ರಶ್ಮಿಕಾ ವಿಷ್ಯದಲ್ಲಿ ಅಭಿಮಾನಿಗಳ ಮೇಲೆ ಮುನಿಸಿಕೊಂಡ ವಿಜಯ್ ದೇವರಕೊಂಡ.!

ಸೌತ್ ಸಿನಿ ಇಂಡಸ್ಟ್ರಿಯಲ್ಲಿ ಸದ್ಯ ಡಿಯರ್ ಕಾಮ್ರೇಡ್ ಸಿನಿಮಾದ ಬಗ್ಗೆಯೇ ಹೆಚ್ಚು ಚರ್ಚೆಯಾಗುತ್ತಿದೆ. ಸಿನಿಮಾದ ಟೀಸರ್ ರಿಲೀಸ್ ಆಗುತ್ತಿದ್ದಂತೆ ರಶ್ಮಿಕಾ ಮತ್ತು ವಿಜಯ್ ಲಿಪ್ ಲಾಕ್ ದೃಶ್ಯ ನೋಡಿ ಅಭಿಮಾನಿಗಳು ಒಮ್ಮೆ ಶಾಕ್ ಆಗಿದ್ದರು. ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಸಂಚಲನ ಮೂಡಿಸಿರುವ ಈ ಕಿಸ್ಸಿಂಗ್ ದೃಶ್ಯದ ಚರ್ಚೆಗೆ ಇನ್ನು ಬ್ರೇಕ್ ಬಿದ್ದಿಲ್ಲ.

ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಅದರಲ್ಲೂ ರಶ್ಮಿಕಾ ಅಭಿಮಾನಿಗಳು ಹಿಗ್ಗಾಮುಗ್ಗಾ ಸಿಕ್ಕಾಪಟ್ಟೆ ಕಾಲೆಳೆಯುತ್ತಿದ್ದಾರೆ. ತರಹೇವಾರಿ ಕಮೆಂಟ್ ಗಳನ್ನು ಮಾಡುವ ಮೂಲಕ ರಶ್ಮಿಕಾ ಅವರನ್ನ ನಿಂದಿಸುತ್ತಿದ್ದಾರೆ. ಈ ಬಗ್ಗೆ ತಲೆಕೆಡಿಸಿಕೊಳ್ಳದ ರಶ್ಮಿರಾ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ಆದ್ರೆ, ಈ ಬಗ್ಗೆ ವಿಜಯ್ ದೇವರಕೊಂಡ ಬೇಸರ ಪಟ್ಟುಕೊಂಡಿದ್ದಾರೆ. ಜಾಲತಾಣದಲ್ಲಿ ಬಾಯಿಗೆ ಬಂದಹಾಗೆ ಕಮೆಂಟ್ ಮಾಡುವ ಅಭಿಮಾನಿಗಳ ವಿರುದ್ದ ಸಿಟ್ಟಾಗಿದ್ದಾರಂತೆ. ಈ ಬಗ್ಗೆ ಖಾಸಗಿ ವೆಬ್ ಸೈಟ್ ವರಿದ ಮಾಡಿದೆ. ಹಾಗಿದ್ರೆ, ಈ ಕಿಸ್ಸಿಂಗ್ ಸೀನ್ ಬಗ್ಗೆ ವಿಜಯ್ ಹೇಳಿದ್ದೇನು? ಮುಂದೆ ಓದಿ..

ಅಭಿಮಾನಿಗಳಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ

ಅಭಿಮಾನಿಗಳಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ

ಡಿಯರ್ ಕಾಮ್ರೇಡ್ ಸಿನಿಮಾದ ಲಿಪ್ ಲಾಕ್ ದೃಶ್ಯ ಈ ಮಟ್ಟಕ್ಕೆ ಸದ್ದು ಮಾಡುತ್ತೆ ಅಂತ ರಶ್ಮಿಕಾ ಮತ್ತು ವಿಜಯ್ ಕನಸ್ಸಲ್ಲೂ ಅಂದುಕೊಂಡಿರಲಿಲ್ಲ ಅನ್ಸುತ್ತೆ. ಎಲ್ಲೇ ಹೋದ್ರು-ಬಂದ್ರು ಅದೇ ಪ್ರಶ್ನ ಎದುರಾಗುತ್ತಿದೆ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಂತೂ ಬಾಯಿಗೆ ಬಂದಹಾಗೆ ಮಾತನಾಡುತ್ತಿದ್ದಾರೆ. ಈ ಬಗ್ಗೆ ಖಾಸಗಿ ವೆಬ್ ಸೈಟ್ ಗೆ ಪ್ರತಿಕ್ರಿಯೆ ನೀಡಿರುವ ವಿಜಯ್ 'ಅಭಿಮಾನಿಗಳಿಂದ ನಾನು ಯಾವತ್ತು ಈ ರೀತಿಯ ಮಾತುಗಳನ್ನು ನಿರೀಕ್ಷೆ ಮಾಡಿರಲಿಲ್ಲ' ಎಂದು ಹೇಳಿದ್ದಾರೆ.

ರಶ್ಮಿಕಾ ಟಾರ್ಗೆಟ್ ಆಗುವುದು ಇಷ್ಟವಿಲ್ಲ

ರಶ್ಮಿಕಾ ಟಾರ್ಗೆಟ್ ಆಗುವುದು ಇಷ್ಟವಿಲ್ಲ

'ಡಿಯರ್ ಕಾಮ್ರೇಡ್' ಟೀಸರ್ ರಿಲೀಸ್ ಆಗುತ್ತಿದ್ದಂತೆ ವಿಜಯ್ ಗಿಂತ ಹೆಚ್ಚಾಗಿ ರಶ್ಮಿಕಾ ಹೆಚ್ಚು ಟ್ರೋಲ್ ಆಗುತ್ತಿದ್ದಾರೆ. ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಬ್ರೇಕ್ ಅಪ್ ಗೆ ವಿಜಯ್ ಜೊತೆಗಿನ ಲಿಪ್ ಲಾಕ್ ದೃಶ್ಯಗಳೇ ಕಾರಣ ಎಂದು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಬೇಸರ ವ್ಯಕ್ತಪಡಿಸಿದ ವಿಜಯ್ 'ಈ ವಿಚಾರವನ್ನು ಹೇಗೆ ನಿಭಾಯಿಸಬೇಕು ಎಂದು ತಿಳಿಯದೆ ಗೊಂದಲದಲ್ಲಿದ್ದಾರಂತೆ. ಅಲ್ಲದೆ ಸುಖಾಸುಮ್ಮನೆ ರಶ್ಮಿಕಾ ಟಾರ್ಗೆಟ್ ಆಗುತ್ತಿರುವುದು ವಿಜಯ್ ಗೆ ಸಹಿಸಲು ಸಾಧ್ಯವಾಗುತ್ತಿಲ್ಲವಂತೆ ಎಂದು ವಿಜಯ್ ಆಪ್ತ ಮೂಲಗಳು ತಿಳಿಸಿವೆ ಎಂದು ಆ ವೆಬ್ ಸೈಟ್ ವರದಿ ಮಾಡಿದೆ.

ಚರ್ಚೆಗೆ ದೇಶದಲ್ಲಿ ಎಷ್ಟೊಂದು ವಿಷ್ಯಗಳಿವೆ

ಚರ್ಚೆಗೆ ದೇಶದಲ್ಲಿ ಎಷ್ಟೊಂದು ವಿಷ್ಯಗಳಿವೆ

ಚರ್ಚೆ ಮಾಡಲು ದೇಶದಲ್ಲಿ ಸಾಕಷ್ಟು ವಿಚಾರಗಳಿವೆ. ಅದು ಬಿಟ್ಟು ಕಿಸ್ ವಿಚಾರವೊಂದೆ ಹಿಡಿದುಕೊಂಡು ಯಾಕೆ ಇಷ್ಟು ಚರ್ಚೆ ಮಾಡುತ್ತಿದ್ದೀರಾ ಎಂದು ವಿಜಯ್ ಅಭಿಮಾನಿಗಳ ವಿರುದ್ಧ ಬೇಸರ ಮಾಡಿಕೊಂಡಿದ್ದಾರೆ. 'ಗೀತಾ ಗೋವಿಂದಂ' ಸಿನಿಮಾದಲ್ಲೂ ಇಬ್ಬರ ಲಿಪ್ ಲಾಕ್ ದೃಶ್ಯ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ನಂತರ ಚಿತ್ರದಿಂದಲೇ ಆ ದೃಶ್ಯವನ್ನು ತೆಗೆದು ಹಾಕಲಾಗಿತ್ತು. ಆದ್ರೀಗ ಡಿಯರ್ ಕಾಮ್ರೇಡ್ ಲಿಪ್ ಲಾಕ್ ದೃಶ್ಯದ ಚರ್ಚೆ ಮುಗಿಯುವ ಹಾಗೆ ಕಾಣುತ್ತಿಲ್ಲ.

ದಕ್ಷಿಣ ಭಾರತದ ಇಮ್ರಾನ್ ಹಶ್ಮಿ ಅಂತೆ.!

ದಕ್ಷಿಣ ಭಾರತದ ಇಮ್ರಾನ್ ಹಶ್ಮಿ ಅಂತೆ.!

ವಿಜಯ್ ದೇವರಕೊಂಡ ಅವರನ್ನು ದಕ್ಷಿಣ ಭಾರತ ಇಮ್ರಾನ್ ಹಶ್ಮಿ ಎಂದು ಕರೆಯುತ್ತಿದ್ದಾರೆ. ವಿಜಯ್ ಅಭಿನಯದ ಬಹುತೇಕ ಸಿನಿಮಾಗಳಲ್ಲಿ ಸಹನಟಿಯರ ಜೊತೆ ಲಿಪ್ ಲಾಕ್ ದೃಶ್ಯಗಳಿವೆ. ಅಲ್ಲದೇ ಅರ್ಜುನ್ ರೆಡ್ಡಿ ಸಿನಿಮಾದಲ್ಲಿ ಸರಣಿ ಕಿಸ್ಸಿಂಗ್ ದೃಶ್ಯಗಳಿದ್ದವು. ಇದೆಲ್ಲವನ್ನ ನೋಡಿದ ನೆಟ್ಟಿಗರು ವಿಜಯ್ ಅವರನ್ನ ಇಮ್ರಾನ್ ಹಶ್ಮಿಗೆ ಹೋಲಿಸುತ್ತಿದ್ದಾರೆ. ಅಲ್ಲದೆ ಆ ನಂತರ ಬಂದ 'ಗೀತಾ ಗೋವಿಂದಂ' ಮತ್ತು ಸದ್ಯ ಸದ್ದು ಮಾಡುತ್ತಿರುವ 'ಡಿಯರ್ ಕಾಮ್ರೇಡ್' ಚಿತ್ರಗಳಲ್ಲಿಯೂ ವಿಜಯ್ ಲಿಪ್ ಲಾಕ್ ಮಾಡಿ ಅಭಿಮಾನಿಗಳಿಗೆ ಟಾರ್ಗೆಟ್ ಆಗಿದ್ದಾರೆ.

More from Filmibeat

English summary
Vijay Deverakonda upset with fans for targeting him for liplock scene with Rashmika Mandanna in Dear Comrade?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X