For Quick Alerts
  ALLOW NOTIFICATIONS  
  For Daily Alerts

  'ಬಿಗಿಲ್' ಮಧ್ಯರಾತ್ರಿ ಶೋ ರದ್ದು: ಬೆಂಕಿಯಿಟ್ಟು ವಿಜಯ್ ಅಭಿಮಾನಿಗಳು ಆಕ್ರೋಶ

  |

  ತಮಿಳು ನಟ ವಿಜಯ್ ಅಭಿನಯದ 'ಬಿಗಿಲ್' ಸಿನಿಮಾ ದೇಶಾದ್ಯಂತ ಇಂದು ಬಿಡುಗಡೆಯಾಗಿದೆ. ಅನೇಕ ಕಡೆ ಮಧ್ಯರಾತ್ರಿ ವಿಶೇಷ ಪ್ರದರ್ಶನ ಕಂಡಿದೆ. ಆದರೆ, ಕೃಷ್ಣಗಿರಿ ಚಿತ್ರಮಂದಿರದಲ್ಲಿ ಮಿಡ್ ನೈಟ್ ಶೋ ಪ್ರದರ್ಶಸದ ಕಾರಣ, ಚಿತ್ರಮಂದಿರದ ಎದುರಿನಲ್ಲಿದ್ದ ಅಂಗಡಿ ಮುಂಗಟ್ಟುಗಳಿಗೆ ಬೆಂಕಿಯಿಟ್ಟು ವಿಜಯ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  ಈ ಸಂಬಂಧ ಸ್ಥಳೀಯ ಪೊಲೀಸರು ಸುಮಾರು 39 ಜನರನ್ನ ವಶಕ್ಕೆ ಪಡೆದುಕೊಂಡಿದ್ದಾರೆ. 'ಬಿಗಿಲ್' ಚಿತ್ರವನ್ನ ಮಧ್ಯರಾತ್ರಿ ವಿಶೇಷ ಪ್ರದರ್ಶನ ಮಾಡುವಂತೆ ಚಿತ್ರಮಂದಿರದ ಮಾಲೀಕರಿಗೆ ಬೇಡಿಕೆಯಿಟ್ಟಿದ್ದರು. ಆದರೆ, ಮಾಲೀಕರು ಮಧ್ಯರಾತ್ರಿ ಶೋಗೆ ಒಪ್ಪಿರಲಿಲ್ಲ.

  Bigil Review: ವಿಜಯ್ 'ಬಿಗಿಲ್' ನೋಡಿ ಏನ್ ಹೇಳಿದ್ರು ಪ್ರೇಕ್ಷಕರು?

  ಅನುಮತಿ ಇದ್ದರೂ ಶೋ ಮಾಡದ ಕಾರಣ, ಅಭಿಮಾನಿಗಳು ರೊಚ್ಚಿಗೆದ್ದ ಅಲ್ಲೆ ಪಕ್ಕದಲ್ಲಿದ್ದ ವಸ್ತುಗಳ ಕಿತ್ತು ಎಸೆದ, ಬೆಂಕಿಯಿಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂಗಡಿಗಳ ಟಾರ್ ಫಾಲ್, ವಾಟರ್ ಟ್ಯಾಂಕ್, ಅಂಗಡಿ ಮುಂಗಟ್ಟು ಎಲ್ಲವನ್ನು ನಾಶ ಮಾಡಿದ್ದಾರೆ.

  ವಿಜಯ್ ನಟಟಿಸಿದ್ದ ಬಹುನಿರೀಕ್ಷೆಯ ಚಿತ್ರ ಬಿಗಿಲ್. ಅಟ್ಲಿ ಈ ಚಿತ್ರ ನಿರ್ದೇಶಿಸಿದ್ದರು. ಬಹಳ ಆಸೆಯಿಂದ ಮಧ್ಯರಾತ್ರಿಯೇ ಈ ಸಿನಿಮಾ ನೋಡಬೇಕು ಎಂದು ಬಂದವರು ಗಂಟೆಗಟ್ಟಲೇ ಚಿತ್ರಮಂದಿರ ಬಳಿ ಕಾದರು. ಎಷ್ಟೇ ಕಾದರು, ಶೋ ಆರಂಭಿಸಲು ಒಪ್ಪದ ಮಾಲೀಕ ವಿರುದ್ಧ ಧಿಕ್ಕಾರ ಕೂಗಿ ರಂಪಾಟ ಮಾಡಿದ್ದಾರೆ.

  English summary
  Tamil actor Vijay fans expressed outrage against Krishnagiri theater. because, they did not allowed bigil midnight show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X