'ಮಹರ್ಷಿ' ಚಿತ್ರದಲ್ಲಿ ವಿಜಯ್ ಪ್ರಕಾಶ್ ಹಾಡಿರುವ ಹಾಡು ಸೂಪರ್ ಹಿಟ್
Recommended Video
ತೆಲುಗು ಸ್ಟಾರ್ ನಟ ಮಹೇಶ್ ಬಾಬು ಅಭಿನಯದ ಮಹರ್ಷಿ ಸಿನಿಮಾ ಕಳೆದ ವಾರ ಬಿಡುಗಡೆಯಾಗಿದ್ದು, ಎಲ್ಲರಿಂದಲೂ ಮೆಚ್ಚುಗೆ ಪಡೆದುಕೊಂಡಿದೆ. ಪ್ರಿನ್ಸ್ ಅಭಿನಯ, ಚಿತ್ರದ ಕಾನ್ಸೆಪ್ಟ್ ವಿಚಾರಕ್ಕೆ ಶಬ್ಬಾಶ್ ಎನಿಸಿಕೊಳ್ಳುತ್ತಿರುವ ಈ ಸಿನಿಮಾ ಹಾಡಿನ ವಿಚಾರದಲ್ಲೂ ಗಮನ ಸೆಳೆದಿದೆ.
ಅದರಲ್ಲೂ ಕನ್ನಡದ ಗಾಯಕ ವಿಜಯ್ ಪ್ರಕಾಶ್ ಹಾಡಿರುವ ಹಾಡೊಂದು ಸಖತ್ ಸದ್ದು ಮಾಡ್ತಿದೆ. ಕೇಳುಗರ ಮನಕ್ಕೆ ಖುಷಿ ಕೊಡ್ತಿದೆ. 'ಓಹ್...ವಿಜಯ್ ಪ್ರಕಾಶ್ ಹಾಡಿರೋ ಹಾಡಾ ಇದು....ಅದಕ್ಕೆ ಸೂಪರ್ ಆಗಿದೆ' ಎಂಬ ಮಾತುಗಳು ಕೇಳಿ ಬರುತ್ತಿದೆ.
ಹೌದು, ದೇವಿಶ್ರೀ ಪ್ರಸಾದ್ ಸಂಗೀತ ನಿರ್ದೇಶನ ಹೊಂದಿರುವ ಮಹರ್ಷಿ ಚಿತ್ರದಲ್ಲಿ 'ಇದೇ ಕದ ನೀ ಕಥಾ.....' ಎಂಬ ಹಾಡನ್ನ ವಿಜಯ್ ಪ್ರಕಾಶ್ ಹಾಡಿದ್ದಾರೆ.

ಕಥೆಗೆ ಅನುಸಾರವಾಗಿ ಈ ಹಾಡು ಚಿತ್ರದಲ್ಲಿ ಬರಲಿದ್ದು, ಅದಕ್ಕೆ ತಕ್ಕಂತೆ ಕೊರಿಯೋಗ್ರಫಿ ಮಾಡಲಾಗಿದೆ. ಅದಕ್ಕೆ ಈ ಹಾಡು ಕೇಳುವುದಕ್ಕೂ ಹಾಗೂ ಬೆಳ್ಳಿತೆರೆಯ ಮೇಲೆ ನೋಡುವುದಕ್ಕೂ ತುಂಬಾ ಇಷ್ಟ ಆಗುತ್ತೆ.ಯಜಮಾನ ಸಿನಿಮಾ ಟೈಟಲ್ ಹಾಡು 'ಬಂದ ನೋಡೋ ಯಜಮಾನ....', ರಾಜಕುಮಾರ ಚಿತ್ರದ 'ಬೊಂಬೆ ಹೇಳುತೈತೆ....' ಹಾಡು, ಬಂಗಾರ ಸನ್ ಆಫ್ ಬಂಗಾರದ ಮನುಷ್ಯ ಚಿತ್ರದ 'ಒಂದಾನೊಂದು ಊರಲ್ಲಿ.....' ಹಾಡುಗಳಂತೆ ಮಹರ್ಷಿ ಚಿತ್ರದ 'ಇದೇ ಕದ ನೀ ಕಥಾ.....' ಹಾಡು ಮೂಡಿಬಂದಿದೆ.

ಇನ್ನುಳಿದಂತೆ ಶ್ರೀಮಣಿ ಈ ಹಾಡಿಗೆ ಸಾಹಿತ್ಯ ಬರೆದಿದ್ದು, ವಂಶಿ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ. ಮಹೇಶ್ ಬಾಬು, ಪೂಜಾ ಹೆಗ್ಡೆ, ಅಲ್ಲರಿ ನರೇಶ್, ಜಗಪತಿ ಬಾಬು ಸೇರಿದಂತೆ ಹಲವು ನಟಿಸಿದ್ದಾರೆ. ಅಂದ್ಹಾಗೆ, ವಿಜಯ್ ಪ್ರಕಾಶ್ ತೆಲುಗಿನಲ್ಲಿ ಹಾಡಿರುವ ಮೊದಲ ಹಾಡು ಇದಲ್ಲ. ಅನೇಕ ಹಾಡುಗಳನ್ನ ಹಾಡಿದ್ದಾರೆ.


Click it and Unblock the Notifications











