆಹ್ವಾನಿಸುತ್ತೇನೆ ಎಂದರು. ಇದಕ್ಕೆ ಮರು ಉತ್ತರ ನೀಡಿದ ಕರಣ್ ಜೋಹರ್ ಪ್ರಭಾಸ್ ಇನ್ನೂ ಸಿಂಗಲ್ ಆಗೇ ಇದ್ದಾರೆ ಮದುವೆಯಾಗ್ತೀರಾ ಎಂಬರ್ಥದಲ್ಲಿ ಪ್ರಶ್ನೆ ಕೇಳಿದರು.

   ಮನೆಯಲ್ಲಿ ಒಪ್ಪುವುದಿಲ್ಲ ಎಂದ ನಿಹಾರಿಕಾ

  ಮನೆಯಲ್ಲಿ ಒಪ್ಪುವುದಿಲ್ಲ ಎಂದ ನಿಹಾರಿಕಾ

  ಹೀಗೆ ಪ್ರಭಾಸ್ ಸಿಂಗಲ್ ಆಗಿ ಇದ್ದಾರೆ ನೀವೇಕೆ ಮದುವೆಯಾಗಬಾರದು ಎಂದು ಕರಣ್ ಜೋಹರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ನಿಹಾರಿಕಾ ನನಗಿನ್ನೂ 25 ವರ್ಷ ಈ ಮದುವೆಗೆ ಒಪ್ಪಿಕೊಳ್ಳಲು ನನ್ನ ತಾಯಿ ಸಿದ್ಧರಿಲ್ಲ ಎಂದು ಹೇಳಿಕೆ ನೀಡುವುದರ ಮೂಲಕ ಕರಣ್ ಜೋಹರ್ ಅವರಿಗೆ ಟಾಂಗ್ ನೀಡಿದರು. ಇದಾದ ಬೆನ್ನಲ್ಲೇ ಕರಣ್ ಜೋಹರ್ ವಿಜಯ್ ದೇವರಕೊಂಡ ಕೂಡ ಸಿಂಗಲ್ ಎಂದು ಮತ್ತೊಂದು ಆಫರ್ ನೀಡಿದರು.

   ವಿಜಯ್ ದೇವರಕೊಂಡ ರಶ್ಮಿಕಾ ಡೇಟ್ ಮಾಡ್ತಾ ಇದ್ದಾರೆ ಎಂದ ಕುಶಾ ಕಪಿಲಾ

  ವಿಜಯ್ ದೇವರಕೊಂಡ ರಶ್ಮಿಕಾ ಡೇಟ್ ಮಾಡ್ತಾ ಇದ್ದಾರೆ ಎಂದ ಕುಶಾ ಕಪಿಲಾ

  ಕರಣ್ ಜೋಹರ್ ವಿಜಯ್ ದೇವರಕೊಂಡ ಕೂಡ ಸಿಂಗಲ್ ಎಂದು ನಿಹಾರಿಕಾಗೆ ಆಫರ್ ನೀಡುತ್ತಿದ್ದಂತೆ ಚರ್ಚೆಗೆ ಇಳಿದ ಕುಶಾ ಕಪಿಲಾ ವಿಜಯ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಡೇಟ್ ಮಾಡ್ತಾ ಇರಬಹುದು. ಈಗಾಗಲೇ ಗೀತಾಗೋವಿಂದಂ ಮತ್ತು ಡಿಯರ್ ಕಾಮ್ರೆಡ್ ಚಿತ್ರಗಳಲ್ಲಿ ಅಭಿನಯಿಸಿರುವ ಈ ಜೋಡಿ ಪ್ರೀತಿಯಲ್ಲಿ ಬಿದ್ದಿರಬಹುದು ಎಂದರು.

   ಆ ತರಹ ಏನೂ ಇಲ್ಲ ವಿಜಯ್ ದೇವರಕೊಂಡ ಸಿಂಗಲ್ ಎಂದ ಕರಣ್ ಜೋಹರ್!

  ಆ ತರಹ ಏನೂ ಇಲ್ಲ ವಿಜಯ್ ದೇವರಕೊಂಡ ಸಿಂಗಲ್ ಎಂದ ಕರಣ್ ಜೋಹರ್!

  ಹೀಗೆ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ನಡುವೆ ಸಂಬಂಧವಿದೆ ಎಂಬುದನ್ನು ಕೇಳಿದ ಕೂಡಲೇ ಪ್ರತಿಕ್ರಿಯಿಸಿದ ಕರಣ್ ಜೋಹರ್ ಆ ಊಹೆಯನ್ನು ತಳ್ಳಿಹಾಕಿದರು. ಆತನ ಬಗ್ಗೆ ನನಗೆ ತುಂಬಾ ಚೆನ್ನಾಗಿ ಗೊತ್ತು ನನಗೆ ತಿಳಿದಿರುವ ಪ್ರಕಾರ ಆತ ಸಿಂಗಲ್,ಆತ ಅಧಿಕೃತವಾಗಿ ಸಿಂಗಲ್ ಎಂದು ಒತ್ತಿ ಒತ್ತಿ ಹೇಳಿದರು. ಈ ಮೂಲಕ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ನಡುವೆ ಪ್ರೀತಿ ಪ್ರೇಮದ ಸಂಬಂಧವಿಲ್ಲ ಎಂದು ಕರಣ್ ಜೋಹರ್ ತಿಳಿಸಿದ್ದಾರೆ.

  English summary
  Vijay Deverakonda is officially single and not dating Rashmika Mandanna confirms Karan Johar. Read on
  Thursday, September 29, 2022, 15:54
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X