Spandana Vijay Death: ಸ್ಪಂದನಾ ವಿಜಯ ರಾಘವೇಂದ್ರ ಅಂತ್ಯಕ್ರಿಯೆ ಎಲ್ಲಿ, ಯಾವಾಗ, ಹೇಗೆ?
ಹೃದಯಾಘಾತದಿಂದ ನಿಧನರಾದ ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಅಂತ್ಯಕ್ರಿಯೆಗೆ ಸಿದ್ಧತೆ ನಡೀತಿದೆ. ಈಗಾಗಲೇ ಮಲ್ಲೇಶ್ವರಂನಲ್ಲಿರುವ ಸ್ಪಂದನಾ ತಂದೆ ಬಿ. ಕೆ ಶಿವರಾಂ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಆಗಿದೆ. ಅಭಿಮಾನಿಗಳು, ಚಿತ್ರರಂಗದ ಗಣ್ಯರು, ಆಪ್ತರು ಆಗಮಿಸಿ ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಮಧ್ಯಾಹ್ನ ಶ್ರೀರಾಂಪುರದ ಹರಿಶ್ಚಂದ್ರ ಘಾಟ್‌ನಲ್ಲಿ ಅಂತ್ಯಕ್ರಿಯೆ ನಡೆಸಲು ತೀರ್ಮಾನಿಸಲಾಗಿದೆ.
ಇಂದು (ಆಗಸ್ಟ್ 9)ಮಧ್ಯಾಹ್ನ 12:30ರಿಂದ 1:30ರ ವರೆಗೆ ರಾಹುಕಾಲ ಇರುವ ಹಿನ್ನೆಲೆಯಲ್ಲಿ ಆ ನಂತರ ಅಂತ್ಯಕ್ರಿಯೆ ವಿಧಿ ವಿಧಾನ ಆರಂಭವಾಗಲಿದೆ. 2 ಗಂಟೆ ಬಳಿಕ ಮನೆಯ ಬಳಿ ಕುಟುಂಬಸ್ಥರಿಂದ ಪೂಜಾ ಕಾರ್ಯಗಳು ನೆರವೇರಲಿದೆ. ಎರಡು ಗಂಟೆ ವೇಳೆಗೆ ಹರಿಶ್ಚಂದ್ರ ಘಾಟ್‌ನತ್ತ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಗುತ್ತದೆ. ಮಲ್ಲೇಶ್ವರಂ ಬಿಜೆಪಿ ಕಛೇರಿ, ಕೆಸಿ ಜನರಲ್ ಆಸ್ಪತ್ರೆ ಮಾರ್ಗವಾಗಿ ಹರಿಶ್ಚಂದ್ರ ಘಾಟ್‌ಗೆ ಅಂತಿಮ ಯಾತ್ರೆ . ಇನ್ನು ಸ್ಪಂದನಾ ವಿಜಯ್ ರಾಘವೇಂದ್ರ ಅಂತ್ಯಕ್ರಿಯೆ ಬಗ್ಗೆ ಚಿಕ್ಕಪ್ಪ ಬಿ. ಕೆ ಹರಿಪ್ರಸಾದ್ ಮಾಹಿತಿ ನೀಡಿದ್ದಾರೆ.

"ಹರಿಶ್ಚಂದ್ರ ಘಾಟ್‌ನಲ್ಲಿ 2.30ರಿಂದ 3.30ರ ಒಳಗೆ ಅಂತ್ಯಕ್ರಿಯೆ ಮಾಡಲು ತೀರ್ಮಾನ ಮಾಡಿದ್ದೇವೆ. 2 ಗಂಟೆವರೆಗೂ ಎಲ್ಲರಿಗೂ ಅಂತಿಮ ದರ್ಶನಕ್ಕೆ ಅವಕಾಶ ಇರುತ್ತದೆ. ನಂತರ ಅಂತಿಮ ಯಾತ್ರೆ ಶುರುವಾಗಲಿದೆ. ಆ ನಂತರ ಇಲ್ಲಿಂದ ಅಂತ್ಯ ಕ್ರಿಯೆ ವಿಧಿ ವಿಧಾನ ಶುರುವಾಗುತ್ತದೆ. ಸ್ಪಂದನಾ ಅಂತ್ಯಕ್ರಿಯೆ ಬಗ್ಗೆ ಹಲವಾರು ಗೊಂದಲದ ಮಾತುಗಳು ಶುರುವಾಗಿತ್ತು. ಅದನ್ನು ಸ್ಪಷ್ಟ ಪಡಿಸಲು ಇಷ್ಟ ಪಡುತ್ತೇನೆ" ಎಂದಿದ್ದಾರೆ.
ಶ್ರೀರಾಂಪುರದ ಹರಿಶ್ಚಂದ್ರ ಘಾಟ್‌ನ ಚಿತಾಗಾರದಲ್ಲಿ ಸ್ಪಂದನಾ ಅಂತ್ಯಕ್ರಿಯೆ ನಡೆಸಲು ಚಿನ್ನೇಗೌಡ್ರು ಹಾಗೂ ಬಿ.ಕೆ ಶಿವರಾಂ ಕುಟುಂಬಸ್ಥರು ತೀರ್ಮಾನಿಸಿದ್ದಾರೆ. ಈಡಿಗ ಸಮುದಾಯದ ಸಂಪ್ರದಾಯದಂತೆ ಅಂತ್ಯಕ್ರಿಯೆಯ ವಿಧಿ ವಿಧಾನಗಳು ನಡೆಯಲಿವೆ ಎನ್ನುವ ಮಾಹಿತಿ ಲಭ್ಯವಾಗುತ್ತಿದೆ. ಮಧ್ಯರಾತ್ರಿಯಿಂದಲೇ ಆಪ್ತರು, ಅಭಿಮಾನಿಗಳು ಸ್ಪಂದನಾ ಪಾರ್ಥೀವ ಶರೀರದ ದರ್ಶನಕ್ಕೆ ಆಗಮಿಸಿದ್ದರು. ಪ್ರತ್ಯೇಕ ಬ್ಯಾರಿಕೇಡ್ ಹಾಕಿ ಸಾರ್ವಜನಿಕರ ದರ್ಶನಕ್ಕೂ ವ್ಯವಸ್ಥೆ ಮಾಡಲಾಗಿದೆ.
ಮಡದಿಯನ್ನು ಕಳೆದು ಕಳೆದುಕೊಂಡು ವಿಜಯ್ ರಾಘವೇಂದ್ರ ಕುಗ್ಗಿ ಹೋಗಿದ್ದು ಆಪ್ತರು ಸಾಂತ್ವನ ಹೇಳುತ್ತಿದ್ದಾರೆ. ಸ್ಪಂದನಾ ಪಾರ್ಥಿವ ಶರೀರದ ಮುಂದೆ ವಿಜಯ್ ಕಣ್ಣೀರಾಗಿದ್ದಾರೆ. ಎರಡು ಕುಟುಂಬ ಸದಸ್ಯರು ಶೋಕಸಾಗರದಲ್ಲಿ ಮುಳುಗಿದ್ದಾರೆ. ನಿನ್ನೆ (ಆಗಸ್ಟ್ 8) ರಾತ್ರಿ 11:30ರ ಸುಮಾರಿಗೆ ಸ್ಪಂದನಾ ಪಾರ್ಥೀವ ಶರೀರದ ಜೊತೆ ವಿಜಯ ರಾಘವೇಂದ್ರ ಬೆಂಗಳೂರು ವಿಮಾನ ನಿಲ್ದಾಣಕ್ಕೆ ತಂದರು. ಅಲ್ಲಿಂದ ಆಂಬ್ಯುಲೆನ್ಸ್‌ನಲ್ಲಿ ನೇರವಾಗಿ ಮಲ್ಲೇಶ್ವರಂನ ಬಿ. ಶಿ ಶಿವರಾಂ ಮನೆಗೆ ತಂದು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು.

ಕಣ್ಣೀರಲ್ಲೇ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಪಾರ್ಥೀವ ಶರೀರಕ್ಕೆ ಪೂಜೆ ಸಲ್ಲಿಸಿದರು. ಅಂತಿಮ ದರ್ಶನಕ್ಕೆ ಕೊನೆಕ್ಷಣದ ಸಿದ್ಧತೆ ಮಾಡಿದರು. ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ನಟಿ ಸುಧಾರಾಣಿ, ಹಿರಿಯ ನಟ ಶ್ರೀನಾಥ್, ರಾಜಕೀಯ ಮುಖಂಡರಾದ ಕುಮಾರ್ ಬಂಗಾರಪ್ಪ, ಯುಟಿ ಖಾದರ್, ಸುನಿಲ್ ಕುಮಾರ್ ಸೇರಿದಂತೆ ಹಲವು ಗಣ್ಯರು ಸ್ಪಂದನಾ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ್ದಾರೆ.
ನಿವೃತ್ತ ಪೊಲೀಸ್ ಅಧಿಕಾರಿ ಬಿ. ಕೆ ಶಿವರಾಂ ಪುತ್ರಿ ಸ್ಪಂದನಾರನ್ನು ವಿಜಯ್ ರಾಘವೇಂದ್ರ ಪ್ರೀತಿಸಿ ಮದುವೆ ಆಗಿದ್ದರು. ದಂಪತಿಗೆ ಒಬ್ಬ ಮಗ ಕೂಡ ಇದ್ದಾನೆ. ಕಳೆದ ವಾರ ಕಸೀನ್ಸ್ ಹಾಗೂ ಸ್ನೇಹಿತರ ಜೊತೆ ಸ್ಪಂದನಾ ಬ್ಯಾಂಕಾಕ್ ಪ್ರವಾಸಕ್ಕೆ ಸ್ಪಂದನಾ ತೆರಳಿದ್ದರು. ಪ್ರವಾಸದ ವೇಳೆ ಹೃದಯಾಘಾತದಿಂದ ವಿಜಯ್ ರಾಘವೇಂದ್ರ ಪತ್ನಿ ನಿಧನರಾಗಿದ್ದರು.


Click it and Unblock the Notifications











