ಇಡೀ ಸಿನಿಮಾದಲ್ಲಿ ಒಂದೇ ಪಾತ್ರ.. ಒಂಟಿ 'ರಾಘು'ಗೆ ಜಂಟಿಯಾದ ಶಿವಣ್ಣ!

By ಫಿಲ್ಮಿಬೀಟ್ ಡೆಸ್ಕ್

ಕನ್ನಡ ಚಿತ್ರರಂಗದಲ್ಲಿ ದುಬಾರಿ ಸಿನಿಮಾಗಳದ್ದೇ ದರ್ಬಾರ್. ಯಾರು ನೋಡಿದರೂ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ನಿರ್ಮಾಣ ಮಾಡುವಲ್ಲಿ ಬ್ಯುಸಿಯಾಗಿದ್ದಾರೆ. ಅದೇ ಇನ್ನೊಂದು ಕಡೆ ಭಿನ್ನ-ವಿಭಿನ್ನ ಹಾಗೂ ಪ್ರಯೋಗಾತ್ಮಕ ಸಿನಿಮಾಗಳು ಪ್ರೇಕ್ಷಕರ ಮೆಚ್ಚುಗೆ ಗಳಿಸುತ್ತಿವೆ.

ವಿಭಿನ್ನ ಸಿನಿಮಾ ಮೂಲಕ ಗಮನ ಸೆಳೆಯುತ್ತಿರುವ ಸಿನಿಮಾಗಳಲ್ಲಿ ವಿಜಯ್ ರಾಘವೇಂದ್ರ ನಟನೆಯ 'ರಾಘು' ಕೂಡ ಒಂದು. ಒಂದಿಷ್ಟು ಕೌತುಕಗಳೊಂದಿಗೆ ಕನ್ನಡದ ವಿಭಿನ್ನ ಸಿನಿಮಾ 'ರಾಘು' ರಿಲೀಸ್‌ಗೆ ರೆಡಿಯಾಗಿ ನಿಂತಿದೆ. ಈ ಸಿನಿಮಾ ಏಪ್ರಿಲ್ 28ಕ್ಕೆ ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ..

ಇತ್ತೀಚೆಗೆ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ನಟನೆಯ ಹೊಸ ಬಗೆಯ ಸಿನಿಮಾ 'ರಾಘು' ಟ್ರೈಲರ್ ರಿಲೀಸ್ ಆಗಿದೆ. ಇದೊಂದು ವಿಭಿನ್ನ ಸಿನಿಮಾ. ಪ್ರೇಕ್ಷಕರನಿಗೆ ಈ ಸಿನಿಮಾ ಥ್ರಿಲ್ ನೀಡುತ್ತಾ ಮುಂದೆ ಸಾಗುತ್ತೆ. ವಿಶೇಷ ಅಂದ್ರೆ ಇಡೀ ಸಿನಿಮಾದಲ್ಲಿ ವಿಜಯ್ ರಾಘವೇಂದ್ರ ಒಬ್ಬರೇ ಕಾಣಿಸಿಕೊಳ್ಳುತ್ತಾರೆ.

ಸೋಲೊ 'ರಾಘು' ಸೆಂಚುರಿ ಸ್ಟಾರ್ ಶಿವಣ್ಣ ಬಲ

'ರಾಘು' ಒಂದು ಸೋಲೊ ಆಕ್ಟಿಂಗ್ ಸಿನಿಮಾ ಅಂತ ಹೇಳಬಹುದು. ಯುವ ನಿರ್ದೇಶಕ ಎಂ ಆನಂದ್ ರಾಜ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಕನ್ನಡ ಚಿತ್ರರಂಗದ ಮಟ್ಟಿಗೆ ಇದೊಂದು ಅಪ್ಪಟ ಪ್ರಯೋಗಾತ್ಮಕ ಸಿನಿಮಾ. ಅಂದ್ಹಾಗೆ ಒಂಟಿಯಾಗಿ ಬರುತ್ತಿರುವ ಚಿನ್ನಾರಿ ಮುತ್ತನಿಗೆ ಶಿವಣ್ಣ ಸಾಥ್ ಕೊಟ್ಟಿದ್ದಾರೆ. 'ರಾಘು' ಟ್ರೈಲರ್‌ಗೆ ಶಿವಣ್ಣನ ಪವರ್ ಫುಲ್ ವಾಯ್ಸ್ ಸಿಕ್ಕಿದೆ. ಹೀಗಾಗಿ ಸಿನಿಮಾ ಬಗ್ಗೆ ಖದರ್ ಮತ್ತಷ್ಟು ಹೆಚ್ಚಿದೆ.

"ಜೀವನದ ದಾರಿಯಲ್ಲಿ ಕಷ್ಟ ಎಂಬ ಗುಂಡಿಗಳಿರುತ್ತೆ. ಆದರೆ. ಇವನ ದಾರಿಯಲ್ಲಿ ಆಪತ್ತು ಎಂಬ ಅಡ್ಡ ದೊಡ್ಡ ಗೋಡೆ ನಿಂತಿತ್ತು" ಎಂಬ ಪಂಚಿಂಗ್ ಡೈಲಾಗ್ 'ರಾಘು' ಟ್ರೈಲರ್‌ನ ಹೈಲೈಟ್. ಶಿವಣ್ಣನ ವಾಯ್ಸ್, ವಿಜಯ್ ರಾಘವೇಂದ್ರ ಆಕ್ಟಿಂಗ್, ಉದಯ್ ಲೀಲಾ ಛಾಯಾಗ್ರಹಣ, ಸೂರಜ್ ಜೋಯಿಸ್ ಸಂಗೀತ ನೋಡುಗರ ಗಮನ ಸೆಳೆಯುತ್ತಿದೆ.

Vijay Raghavendra Starrer Raghu Movie Trailer Released by Shivarajkumar

ಹಿತವಾದ ಗೊಂದಲವಿದೆ

'ರಾಘು' ಸಿನಿಮಾ ಬಳಿಕ ವಿಜಯ್ ರಾಘವೇಂದ್ರ ಮನಬಿಚ್ಚಿ ಮಾತಾಡಿದ್ದಾರೆ "ರಾಘು ಸಿನಿಮಾ ಬಗ್ಗೆ ಮಾತಾನಾಡಲು ತುಂಬಾ ಅಂಶವಿದೆ. ಸಿನಿಮಾ ಹಿಂದೆ ಪಟ್ಟಿರುವ ಶ್ರಮ ಸೇರಿದಂತೆ ತುಂಬಾ ವಿಚಾರಗಳ ಬಗ್ಗೆ ಮಾತಾಡಬೇಕು. ಏಪ್ರಿಲ್ 28ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ. ಸಿನಿಮಾದ ಟ್ರೈಲರ್, ಸಾಂಗ್ ನೋಡಿ ಖುಷಿಪಡುತ್ತಿದ್ದೇವೋ, ಅವೆಲ್ಲರದ ಬಗ್ಗೆ ಮಾತನಾಡಲು 28 ಬರಬೇಕು. ಜನ ಸಿನಿಮಾ ನೋಡಬೇಕು. ಈಗ ಒಂದು ಹಿತವಾದ ಗೊಂದಲವಿದೆ. ಅದು ನಮ್ಮ 'ರಾಘು' ಸಿನಿಮಾದ ಬಲ. ಸೋಲೋ ಆಕ್ಟರ್ ಸಿನಿಮಾವಾಗಿದ್ದು, ಒಬ್ಬನೇ ಕಲಾವಿದ ಇಡೀ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾನೆ." ಎಂದು ಸಿನಿಮಾ ಬಗ್ಗೆ ಮಾತಾಡಿದ್ದಾರೆ.

ಇನ್ನು ನಿರ್ದೇಶಕ ಎಂ.ಆನಂದ್ ರಾಜ್ ಮಾತನಾಡಿ "ರಾಘು ಪಯಣಕ್ಕೆ ಬೆಂಬಲ ಕೊಟ್ಟ ನಿರ್ಮಾಪಕರಿಗೆ ಧನ್ಯವಾದ. ಎಲ್ಲಾ ಆಕ್ಟರ್ಸ್ ಹಾಕಿಕೊಂಡು ಸಿನಿಮಾ ಮಾಡಿದಾಗ ನಿರ್ಮಾಪಕರು ಸಿಗುವುದು ಕಷ್ಟ. ಇನ್ನೂ ಸೋಲೋ ಆಕ್ಟರ್ ಇಟ್ಟುಕೊಂಡು ಕಥೆ ಹೆಣೆದು ಸಿನಿಮಾ ಮಾಡುವುದು ತುಸು ಕಷ್ಟವೇ. ಇದು ಸಂಪೂರ್ಣ ಟೆಕ್ನಿಕಲ್ ಸಿನಿಮಾವಾಗಿದ್ದು, ಸೋಲೋ ಆಕ್ಟರ್ ಕಥೆಯಾಗಿದ್ರೂ ಸಾಂಗ್ಸ್, ಫೈಟ್ಸ್, ಟ್ವಿಸ್ಟ್ ಎಲ್ಲವೂ ಇದೆ." ಎಂದು ನಿರ್ದೇಶಕರು ಕುತೂಹಲ ಕೆರಳಿಸಿದ್ದಾರೆ.

ರನ್ವಿತ್ ಶಿವಕುಮಾರ್ ಹಾಗೂ ಅಭಿಷೇಕ್ ಕೋಟ 'ರಾಘು' ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. "ರಾಘು ಬರೀ ಸಿನಿಮಾವಲ್ಲ. ನಮ್ಮ ತಂಡಕ್ಕೆ ಒಂದು ಎಮೋಷನ್" ಎಂದಿದ್ದಾರೆ. ಇನ್ನು ಈ ಸಿನಿಮಾಗೆ ದೊಡ್ಮನೆಯಿಂದ ಬೆಂಬಲ ಸಿಕ್ಕಿದ್ದಕ್ಕೆ ಖುಷಿ ಪಟ್ಟಿದ್ದಾರೆ. ಈಗಾಗಲೇ ಶಿವಣ್ಣ ಸಿನಿಮಾ ನೋಡಿ ಖುಷಿಪಟ್ಟಿದ್ದಾರೆಂದು ಚಿತ್ರತಂಡ ಹೇಳಿಕೊಂಡಿದೆ.

More from Filmibeat

English summary
Vijay Raghavendra Starrer Raghu Movie Trailer Released by Shivarajkumar,know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X