ಮನೆಮಂದಿಯ ಮುದ್ದಿನ ಅಚ್ಚು.. ಚಾಡಿ ಬುರುಕಿ ಸ್ಪಂದನಾ ಬಾಲ್ಯ ಹೇಗಿತ್ತು? ಅಪ್ಪ ಇಟ್ಟಿದ್ದ ಅಡ್ಡಹೆಸರು ಏನು?

ಕುಟುಂಬದ ಜೊತೆ ಬ್ಯಾಂಕಾಕ್ ಪ್ರವಾಸದ ವೇಳೆ ಸ್ಪಂದನಾ ವಿಜಯ್ ರಾಘವೇಂದ್ರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಸ್ಪಂದನಾ ಮೃತದೇಹ ಮಂಗಳವಾರ (ಆಗಸ್ಟ್ 8) ಭಾರತಕ್ಕೆ ಕರೆತರಲಾಗುತ್ತದೆ. ಆಕೆಯ ಅಗಲಿಕೆ ಚಿತ್ರರಂಗಕ್ಕೆ ಆಘಾತ ತಂದಿದೆ. ಚಿಕ್ಕ ವಯಸ್ಸಿನಲ್ಲೇ ಹೃದಯಘಾತದಿಂದ ಸ್ಪಂದನಾ ಸಾವನ್ನಪ್ಪಿರುವುದು ಅಭಿಮಾನಿಗಳಿಗೂ ಬೇಸರ ತಂದಿದೆ.

ತಂದೆ ಬಿ. ಕೆ ಶಿವರಾಂ ದಕ್ಷ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದವರು. ಹಾಗಾಗಿ ಮನೆಯಲ್ಲಿ ಬಹಳ ಶಿಸ್ತಿನ ವಾತಾರವರಣ ಇತ್ತು. ಸೌಮ್ಯ ಸ್ವಭಾವದ ಸ್ಪಂದನಾ ಅಣ್ಣ ರಕ್ಷಿತ್ ಜೊತೆ ಆಡಿ ಬೆಳೆದವರು. ಸ್ಟಾರ್ ಸುವರ್ಣ ವಾಹಿನಿಯ 'ನಮ್ ಕಥೆ ನಿಮ್ ಜೊತೆ' ಸಂದರ್ಶನದಲ್ಲಿ ಸ್ಪಂದನಾ ತಮ್ನಾ ಬಾಲ್ಯದ ದಿನಗಳ ಬಗ್ಗೆ ಮಾತನಾಡಿದ್ದರು. ಆಕೆಯ ಸಹೋದರ ರಕ್ಷಿತ್ ಕೂಡ ತಮ್ಮಿಬ್ಬರ ಬಾಲ್ಯ ಹೇಗಿತ್ತು ಎನ್ನುವುದನ್ನು ವಿವರಿಸಿದ್ದರು. ತಂದೆ ಬಿ. ಕೆ ಶಿವರಾಂ ಬಹಳ ಶಿಸ್ತಿನ ವ್ಯಕ್ತಿಯಾದರೂ ಸ್ಪಂದನಾ ಜೊತೆ ಅಷ್ಟೇನು ಸ್ಟ್ರಿಕ್ಟ್ ಆಗಿ ಇರುತ್ತಿರಲಿಲ್ಲವಂತೆ.

Spandana-vijay-raghavendra-childwood

ಸ್ಪಂದನಾ ಚಿಕ್ಕಂದಿನಲ್ಲಿ ಬಹಳ ಸೈಲೆಂಟ್ ಆಗಿ ಇರುತ್ತಿದ್ದರು. ಏನೇ ಇದ್ದರೂ ಸಂಜೆ ತಂದೆ ಮನೆಗೆ ಬಂದಮೇಲೆ ಹೇಳುತ್ತಿದ್ದರಂತೆ. ಒಂದರ್ಥದಲ್ಲಿ ಚಾಡಿಬುರುಕಿ ಅಂದರೂ ತಪ್ಪಿಲ್ಲ. ಸಹಜವಾಗಿ ಅಣ್ಣ- ತಂಗಿ ಜಗಳ ಆಡುವಂತೆ ನಾವು ಆಡಿ ಬೆಳೆದವರು. ಅಚ್ಚನೇ ಅಪ್ಪನ ಮುದ್ದಿನ ಮಗಳು. ಚಿಕ್ಕವಳಿದ್ದಾಗ ಅತೀ ಕಡಿಮೆ ಬಟ್ಟೆ ಹಾಕುತ್ತಿದ್ದಳು. ಅದಕ್ಕೆ ಅಪ್ಪ ಪ್ರೀತಿಯಿಂದ ಮೋಗ್ಲಿ ಎಂದು ಕರೆಯುತ್ತಿದ್ದರು ಎಂದು ಅಣ್ಣ ನೆನಪಿಸಿಕೊಂಡಿದ್ದರು.

ಕೋಪ ಬಂದಾಗ ಯಾರು ಏನೇ ಮಾಡಿದರೂ ತಕ್ಷಣ ಯಾರ ಬಳಿಯಾದರೂ ಸ್ಪಂದನಾ ಹೇಳಿಬಿಡುತ್ತಿದ್ದರಂತೆ. ತಂದೆ ಇಲಾಖೆಯಲ್ಲಿ ಇದ್ದಿದ್ದರಂತೆ ಮನೆಯಲ್ಲಿ ಹೆಚ್ಚು ಇರುತ್ತಿರಲಿಲ್ಲ. ಆಗ ಅಣ್ಣ ರಕ್ಷಿತ್ ತಂಗಿಯನ್ನು ಜೋಪಾನ ಮಾಡುತ್ತಿದ್ದರಂತೆ. ಚಿತ್ರರಂಗದ ವ್ಯಕ್ತಿಗೆ ಸ್ಪಂದನಾರನ್ನ ಮದುವೆ ಮಾಡಿಕೊಡಬೇಕು ಎಂದಾಗ ಮನೆಯವರು ಬಹಳ ಯೋಚಿಸಿದ್ದರಂತೆ. ಅಲ್ಲಿಯವರೆಗೆ ಚಿತ್ರರಂಗದವರ ಬಗ್ಗೆ ಏನೇನೋ ಕೇಳಿದ್ದೆವು, ಹಾಗಾಗಿ ಬಹಳ ಯೋಚಿಸಿದೆವು. ಆದರೆ ನಾವು ಅಂದುಕೊಂಡಿದ್ದಕ್ಕಿಂತ ಎಲ್ಲದಕ್ಕೂ ವಿಜಯ್ ವಿರುದ್ಧವಾಗಿದ್ದರು, ಎಲ್ಲರೂ ಇಷ್ಟಪಡುವಂತಹ ಸಜ್ಜನ, ಸರಳ ವ್ಯಕ್ತಿ ನನ್ನ ಭಾವನಾಗಿ ಬಂದಿದ್ದು ನಮ್ಮ ಅದೃಷ್ಟ ಎಂದು ರಕ್ಷಿತ್ ಹೇಳಿದ್ದರು.

Spandana-vijay-raghavendra-childwood

ಕಾಫಿಡೇಯಲ್ಲಿ ಮೊದಲ ಬಾರಿಗೆ ವಿಜಯ್ ರಾಘವೇಂದ್ರ ಮಾತನಾಡಿಸಿದಾಗ ನನಗೆ ಭಯವಾಗಿತ್ತು. ಯಾರಾದರೂ ನಾವು ಮಾತನಾಡುವುದನ್ನು ನೋಡಿ ನಮ್ಮ ಅಪ್ಪನಿಗೆ ಹೇಳಿಬಿಡುತ್ತಾರೆ ಎಂದಿದ್ದರು. ನಮಗೆ ಸಿನಿಮಾ ಕ್ರೇಜ್ ಇರಲಿಲ್ಲ. ಹಾಗಾಗಿ ವಿಜಯ್ ರಾಘವೇಂದ್ರ ಮಾತನಾಡಿಸಿದಾಗ ಏನು ಅನ್ನಿಸಲಿಲ್ಲ. ಅಪ್ಪ ಅಂದರೆ ಭಯ ಎನ್ನುವುದಕ್ಕಿಂತ ಗೌರವ ಹೆಚ್ಚಾಗಿತ್ತು. ನನ್ನ ಜೊತೆ ತಂದೆ ಸ್ಟ್ರಿಕ್ಟ್ ಆಗಿ ಇರುತ್ತಿರಲಿಲ್ಲ ಎಂದು ಹೇಳಿದ್ದರು.

ಬೆಂಗಳೂರಿನ ಸ್ಟೆಲಾ ಮೇರಿಸ್ ಎಕ್ಸ್ಟ್ರೀಮ್ ಶಾಲೆಯಲ್ಲಿ ಓದಿದ ಸ್ಪಂದನಾ ನಂತರ ಕೇರಳದ ಎಂಇಎಸ್ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡಿದ್ದರು. ತಮ್ಮದೇ ಬ್ಯಾನರ್‌ನಲ್ಲಿ 'ಕಿಸ್ಮತ್' ಸಿನಿಮಾ ನಿರ್ಮಿಸಿದ್ದರು. 'ಅಪೂರ್ವ' ಚಿತ್ರದ ಪುಟ್ಟ ಪಾತ್ರದಲ್ಲಿ ಸ್ಪಂದನಾ ನಟಿಸಿದ್ದರು.

More from Filmibeat

English summary
Vijay Raghavendra wife Spandana childwood, Family members.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X