'ಚೌಕ' ನಂತರ ಒಟ್ಟಿಗೆ ಬರ್ತಿದ್ದಾರೆ ವಿಜಯ್ ರಾಘವೇಂದ್ರ ಮತ್ತು ಪ್ರಜ್ವಲ್
'ಚೌಕ' ಸಿನಿಮಾದಲ್ಲಿ ಮೋಡಿ ಮಾಡಿದ್ದ ವಿಜಯ್ ರಾಘವೇಂದ್ರ ಮತ್ತು ಪ್ರಜ್ವಲ್ ಜೋಡಿ ಮತ್ತೆ ಒಟ್ಟಿಗೆ ಎಂಟ್ರಿ ಕೊಡುತ್ತಿದ್ದಾರೆ. 'ಯದಾ ಯದಾ ಹೀ ಧರ್ಮಸ್ಯ' ಚಿತ್ರದ ಮೂಲಕ ಈ ಇಬ್ಬರು ಗೆಳೆಯರು ಮತ್ತೆ ಒಟ್ಟಿಗೆ ತೆರೆಮೇಲೆ ಬರುತ್ತಿರುವುದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.
ಚಾಕಲೇಟ್ ಹೀರೋ ಆಗಿ ಮಿಂಚುತ್ತಿದ್ದ ಚಿನ್ನಾರಿ ಮುತ್ತ ಈ ಸಿನಿಮಾ ಮೂಲಕ ಮೊದಲ ಬಾರಿಗೆ ಮಾಸ್ ಲುಕ್ ನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಚಿತ್ರದಲ್ಲಿ ನಾಯಕನಾಗಿ ಆಕ್ಷನ್ ನಲ್ಲಿ ಖದರ್ ತೋರಿಸಿರುವ ವಿಜಯ್ ರಾಘವೇಂದ್ರ ನೆಗೆಟಿವ್ ಶೇಡ್ ನಲ್ಲಿಯೂ ಕಾಣಸಿಗುತ್ತಾರಂತೆ. ಇನ್ನು ವಿಜಯ್ ಜೊತೆಗೆ ಸ್ನೇಹಿತ ಸಹ ಪ್ರಜ್ವಲ್ ದೇವರಾಜ್ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ.
ಇನ್ನು ಚಿತ್ರದ ಮತ್ತೊಂದು ಆಕರ್ಷಣೆ ಅಂದ್ರೆ ಖಳನಾಯಕನಾಗಿ ಕಾಣಿಸಿಕೊಂಡಿರುವ ಸಾಯಿ ಕುಮಾರ್ ಪಾತ್ರ. ಇದುವರೆಗೂ ಕಾಣಿಸದ ವಿಭಿನ್ನ ಪಾತ್ರದಲ್ಲಿ ಸಾಯಿ ಕುಮಾರ್ ಅಭಿನಯಿಸಿದ್ದಾರಂತೆ. ಅಂದ್ಹಾಗೆ 'ಯದಾ ಯದಾ ಹೀ ಧರ್ಮಸ್ಯ' ಚಿತ್ರಕ್ಕೆ ಯುವ ಪ್ರತಿಭೆ ವಿರಾಜ್ ಆಕ್ಷನ್ ಕಟ್ ಹೇಳಿದ್ದಾರೆ. ಅಕ್ಷರ ತಿವಾರಿ ನಿರ್ಮಾಣದಲ್ಲಿ ಚಿತ್ರ ಮೂಡಿಬಂದಿದೆ.

ಉಳಿದಂತೆ ಚಿತ್ರದಲ್ಲಿ ಶ್ರಾವ್ಯ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸಾಧು ಕೋಕಿಲ, ಗಡ್ಡಪ್ಪ, ಪ್ರಥಮ್, ಪದ್ಮಾ ವಸಂತಿ ಸೇರಿದಂತೆ ದೊಡ್ಡ ತಾರಾಬಳಗವಿದೆ. ಈಗಾಗಲೇ ಟ್ರೈಲರ್ ಮತ್ತು ಹಾಡುಗಳ ಮೂಲಕ ಚಿತ್ರಾಭಿಮಾನಿಗಳ ಗಮನ ಸಳೆದಿರುವ 'ಯದಾ ಯಾದಾ ಹೀ ಧರ್ಮಸ್ಯ' ಇದೆ ತಿಂಗಳು 29ರಂದು ತೆರೆಗೆ ಬರುತ್ತಿದೆ.


Click it and Unblock the Notifications











