»   » ಶಿವಣ್ಣನ 'ಜಂಗಮ' ತಮಿಳುನಾಡಲ್ಲಿ 'ಹಂಗಾಮ'

ಶಿವಣ್ಣನ 'ಜಂಗಮ' ತಮಿಳುನಾಡಲ್ಲಿ 'ಹಂಗಾಮ'

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರನ್ನು ನಂಬಿಕೊಂಡರೆ ಸಾಕು ಝಣ ಝಣ ಕಾಂಚನ. ಶಿವ ತನ್ನ ನೆತ್ತಿ ಮೇಲೆ ಏನು ಇರಿಸಿಕೊಳ್ಳುವುದಿಲ್ಲ ಎಲ್ಲವನ್ನು ಭಕ್ತರಿಗೆ ಅರ್ಪಿಸಿಬಿಡುತ್ತಾನೆ ಎಂಬ ಹೊಗಳಿಕೆ ಮಾತಿಗೆ ಜೀವಂತ ಸಾಕ್ಷಿಯಂತಿರುವ ಶಿವಣ್ಣ ಅವರ ಮುಂದಿನ ಚಿತ್ರ 'ಜಂಗಮ' ಸೆಟ್ಟೇರುವ ಮೊದಲೇ ತಮಿಳುನಾಡಿನಲ್ಲಿ 'ಹಂಗಾಮ' ಶುರು ಮಾಡಿರುವ ಸುದ್ದಿ ಬಂದಿದೆ.

ವೃತ್ತಿ ಬದುಕಿನಲ್ಲಿ ತಿರುವು ನೀಡಿದ ಚಿತ್ರವಾದ 'ಜೋಗಿ' ಹಾಗೂ 'ಜೋಗಯ್ಯ' ಚಿತ್ರಗಳಲ್ಲಿ ವರ್ಕ್ ಔಟ್ ಆದ್ಪ ನಿರ್ದೇಶಕ ಪ್ರೇಮ್ ಹಾಗೂ ನಟ ಶಿವರಾಜ್ ಜೋಡಿ ಈಗ ಹೊಸ ಸಾಹಸಕ್ಕೆ ಕೈ ಹಾಕಿರುವುದು ಎಲ್ಲರಿಗೂ ಗೊತ್ತೇ ಇದೆ. ಇವರಿಬ್ಬರ ಕನಸಿಗೆ ಹಣ ಸುರಿಯಲು ಸಮರ್ಥ್ ಬ್ಯಾನರ್ಸ್ ನ ಪ್ರಸಾದ್ ಸಿದ್ಧರಾಗಿದ್ದಾರೆ.

Vijay to act in Tamil Version of Shivaraj Kumar Jangama

'ಜಂಗಮ' ಯಾವಾಗ ಆರಂಭವಾಗುತ್ತದೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಆದರೆ, ಜಂಗಮ ಚಿತ್ರ ದ್ವಿಭಾಷೆಯಲ್ಲಿ ತಯಾರಾಗಲಿದೆ. ಶಿವಣ್ಣ ಮಾಡಿದ ಪಾತ್ರವನ್ನು ತಮಿಳಿನಲ್ಲಿ ಇಳಯದಳಪತಿ ವಿಜಯ್ ಮಾಡಲಿದ್ದಾರೆ ಎಂಬ ಸುದ್ದಿ ಬಂದಿದೆ. ಅಫ್ ಕೋರ್ಸ್ ಮಂಡ್ಯದ ಗಂಡು ಪ್ರೇಮ್ ಅವರೇ ತಮಿಳಿನಲ್ಲೂ ಆಕ್ಷನ್ ಕಟ್ ಹೇಳಿದ್ದಾರೆ.

ಜಂಗಮ ಚಿತ್ರದ ಮುಂದಿನ ವಿವರಗಳು ಶಿವಣ್ಣನ ಹುಟ್ಟುಹಬ್ಬದ ದಿನ(ಜುಲೈ 12) ಸಿಗಲಿದೆಯಂತೆ. ತಮಿಳು ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಇದೇನು ಡಬ್ ಮಾಡುತ್ತಿದ್ದೀರಾ? ತಮಿಳಿನಲ್ಲಿ ಹೀರೋ ಮಾತ್ರ ಚೇಂಚ್ ಆಗ್ತಾರಾ? ಎಂಬ ಪ್ರಶ್ನೆಗೆ ಪ್ರಸಾದ್ ರಿಂದ ಸಮರ್ಥ ಉತ್ತರ ಸಿಕ್ಕಿಲ್ಲ.

ಒಟ್ಟಾರೆ ಶಿವಣ್ಣ ಹಾಗೂ ಪ್ರೇಮ್ ಕಾಂಬಿನೇಷನ್ ಬಗ್ಗೆ ಅಭಿಮಾನಿಗಳಲ್ಲಿ ಅಪಾರ ನಿರೀಕ್ಷೆ ಹುಟ್ಟಿಸಿದ್ದು, ತಮಿಳಿನಲ್ಲೂ ಚಿತ್ರಕ್ಕೆ ಬೇಡಿಕೆ ಹುಟ್ಟುಕೊಂಡಿದೆ. ತೆಲುಗು ನಿರ್ಮಾಪಕರೂ ಕೂಡಾ ಚಿತ್ರದ ಬೆಳವಣಿಗೆ ಮೇಲೆ ಕಣ್ಣಿಟ್ಟಿದ್ದು, ರಿಮೇಕ್ ಹಕ್ಕು ಅಥವಾ ಡಬ್ ಹಕ್ಕು ನೀಡುವಂತೆ ಕೇಳಿದರೂ ಅಚ್ಚರಿಯೇನಿಲ್ಲ.

Vijay to act in Tamil Version of Shivaraj Kumar Jangama

ಇಬ್ಬರೂ ಸಕತ್ ಬ್ಯುಸಿ: ಸದ್ಯ ಶಿವರಾಜ್‌ಕುಮಾರ್‌ 'ಬೆಳ್ಳಿ' ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿ. ಅದು ಮುಗಿಯುತ್ತಿದ್ದಂತೆ ರಾಧಿಕಾ ಕುಮಾರಸ್ವಾಮಿ ನಿರ್ಮಾಣದ ಚಿತ್ರ ಸೆಟ್ಟೇರುವ ಸಾಧ್ಯತೆ ಇದೆ. ಇಷ್ಟೇ ಅಲ್ಲದೇ, ಹರ್ಷ ನಿರ್ದೇಶನದ ಚಿತ್ರವನ್ನು ಶಿವಣ್ಣ ಒಪ್ಪಿಕೊಂಡಿದ್ದಾರೆ. ಕಬಡ್ಡಿ ಬಾಬು ನಿರ್ದೇಶನದ 'ಕಬೀರಾ' ಕೂಡಾ ಕೈಯಲ್ಲಿದೆ. ಇನ್ನು 'ಮನಮೋಹಕ' ಫೋಟೋಶೂಟ್‌ ಕೂಡಾ ಆಗಿದೆ. 'ಬಾದ್‌ಷಾ' ಟೈಟಲ್‌ ಲಾಂಚ್‌ ಆಗಿದೆ. ಮಂಜು ಸ್ವರಾಜ್‌ ನಿರ್ದೇಶನದ 'ಶ್ರೀಕಂಠ'ಕ್ಕೂ ಶಿವಣ್ಣ ಓಕೆ ಅಂದಿದ್ದಾರೆ. ಇವಿಷ್ಟೇ ಅಲ್ಲದೇ, ಇನ್ನೂ ಒಂದೆರಡು ಹೆಸರಿಡದ ಚಿತ್ರಗಳಿಗೆ ಶಿವಣ್ಣ ಕಮಿಟ್‌ ಆಗಿದ್ದಾರೆ.

ಶಿವರಾಜ್‌ ಕುಮಾರ್‌ ಹಾಗೂ ಪ್ರೇಮ್‌ ಜೊತೆಯಾಟದಲ್ಲಿ 'ಜಂಗಮ' ಎಂಬ ಸಿನಿಮಾ ಬರಲಿದೆ, ಈ ಚಿತ್ರವನ್ನು ಪ್ರಸಾದ್‌ ನಿರ್ಮಿಸುತ್ತಿದ್ದಾರೆ ಎಂಬ ಸುದ್ದಿಯೊಂದು ಗಾಂಧಿನಗರದಲ್ಲಿ ಹರಡಿದೆ. ಇಬ್ಬರ ಅಭಿಮಾನಿಗಳು ಖುಷಿಯಾಗಿದ್ದಾರೆ. ಏಕೆಂದರೆ, ಈ ಇಬ್ಬರು ಒಟ್ಟಾದರೆ ಉಂಟಾಗುವ ಹವಾದ ಬಗ್ಗೆ ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಅದಕ್ಕೆ ಕಾರಣ ಅವರಿಬ್ಬರ 'ಜೋಗಿ' ಸೂಪರ್‌ ಹಿಟ್‌ ಆಯಿತು. ಆ ನಂತರದ 'ಜೋಗಯ್ಯ' ಕೂಡಾ ಒಳ್ಳೆಯ ಓಪನಿಂಗ್‌ ಪಡೆಯಿತು. ಹೀಗಾಗಿ 'ಜಂಗಮ' ಸುದ್ದಿ ಕೂಡಾ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಖುಷಿ ಕೊಟ್ಟಿದೆ.

English summary
Kollywood star Vijay to act as Hero in Tamil Version. Director Prem's new film Jangama will be made in two languages; Kannada and Tamil. However Shivanna will be seen only in the Kannada version.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada