For Quick Alerts
  ALLOW NOTIFICATIONS  
  For Daily Alerts

  ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿದ ಲೈಗರ್ ಇನ್ನೆರಡು ದಿನಗಳಲ್ಲಿ ಓಟಿಟಿಗೆ! ಎಲ್ಲಿ, ಯಾವಾಗ?

  |

  ವಿಜಯ್ ದೇವರಕೊಂಡ ಹಾಗೂ ಪುರಿ ಜಗನ್ನಾಥ್ ಅಭಿನಯದ ಲೈಗರ್ ಸಿನಿಮಾ ಕಳೆದ ಆಗಸ್ಟ್ 25ರಂದು ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಿತ್ತು. ದಾಖಲೆ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾ ಮೊದಲ ಶೋನಲ್ಲಿಯೇ ಸೋಲನ್ನುಂಡಿತ್ತು. ಹೌದು, ಬಿಡುಗಡೆ ದಿನದ ಮೊದಲ ಪ್ರದರ್ಶನ ನೋಡಿ ಬಂದ ವೀಕ್ಷಕರು ಚಿತ್ರ ಚೆನ್ನಾಗಿಲ್ಲ ಎಂದು ಮುಲಾಜಿಲ್ಲದೇ ಹೇಳಿಬಿಟ್ಟಿದ್ದರು.

  ಹೀಗೆ ಮೊದಲ ಪ್ರದರ್ಶನದಿಂದಲೇ ನೆಗೆಟಿವ್ ರೆಸ್ಪಾನ್ಸ್ ಪಡೆದುಕೊಂಡ ಲೈಗರ್ ಯಾವ ಹಂತದಲ್ಲಿಯೂ ಸಹ ಸುಧಾರಿಸಿಕೊಳ್ಳಲೇ ಇಲ್ಲ. ಮೊದಲ ಪ್ರದರ್ಶನದ ವಿಮರ್ಶೆ ಹಾಗೂ ಪ್ರತಿಕ್ರಿಯೆ ನೋಡಿದ ಸಿನಿ ಪ್ರೇಕ್ಷಕರು ಲೈಗರ್ ನೋಡುವ ಸಾಹಸಕ್ಕೆ ಕೈ ಹಾಕಲಿಲ್ಲ. ಹೀಗೆ ಬಾಕ್ಸ್ ಆಫೀಸ್‌ನಲ್ಲಿ ಲೈಗರ್ ಸಿನಿಮಾ ಮಕಾಡೆ ಮಲಗಿಬಿಟ್ಟಿತ್ತು.

  100ರಿಂದ 120 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದೆ ಎನ್ನಲಾಗಿದ್ದ ಲೈಗರ್ 72 ಕೋಟಿ ಗಳಿಸುವಷ್ಟರಲ್ಲಿ ಚಿತ್ರಮಂದಿರದಿಂದ ಆಚೆ ಬಿದ್ದಿದೆ. ಚಿತ್ರ ಪ್ರಮೋಷನ್‌ಗಾಗಿ ಒಳ್ಳೆಯ ಡೈಲಾಗ್‌ಗಳು ಹಾಗೂ ಸ್ಕ್ರಿಪ್ಟ್ ಬರೆದಿದ್ದ ಚಿತ್ರತಂಡ ಚಿತ್ರಕ್ಕಾಗಿ ಒಳ್ಳೆಯ ಸ್ಕ್ರಿಪ್ಟ್ ರಚಿಸಲಾಗದೇ ಸೋತಿತ್ತು ಹಾಗೂ ಭಾರೀ ನಷ್ಟವನ್ನೂ ಸಹ ಅನುಭವಿಸಿತ್ತು. ಹೀಗೆ ಚಿತ್ರಮಂದಿರದಲ್ಲಿ ಇಪ್ಪತ್ತು ದಿನಕ್ಕೆ ಸಂಪೂರ್ಣವಾಗಿ ತನ್ನ ಓಟವನ್ನು ನಿಲ್ಲಿಸಿದ ಲೈಗರ್ ಚಿತ್ರ ಇದೀಗ ಓಟಿಟಿಯಲ್ಲಿ ಬಿಡುಗಡೆಯಾಗಲು ತಯಾರಾಗಿದೆ.

  ಇನ್ನೆರಡು ದಿನಗಳಲ್ಲಿ ಓಟಿಟಿಗೆ

  ಇನ್ನೆರಡು ದಿನಗಳಲ್ಲಿ ಓಟಿಟಿಗೆ

  ಇನ್ನು ಬಲ್ಲ ಮೂಲಗಳ ಮಾಹಿತಿ ಪ್ರಕಾರ ಲೈಗರ್ ಸಿನಿಮಾ ಸೆಪ್ಟೆಂಬರ್ 22ರಂದು ಓಟಿಟಿ ಬಿಡುಗಡೆ ಹೊಂದಲಿದೆ ಎನ್ನಲಾಗುತ್ತಿದೆ. ಡಿಸ್ನೆ ಪ್ಲಸ್ ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿ ಲೈಗರ್ ತೆಲುಗು, ಕನ್ನಡ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಮೂಲಕ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ ದೊಡ್ಡ ಮಟ್ಟದ ಕೆಟ್ಟ ಮಿಮರ್ಶೆ ಪಡೆದುಕೊಂಡಿದ್ದ ಲೈಗರ್ ಇದೀಗ ಓಟಿಟಿಯಲ್ಲಿ ಬಿಡುಗಡೆಯಾಗಿ ಮತ್ತಷ್ಟು ಟ್ರೋಲ್‌ಗೆ ಒಳಗಾಗುವುದು ಖಚಿತ.

  22 ಬಿಟ್ರೆ 25

  22 ಬಿಟ್ರೆ 25

  ಇನ್ನು ಇದೇ ತಿಂಗಳ 22ರಂದು ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿ ಲೈಗರ್ ಚಿತ್ರ ಬಿಡುಗಡೆಯಾಗಲಿದೆ ಎಂಬ ಸುದ್ದಿ ಇದ್ದು, ಒಂದುವೇಳೆ ಈ ದಿನದಂದು ಬಿಡುಗಡೆಯಾಗದಿದ್ದರೆ, ಇದೇ ತಿಂಗಳ 25ರಂದು ಖಚಿತವಾಗಿ ಬಿಡುಗಡೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

  ಹಿಂದಿಯಲ್ಲಿ ಸ್ವಲ್ಪ ತಡ

  ಹಿಂದಿಯಲ್ಲಿ ಸ್ವಲ್ಪ ತಡ

  ಇನ್ನು ಲೈಗರ್ ದಕ್ಷಿಣ ಭಾರತದ ಭಾಷೆಗಳಲ್ಲಿ ಮಾತ್ರ ಹಾಟ್ ಸ್ಟಾರ್ ಅಪ್ಲಿಕೇಶನ್‌ನಲ್ಲಿ ಬಿಡುಗಡೆಯಾಗಲಿದ್ದು, ಹಿಂದಿ ಭಾಷೆಯಲ್ಲಿ ಬೇರೊಂದು ಅಪ್ಲಿಕೇಶನ್‌ನಲ್ಲಿ ಬೇರೊಂದು ದಿನ ಬಿಡುಗಡೆಯಾಗಲಿದೆ ಎನ್ನಲಾಗುತ್ತಿದೆ.

  English summary
  Vijay Deverakond and Puri Jaganath's Liger movie to stream on hotstar from September 22
  Tuesday, September 20, 2022, 14:34
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X