ವಿಜಯ್ ರಾಘವೇಂದ್ರ ನಟನೆಯ 50ನೇ ಚಿತ್ರದ ಹೆಸರೇನು?

'ಚಿನ್ನಾರಿ ಮುತ್ತ' ವಿಜಯ್ ರಾಘವೇಂದ್ರ ಅವರು 50ನೇ ಸಿನಿಮಾದ ಹೊಸ್ತಿಲಲ್ಲಿದ್ದಾರೆ. ಎರಡು ದಶಕಗಳ ಕಾಲ ಚಿತ್ರರಂಗದಲ್ಲಿ ನಾಯಕನಟನಾಗಿ ಗುರುತಿಸಿಕೊಂಡಿರುವ ವಿಜಯ್ ರಾಘವೇಂದ್ರ ವೃತ್ತಿ ಜೀವನದಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದಾರೆ.

'ಮಾಲ್ಗುಡಿ ಡೇಸ್' ಸಿನಿಮಾ ಬಿಡುಗಡೆಯಾದ ಬಳಿಕ ವಿಜಯ್ ರಾಘವೇಂದ್ರ ಯಾವ ಸಿನಿಮಾ ಮಾಡುತ್ತಿದ್ದಾರೆ ಎಂಬ ಮಾಹಿತಿ ಇರಲಿಲ್ಲ. ಇದೀಗ, ಮುಂದಿನ ಚಿತ್ರದ ಬಗ್ಗೆ ಅಪ್‌ಡೇಟ್ ಹೊರಬಿದಿದ್ದು, ಇದು ಅವರ 50ನೇ ಪ್ರಾಜೆಕ್ಟ್ ಆಗಲಿದೆಯಂತೆ.

ಅಕ್ಟೋಬರ್ 26 ರಂದು, ಸೋಮವಾರ ವಿಜಯ್ ರಾಘವೇಂದ್ರ ಅವರ ಹೊಸ ಸಿನಿಮಾ ಘೋಷಣೆಯಾಗಲಿದೆ. ಸದ್ಯಕ್ಕೆ ಈ ಸಿನಿಮಾದ ಹೆಸರೇನು, ಈ ಚಿತ್ರದಲ್ಲಿ ಅವರ ಪಾತ್ರವೇನು ಹಾಗೂ ಇನ್ನಿತರ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ.

Vijay Raghavendra 50th Movie First look & title revealing on October 26th

ಅಕ್ಟೋಬರ್ 26 ರಂದೇ 50ನೇ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಸಹ ಬಿಡುಗಡೆಯಾಗಲಿದೆ. ಈ ಚಿತ್ರವನ್ನು ಯಾರು ನಿರ್ದೇಶಿಸಲಿದ್ದಾರೆ, ನಾಯಕಿ ಯಾರು ಎಂಬ ಕುತೂಹಲಕ್ಕೆ ಅದೇ ದಿನ ಉತ್ತರ ಸಿಗಬಹುದು.

ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದ್ದ ವಿಜಯ್ ರಾಘವೇಂದ್ರ 2002ರಲ್ಲಿ 'ನಿನಗಾಗಿ' ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದರು. ಅದಾದ ಮೇಲೆ ರೋಮಿಯೋ ಜೂಲಿಯೆಟ್, ಖುಷಿ, ಹಾರ್ಟ್ಸ್‌ಬೀಟ್ಸ್, ವಿಕ್ರಂ, ರಿಷಿ, ಸೇವಂತಿ ಸೇವಂತಿ, ಕಲ್ಲರಳಿ ಹೂವಾಗಿ, ಮಿಂಚಿನ ಓಟ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ.

Recommended Video

Arjun Sarja : ಚಿರು ಮಗನನ್ನು ನೋಡಲು ಚೆನ್ನೈನಿಂದ ಹೋರಟ ಅರ್ಜುನ್ ಸರ್ಜಾ | Filmibeat Kannada

More from Filmibeat

English summary
Kannada actor Vijay Raghavendra's 50th movie first look and title revealing on October 26th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X