ತಮಿಳು ರಾಕರ್ಸ್ ವಿರುದ್ಧ ಅಭಿಯಾನ ಶುರು ಮಾಡಿದ ವಿಜಯ್ ಕಿರಗಂದೂರು

Recommended Video

KGF Kannada Movie: ತಮಿಳು ರಾಕರ್ಸ್ ವಿರುದ್ಧ ಅಭಿಯಾನ ಶುರು ಮಾಡಿದ ವಿಜಯ್ ಕಿರಗಂದೂರು | FILMIBEAT KANNADA

ಸಿನಿಮಾಗೆ ದೊಡ್ಡ ಶನಿ ರೀತಿ ಕಾಡುವುದು ಪೈರಸಿ. ಕಷ್ಟ ಪಟ್ಟು ಸಿನಿಮಾ ಮಾಡಿದವರ ಶ್ರಮಕ್ಕೆ ಬೆಲೆ ಸಿಗುವ ಸಮಯದಲ್ಲಿ ಪೈರಸಿ ಬಂದು ಅದಕ್ಕೆ ಕಲ್ಲು ಹಾಕುತ್ತಿದೆ. ಎಷ್ಟೋ ಸಿನಿಮಾಗಳ ಸೋಲಿಗೆ ಪೈರಸಿ ಕಾರಣವಾಗಿದೆ.

ಪೈರಸಿಯಲ್ಲಿ ಕಿಂಗ್ ಎನ್ನಿಸಿಕೊಂಡಿರುವುದು ತಮಿಳು ರಾಕರ್ಸ್ ವೆಬ್ ಸೈಟ್. ಇಲ್ಲಿ ಯಾವ ಸಿನಿಮಾ ಆದರೂ ಸರಿಯೇ ಬಿಡುಗಡೆಯಾದ ದಿನವೇ ಬಂದು ಬಿಡುತ್ತದೆ. ಈಗ 'ಕೆಜಿಎಫ್' ಸಿನಿಮಾದ ಪೈರಸಿ ಕೂಡ ಇಲ್ಲಿಂದ ಹೊರ ಬಂದಿದೆ.

ಈ ಬಗ್ಗೆ ನಿರ್ಮಾಪಕ ವಿಜಯ್ ಕಿರಗಂದೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ''ತಮಿಳು ರಾಕರ್ಸ್ ರೀತಿಯ ಜನರು ಈ ರೀತಿ ಮಾಡಲು ಕಾರಣ ಇನ್ನು ಕೆಲವು ಪ್ರೇಕ್ಷಕರು ಪೈರಸಿಯಲ್ಲಿ ಸಿನಿಮಾ ನೋಡುವುದರಿಂದ. ಯಾರಾದರೂ ನೀವು ಮಾಡಿದ್ದ ಕೆಲಸವನ್ನು ಕದ್ದರೆ ನಿಮಗೆ ಯಾವ ರೀತಿ ಆಗುತ್ತದೆ. ಆ ರೀತಿ ಸಿನಿಮಾ ಮೇಕರ್ ಆದ ನಮಗೂ ಆಗುತ್ತಿದೆ. ನಾವು ಈ ವೆಬ್ ಸೈಟ್ ಅನ್ನು ಬ್ಯಾನ್ ಮಾಡಿಸುವ ಕಡೆ ಹೋಗುತ್ತಿದ್ದೇವೆ'' ಎಂದು ಬರೆದುಕೊಂಡಿದ್ದಾರೆ.

vijay kiragandur started a campaign to Ban TamilRockers

#BanTamilRockers ಎಂಬ ಹ್ಯಾಶ್ ಟ್ಯಾಗ್ ಬಳಸಿ ಅಭಿಯಾನ ಶುರು ಮಾಡಿದ್ದಾರೆ. ಸಾಕಷ್ಟು ಜನರು ಟ್ವಿಟ್ಟರ್ ನಲ್ಲಿ ಇದಕ್ಕೆ ಬೆಂಬಲ ಸೂಚಿಸಿದ್ದಾರೆ.

More from Filmibeat

English summary
'KGF' movie producer Vijay Kiragandur started a campaign to Ban TamilRockers
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X