ಹೊಸ ವರ್ಷಕ್ಕೆ ದಳಪತಿ ವಿಜಯ್ ಅಭಿಮಾನಿಗಳಿಗೆ ಕಾದಿದೆ ಬಿಗ್ ಸರ್ಪ್ರೈಸ್

ತಮಿಳು ನಟ ವಿಜಯ್ ದಳಪತಿ ಸದ್ಯ ಮಾಸ್ಟರ್ ಸಿನಿಮಾದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಅಂದುಕೊಂಡಂತೆ ಆಗಿದ್ದರೆ ಈ ಸಿನಿಮಾ ಈಗಾಗಲೇ ರಿಲೀಸ್ ಆಗಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಸಿನಿಮಾ ರಿಲೀಸ್ ಮುಂದಕ್ಕೆ ಹೋಗಿದ್ದು, ಮುಂದಿನ ವರ್ಷ ಪ್ರಾರಂಭದಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

ಈ ರಿಲೀಸ್ ಗೂ ಮೊದಲೇ ಇದೀಗ ವಿಜಯ್ 65ನೇ ಸಿನಿಮಾದ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ವಿಜಯ್ ಮುಂದಿನ ಸಿನಿಮಾವನ್ನು ನಿರ್ದೇಶಕ ಎಆರ್ ಮುರುಗದಾಸ್ ಆಕ್ಷನ್ ಕಟ್ ಹೇಳುತ್ತಾರೆ ಎನ್ನುವ ಸುದ್ದಿ ಕೇಳಿ ಬರುತ್ತಿತ್ತು. ಆದರೆ ಮುರುಗದಾಸ್ ಕಾರಣಾಂತರಗಳಿಂದ ಹಿಂದೆ ಸರಿದಿದ್ದಾರೆ.

ಇದೀಗ ದಳಪತಿ 65ನೇ ಸಿನಿಮಾ ನಿರ್ದೇಶನ ಮಾಡುವ ಜವಾಬ್ದಾರಿಯನ್ನು ಕೋಲಮಾವು ಕೋಕಿಲಾ ಖ್ಯಾತಿಯ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ವಹಿಸಿಕೊಂಡಿದ್ದಾರೆ. ಈಗಾಗಲೇ ಸಿನಿಮಾದ ಪ್ರಿ ಪ್ರೊಡಕ್ಷನ್ ಕೆಲಸ ಪ್ರಾರಂಭವಾಗಿದ್ದು, ಸಿನಿಮಾತಂಡ ಟೈಟಲ್ ಬಿಡುಗಡೆ ಮಾಡಲು ಸಜ್ಜಾಗಿದೆಯಂತೆ.

Vijays Thalapathy 65 movie title to be revealed on New years Eve

ಹೌದು, ವಿಜಯ್ 65ನೇ ಸಿನಿಮಾದ ಟೈಟಲ್ ಹೊಸ ವರ್ಷಕ್ಕೆ ರಿಲೀಸ್ ಆಗುತ್ತಿದೆ. ಹೊಸ ವರ್ಷದ ಮುನ್ನಾ ದಿನ ವಿಜಯ್ 65ನೇ ಸಿನಿಮಾದ ಶೀರ್ಷಿಕೆ ಬಹಿರಂಗ ಪಡಿಸಲು ಸಿನಿಮಾತಂಡ ಈಗಾಗಲೇ ಎಲ್ಲಾ ತಯಾರಿಗಳನ್ನು ಮಾಡಿಕೊಂಡಿದೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಹೊಸ ವರ್ಷಕ್ಕೆ ವಿಜಯ್ ಹೊಸ ಸಿನಿಮಾ ಅನೌನ್ಸ್ ಆಗುತ್ತೆ ಎನ್ನುವ ಸುದ್ದಿ ಅಭಿಮಾನಿಗಳು ಉಸಿರು ಬಿಗಿ ಹಿಡಿದು ಕಾಯುತ್ತಿದ್ದಾರೆ.

ಅಂದಹಾಗೆ ಈಗಾಗಲೇ ದಳಪತಿ-65 ಸಿನಿಮಾದ ಟೈಟಲ್ ವೈರಲ್ ಆಗುತ್ತಿದೆ. ಚಿತ್ರಕ್ಕೆ ಟಾರ್ಗೆಟ್ ರಾಜ ಎಂದು ಶೀರ್ಷಿಕೆ ಇಡಲಾಗಿದೆ ಎನ್ನುವ ಮಾತುಗಳು ಕಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಆದರೆ ಇದು ನಿಜನಾ ಎನ್ನುವುದು ಈ ವರ್ಷದ ಕೊನೆಯಲ್ಲಿ ಗೊತ್ತಾಗಲಿದೆ.

ಚಿತ್ರದಲ್ಲಿ ವಿಜಯ್ ಗೆ ನಾಯಕಿಯಾಗಿ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳಲಿದ್ದಾರೆ, ಖಳನಟನ ಪಾತ್ರದಲ್ಲಿ ಜಾನ್ ಅಬ್ರಹಾಂ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ವಿಜಯ್ 65ನೇ ಸಿನಿಮಾವನ್ನು ಸನ್ ಪಿಕ್ಟರ್ಸ್ ನಿರ್ಮಾಣ ಮಾಡುತ್ತಿದೆ. ಹೊಸ ವರ್ಷಕ್ಕೆ ಅನೌನ್ಸ್ ಆಗುತ್ತಿರುವ ವಿಜಯ್ ಸಿನಿಮಾದ ಟೈಟಲ್ ಏನಾಗಿರಲಿದೆ ಎನ್ನುವುದು ಸದ್ಯದ ಕುತೂಹಲ.

More from Filmibeat

English summary
Tamil Actor Vijay's 'Thalapathy 65' movie title to be revealed on New year's Eve.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X