Spandana: ಶ್ರೀರಂಗಪಟ್ಟಣದ ಕುಟುಂಬಸ್ಥರಿಂದ ಸ್ಪಂದನಾ ಅಸ್ಥಿ ವಿಸರ್ಜನೆ: ಪುತ್ರ ಶೌರ್ಯನಿಂದ ಪೂಜೆ!

By ಫಿಲ್ಮಿಬೀಟ್ ಡೆಸ್ಕ್

ಸ್ಯಾಂಡಲ್‌ವುಡ್ ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ಮೃತ ಪಟ್ಟಿದ್ದರು. ಬ್ಯಾಂಕಾಕ್‌ಗೆ ಪ್ರವಾಸಕ್ಕೆ ತೆರಳಿದ್ದ ವೇಳೆ ಸ್ಪಂದನಾಗೆ ಹೃದಯಾಘಾತವಾಗಿತ್ತು. ಆಸ್ಪತ್ರೆಗೆ ಕರೆದುಕೊಂಡು ಹೋಗಿತ್ತಾದರೂ ಅವರನ್ನು ಉಳಿಸಿಕೊಳ್ಳುವುದಕ್ಕೆ ಸಾಧ್ಯವಾಗಿರಲಿಲ್ಲ.

ಸ್ಪಂದನಾ ಕುಟುಂಬಸ್ಥರನ್ನು ಅಗಲಿ ಇಂದಿಗೆ (ಆಗಸ್ಟ್ 11) ಐದು ದಿನಗಳೇ ಕಳೆದಿದ್ದು, ಮೂರು ದಿನಗಳ ಹಿಂದಷ್ಟೇ ಅಂತ್ಯಕ್ರಿಯೆ ನಡೆದಿದೆ. ಇಂದು (ಆಗಸ್ಟ್ 11) ಹಾಲು-ತುಪ್ಪ ಬಿಡುವ ಕಾರ್ಯ ನಡೆದಿದೆ. ಪತಿ ವಿಜಯ್ ರಾಘವೇಂದ್ರ, ಮಗ ಶೌರ್ಯ ಸೇರಿದಂತೆ ಸ್ಪಂದನಾ ಕುಟುಂಬಸ್ಥರಿಂದ ಈ ಕಾರ್ಯ ನೆರವೇರಿದೆ.

Vijay Raghavendra and family will do dissolution Spandanas ash in Srirangapatna

ಶ್ರೀರಾಮಪುರದ ಹರಿಶ್ಚಂದ್ರ ಘಾಟ್‌ನಲ್ಲಿ ಪೂಜೆ ನೆರವೇರಿದ್ದು, ಬಳಿದ ಸ್ಪಂದನಾ ಅಸ್ಥಿ ವಿಸರ್ಜನೆ ಕಾರ್ಯ ನಡೆಯಲಿದೆ. ಶ್ರೀರಂಗಪಟ್ಟಣದಲ್ಲಿ ಅಸ್ಥಿ ಬಿಡುವ ಕಾರ್ಯ ನಡೆಯುತ್ತಿದ್ದು, ವಿಜಯ್​ ರಾಘವೇಂದ್ರ ಹಾಗೂ ಶಿವರಾಂ ಕುಟುಂಬಸ್ಥರು ಪೂಜೆಯಲ್ಲಿ ಭಾಗಿ ಆಗಿದ್ದಾರೆ.

ಸ್ಪಂದನಾ ಕೆಲವು ದಿನಗಳ ಹಿಂದಷ್ಟೇ ಬ್ಯಾಂಕಾಕ್‌ಗೆ ಪ್ರವಾಸಕ್ಕೆಂದು ತೆರಳಿದ್ದರು. ಆದರೆ, ಆಗಸ್ಟ್ 6ರಂದು ದಿಢೀರನೇ ಸ್ಪಂದನಾಗೆ ಹೃದಯಾಘಾತವಾಗಿತ್ತು. ತಕ್ಷಣವೇ ಆಸ್ಪತ್ರೆಗೆ ಸೇರಿಸಿದರೂ ಬದುಕಿಸಲು ಸಾಧ್ಯವಾಗಲಿಲ್ಲ. ವಿದೇಶದಲ್ಲಿ ನಿಧನರಾಗಿದ್ದರಿಂದ ಮರಣೋತ್ತರ ಪರೀಕ್ಷೆ ಮಾಡಿ, ವರದಿ ಸಲ್ಲಿಸಿದ ಬಳಿಕ ಕುಟುಂಬಕ್ಕೆ ಹಸ್ತಾಂತರ ಮಾಡಲಾಗಿತ್ತು.

ಸ್ಪಂದನಾ ಅಗಲಿದ ಸುದ್ದಿ ತಿಳಿದ ಬಳಿಕ ಸ್ಪಂದನಾ ಕುಟುಂಬ ಬ್ಯಾಂಕಾಕ್‌ಗೆ ತೆರಳಿತ್ತು. ಅಲ್ಲಿನ ಕಾನೂನು ಪ್ರಕ್ರಿಯೆಯನ್ನು ಮುಗಿಸಿದ ಬಳಿಕ ಬ್ಯಾಂಕಾಕ್‌ನಿಂದ ಪಾರ್ಥೀವ ಶರೀರವನ್ನು ಬೆಂಗಳೂರಿಗೆ ತೆಗೆದುಕೊಂಡು ಬರಲಾಗಿತ್ತು. ಬಳಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ ಬಳಿಕ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು.

ಇಂದು (ಆಗಸ್ಟ್ 11) ಸ್ಪಂದನಾಗೆ ಇಷ್ಟವಾದ ಪದಾರ್ಥಗಳನ್ನಿಟ್ಟು ಕುಟುಂಬದವರು ಪೂಜೆಯನ್ನು ಸಲ್ಲಿಸಿದ್ದಾರೆ. ಪತಿ ವಿಜಯ್ ರಾಘವೇಂದ್ರ ಹಾಗೂ ಪುತ್ರ ಶೌರ್ಯ ಪೂಜಾ ಕಾರ್ಯವನ್ನು ನೆರವೇರಿಸಿದ್ದಾರೆ. ಈ ಪೂಜೆ ಬಳಿಕ ಕುಟುಂಬ ಸ್ಪಂದನಾ ಅಸ್ಥಿಯೊಂದಿಗೆ ಶ್ರೀರಂಗಪಟ್ಟಣಕ್ಕೆ ತೆರಳಲಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕಾವೇರಿ ನದಿಯಲ್ಲಿ ಸ್ಪಂದನಾ ಅಸ್ಥಿಯನ್ನು ಬಿಡಲಿದೆ.

ಈಡಿಗ ಸಂಪ್ರದಾಯದ ಪ್ರಕಾರವೇ ಅಸ್ಥಿ ವಿಸರ್ಜನೆ ನಡೆಯಲಿದೆ. ಶ್ರೀರಂಗಪಟ್ಟಣದ ಕಾವೇರಿ ನದಿಯಲ್ಲಿ ಅಸ್ಥಿ ಬಿಟ್ಟರೆ ಮೃತರಿಗೆ ಮುಕ್ತಿ ಸಿಗಲಿದೆ ಎಂಬ ನಂಬಿಕೆ ಇದ್ದು, ಸಂಪ್ರದಾಯದಂತೆ ಅಸ್ಥಿ ವಿಸರ್ಜನೆ ನಡೆಯಲಿದೆ. ಈ ಕಾರ್ಯದಲ್ಲಿ ಪತಿ ವಿಜಯ್ ರಾಘವೇಂದ್ರ, ಪುತ್ರ ಶೌರ್ಯ, ಶ್ರೀಮುರಳಿ, ಸ್ಪಂದನಾ ತಂದೆ ಶಿವರಾಂ, ವಿಜಯ್ ರಾಘವೇಂದ್ರ ತಂದೆ ಚಿನ್ನೇಗೌಡರು ಸೇರಿ ಎರಡೂ ಕುಟುಂಬಗಳು ಅಸ್ಥಿ ವಿಸರ್ಜನೆ ಕಾರ್ಯದಲ್ಲಿ ಭಾಗಿಯಾಗಲಿದೆ.

More from Filmibeat

English summary
Spandana's ash will be dissolution in Srirangapatna:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X