ನನ್ನ ಮನಸ್ಸಲ್ಲಿ ಬೇರೆ ಯಾರಿಗೂ ಜಾಗ ಇಲ್ಲ; ವಿಜಯ್ ರಾಘವೇಂದ್ರ

ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ಸುದ್ದಿ ವೈರಲ್ ಆಗುತ್ತಿರುತ್ತದೆ. ಅದರಲ್ಲೂ ಸೆಲೆಬ್ರೆಟಿಗಳ ಬಗ್ಗೆ ಅಂತೆ ಕಂತೆ ಸುದ್ದಿಗಳ ದರ್ಬಾರು ಜೋರಾಗಿಯೇ ಇರುತ್ತದೆ. ಕೆಲವರು ಈ ಬಗ್ಗೆ ಪ್ರತಿಕ್ರಿಯಿಸುವ ಗೋಜಿಗೇ ಹೋಗುವುದಿಲ್ಲ. ಒಮ್ಮೆ ಸ್ಪಷ್ಟನೆ ಕೊಟ್ಟರೆ ಅಂತಹ ಮತ್ತಷ್ಟು ವದಂತಿ ಹರಡುತ್ತದೆ. ಎಲ್ಲದಕ್ಕೂ ಪ್ರತಿಕ್ರಿಯಿಸುತ್ತಾ ಕೂರಬೇಕಾಗುತ್ತದೆ.

ನಟ ವಿಜಯ್ ರಾಘವೇಂದ್ರ ಹಾಗೂ ನಟಿ ಮೇಘನಾ ರಾಜ್ ಎರಡನೇ ಮದುವೆ ಆಗುತ್ತಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪದೇ ಪದೆ ಕೆಲವರು ಪೋಸ್ಟ್ ಮಾಡುತ್ತಾರೆ. ಮೇಘನಾ ಪತಿಯನ್ನು ಕಳೆದುಕೊಂಡಿದ್ದಾರೆ, ವಿಜಯ್ ಪತ್ನಿಯನ್ನು ಕಳೆದುಕೊಂಡಿದ್ದಾರೆ. ಹಾಗಾಗಿ ಇವರಿಬ್ಬರು ಮದುವೆ ಆಗುತ್ತಾರಂತೆ, ಇಬ್ಬರೂ ಮದುವೆ ಆದ್ರೆ ಚೆನ್ನಾಗಿರುತ್ತದೆ ಅಂತೆಲ್ಲಾ ವೀವ್ಸ್, ಲೈಕ್ಸ್‌ಗಾಗಿ ಕೆಲವರು ಬರೆಯುತ್ತಾರೆ. ಇದನ್ನೇ ಕೆಲವರು ನಿಜ ಎಂದು ನಂಬಿಬಿಡುತ್ತಾರೆ.

Vijay Raghavendra Shuts Down Marriage Rumors with Meghana Raj It s All a Lie

ಇತ್ತೀಚೆಗೆ ನಟಿ ಮೇಘನಾ ರಾಜ್ ಇಂತಹ ವದಂತಿಗಳಿಗೆಲ್ಲಾ ಬ್ರೇಕ್ ಹಾಕಿದ್ದರು. ಇದೀಗ ನಟ ವಿಜಯ ರಾಘವೇಂದ್ರ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಫಸ್ಟ್ ಡೇ ಫಸ್ಟ್ ಶೋ ಕನ್ನಡ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. "ಅದೆಲ್ಲಾ ಸುಳ್ಳು.. ಇಂತಹ ವಿಚಾರಕ್ಕೆ ಸ್ಪಷ್ಟೀಕರಣ ಕೊಡುವುದು ಹಿಂಸೆ ಅನ್ನಿಸುತ್ತೆ. ಕೆಲವೊಮ್ಮೆ ಕೋಪ ಕೂಡ ಬರುತ್ತೆ" ಎಂದಿದ್ದಾರೆ.

"ನನ್ನ ವಿಚಾರದಲ್ಲಿ ಇನ್ನು ಮುಂದೆ ಹೇಗೆ ಎನ್ನುವ ಕಾಳಜಿ, ಪ್ರೀತಿಯನ್ನು ಬಹುತೇಕರು ತೋರಿಸುತ್ತಾರೆ. ಆದರೆ ಅದು ಸುದ್ದಿಯಾಗಿ ಹಬ್ಬಿದಾಗ ಅದು ಕುಟುಂಬಗಳ ಮೇಲೆ ಪರಿಣಾಮ ಬೀರುತ್ತದೆ, ನನಗೂ ಮಗ ಇದ್ದಾನೆ. ಅದರ ಬಗ್ಗೆ ನಾನು ಮಾತಾಡಲ್ಲ. ಅದು ಸತ್ಯಕ್ಕೆ ದೂರವಾದುದು. ಮೇಘಾ ಅಥವಾ ಇನ್ನಾರ ಜೊತೆಗೋ ನಾನು ಮದುವೆ ಆಗ್ತೀನಿ ಎನ್ನುವುದು ಸುಳ್ಳು. ಇನ್ನೊಂದು ಮದುವೆ ಅಥವಾ ಮತ್ತೊಬ್ಬರನ್ನು ನನ್ನ ಬದುಕಿಗೆ ಬರಮಾಡಿಕೊಳ್ಳುವುದು ಇನ್ನು ಆಗದ ಕೆಲಸ" ಎಂದು ವಿಜಯ್ ರಾಘವೇಂದ್ರ ಹೇಳಿದ್ದಾರೆ.

ಇದೇ ವಿಚಾರದ ಬಗ್ಗೆ ಇತ್ತೀಚೆಗೆ ಪ್ರತಿಕ್ರಿಯಿಸಿದ್ದ ಮೇಘನಾ ರಾಜ್ "ನಾನು ಏನು ಮಾತನಾಡುತ್ತಿಲ್ಲ. ಜನರೇ ಆ ರೀತಿ ಕಲ್ಪಿಸಿಕೊಂಡು ಹೇಳುತ್ತಿದ್ದಾರೆ. ಅವ್ರಿಗೆ ಖುಷಿಯಾಗುತ್ತದೆ ಅಂದ್ರೆ ಮಾತನಾಡಲಿ" ಎಂದಿದ್ದರು. ಒಟ್ಟಾರೆ ಖುದ್ದು ವಿಜಯ್ ರಾಘವೇಂದ್ರ ಹಾಗೂ ಮೇಘನಾ ರಾಜ್ ಇದೆಲ್ಲಾ ಸುಳ್ಳು ಎಂದು ಹೇಳಿದರೂ ಕೆಲವರು ಕೇಳದೇ ವದಂತಿ ಹಬ್ಬಿಸುತ್ತಲೇ ಇದ್ದಾರೆ.

'ರುದ್ರಾಭಿಷೇಕ', 'ಕುರ್ಕ', 'ಮಹಾನ್', 'ರಿಪ್ಪನ್ ಸ್ವಾಮಿ' ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ವಿಜಯ್ ರಾಘವೇಂದ್ರ ನಟಿಸುತ್ತಿದ್ದಾರೆ. ಕಿರುತೆರೆಯಲ್ಲಿ ಕೂಡ ಮಿಂಚುತ್ತಿದ್ದಾರೆ. ಕಳೆದ ವರ್ಷ 'ಕೇಸ್ ಆಫ್ ಕೊಂಡಾಣ', 'ಜೋಗ್ 101' ಹಾಗೂ 'ಗ್ರೇ ಗೇಮ್ಸ್' ಎಂಬ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು.

ಇದೇ ವರ್ಷ ಬಂದಿದ್ದ 'FIR' ಎಂದ ಸಿನಿಮಾದಲ್ಲಿ ರಾಘು ಮಿಂಚಿದ್ದರು. ಫೆಬ್ರವರಿಯಲ್ಲಿ ಸಿನಿಮಾ ತೆರೆಗೆ ಬಂದಿತ್ತು. ಇತ್ತೀಚೆಗೆ ವಿಜಯ್ ರಾಘವೇಂದ್ರ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳ ಕಡೆ ಹೆಚ್ಚು ಮುಖ ಮಾಡುತ್ತಿದ್ದಾರೆ.

More from Filmibeat

English summary
Vijay Raghavendra responds to viral rumors about his marriage with Meghana Raj
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X