ವಿಜಯ್ ರಾಘವೇಂದ್ರ ಹೊಸ ಸಿನಿಮಾ 'ಸಾವಿತ್ರಿ' ಮುಹೂರ್ತ
'ಚಿನ್ನಾರಿ ಮುತ್ತ' ವಿಜಯ್ ರಾಘವೇಂದ್ರ ಇತ್ತೀಚಿಗಷ್ಟೆ ತಮ್ಮ 50ನೇ ಚಿತ್ರವನ್ನು ಘೋಷಣೆ ಮಾಡಿದ್ದರು. 'ಸೀತಾರಾಮ್ ಬಿನೋಯ್' ಎಂಬ ಕ್ರೈಂ ಥ್ರಿಲ್ಲಿಂಗ್ ಚಿತ್ರದಲ್ಲಿ ನಟಿಸುತ್ತಿರುವ ವಿಜಯ್ ರಾಘವೇಂದ್ರ ಈಗ ಮತ್ತೊಂದು ಹೊಸ ಸಿನಿಮಾ ಆರಂಭಿಸಿದ್ದಾರೆ.
ದೀಪಾವಳಿ ಹಬ್ಬದ ಪ್ರಯುಕ್ತ ಜಯ್ ರಾಘವೇಂದ್ರ ಇನ್ನೊಂದು ಸಿನಿಮಾ ಘೋಷಿಸಿದ್ದರು. ಆ ಚಿತ್ರಕ್ಕೆ ಸಾವಿತ್ರಿ ಎಂದು ನಾಮಕರಣ ಸಹ ಮಾಡಲಾಗಿತ್ತು. ಈ ಚಿತ್ರ ಇತ್ತೀಚಿಗಷ್ಟೆ ಅಧಿಕೃತವಾಗಿ ಸೆಟ್ಟೇರಿದೆ.
ವಿಜಯ್ ರಾಘವೇಂದ್ರ ಜೊತೆ ಹಿರಿಯ ನಟಿ ತಾರಾ ಪ್ರಮುಖ ಪಾತ್ರವೊಂದನ್ನು ಮಾಡುತ್ತಿದ್ದು, ಮುಹೂರ್ತ ಕಾರ್ಯಕ್ರಮದಲ್ಲಿ ಸಹ ಭಾಗಿಯಾಗಿದ್ದರು.

ಮೂಲತಃ ಸಾಫ್ಟ್‌ವೇರ್ ಉದ್ಯೋಗಿ ಆಗಿರುವ ಪ್ರಶಾಂತ್ ಕುಮಾರ್ ಎಂಬುವವರು ಪಿ.ಎಸ್.ಪಿ ಪ್ರೊಡಕ್ಷನ್‌ನಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಹಿಂದೆ ಉಯ್ಯಾಲೆ ಚಿತ್ರ ನಿರ್ದೇಶಿಸಿದ್ದ ದಿನೇಶ್ ಈಗ ಸಾವಿತ್ರಿ ಸಿನಿಮಾಗೂ ಡೈರೆಕ್ಷನ್ ಮಾಡ್ತಿದ್ದಾರೆ.
ವಿಶೇಷ ಅಂದ್ರೆ ಸಿನಿಮಾಗಳಿಗೆ ಗೀತೆ ರಚನೆ ಮಾಡುವ ಮೂಲಕ ಖ್ಯಾತಿ ಗಳಿಸಿಕೊಂಡಿರುವ ಹೃದಯ ಶಿವ, ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿ ಬಡ್ತಿ ಪಡೆಯುತ್ತಿದ್ದಾರೆ.
ಮುಹೂರ್ತ ದಿನದಿಂದಲೇ ಚಿತ್ರೀಕರ ಆರಂಭಿಸಿರುವ ಸಾವಿತ್ರಿ ಚಿತ್ರತಂಡ ಬೆಂಗಳೂರು ಸುತ್ತಾಮುತ್ತ 45 ದಿನಗಳ ಕಾಲ ಚಿತ್ರೀಕರಣ ಮಾಡಲು ಯೋಜಿಸಿದೆ. ಇನ್ನುಳಿದಂತೆ ಪ್ರಕಾಶ್ ಬೆಳವಾಡಿ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂಜು ಬಸಯ್ಯ, ಬೇಬಿ ಲೈಲಾ, ಪ್ರಮೋದ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಲಿದ್ದಾರೆ.


Click it and Unblock the Notifications











