ಶಾರೂಖ್ ಖಾನ್ ಕಾಮೆಂಟ್ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ ವಿಜಯ್ ಸೇತುಪತಿ

ಭಾಷೆಯ ಗಡಿಯಾಚೆಯೂ ಬೆಳೆದು ನಿಂತ ಕೆಲವೇ ಕೆಲವು ನಟರಲ್ಲಿ ತಮಿಳು ನಟ ವಿಜಯ್ ಸೇತುಪತಿ ಕೂಡ ಒಬ್ಬರು. ಎಲ್ಲ ಭಾಷೆಯ ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿರುವ ಸೇತುಪತಿ ಬಗ್ಗೆ ಬಾಲಿವುಡ್ ಬಾದ್ ಶಾ ಈ ಹಿಂದೆ ಒಂದು ಹೇಳಿಕೆ ನೀಡಿದ್ದರು.

Recommended Video

'ರಾಕಿಂಗ್ ಸ್ಟಾರ್'ಗೆ ಸಿದ್ಧವಾಗಿದ್ದ ಚಿತ್ರಕ್ಕೆ ವಿಜಯ್ ದೇವರಕೊಂಡ ಹೀರೋ.! | Vijay Deverakonda

ಈ ಕಾಮೆಂಟ್ ಬಗ್ಗೆ ಈಗ ವಿಜಯ್ ಸೇತುಪತಿ ಪ್ರತಿಕ್ರಿಯಿಸಿದ್ದಾರೆ. ಚಿರಂಜೀವಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ 'ಸೈರಾ ನರಸಿಂಹ ರೆಡ್ಡಿ' ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಕ್ಕಳ್ ಸೆಲ್ವನ್ ಸೇತುಪತಿ, ಶಾರೂಖ್ ಮಾತಿಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಅಷ್ಟಕ್ಕೂ, ವಿಜಯ್ ಸೇತುಪತಿ ಬಗ್ಗೆ ಶಾರೂಖ್ ಏನು ಹೇಳಿದ್ದರು. ಅದಕ್ಕೆ ವಿಜಯ್ ಏನಂದ್ರು ಎಂಬುದನ್ನ ತಿಳಿಯಲು ಮುಂದೆ ಓದಿ....

ಶಾರೂಖ್ ಏನು ಹೇಳಿದ್ದರು

ಶಾರೂಖ್ ಏನು ಹೇಳಿದ್ದರು

ಮೆಲ್ಬೋರ್ನ್ನಲ್ಲಿ ನಡೆದ ಭಾರತೀಯ ಚಲನಚಿತ್ರೋತ್ಸವದಲ್ಲಿ ಭಾಗಿಯಾಗಿದ್ದ ಶಾರೂಖ್ ಖಾನ್, ವಿಜಯ್ ಸೇತುಪತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸೂಪರ್ ಡಿಲೆಕ್ಸ್ ಚಿತ್ರದ ನಟನೆ ಬಗ್ಗೆ ಕಾಮೆಂಟ್ ಮಾಡಿದ್ದ ಶಾರೂಖ್ ''ನನ್ನ ಜೀವನದಲ್ಲಿ ನಾನು ಕಂಡ ವಂಡರ್ ಫುಲ್ ಆಕ್ಟರ್ ಸೇತುಪತಿ'' ಎಂದಿದ್ದರು.

ಸೇತುಪತಿ ಏನು ಪ್ರತಿಕ್ರಿಯಿಸಿದರು

ಸೇತುಪತಿ ಏನು ಪ್ರತಿಕ್ರಿಯಿಸಿದರು

ಶಾರೂಖ್ ಖಾನ್ ಮೆಚ್ಚುಗೆ ಬಗ್ಗೆ ಪ್ರತಿಕ್ರಿಯೆ ನೀಡಿದ ವಿಜಯ್ ಸೇತುಪತಿ ''ಅವರು ಬೈ ಮಿಸ್ ಆಗಿ ಹೇಳಿರಬೇಕು (ನಕ್ಕರು). ತುಂಬಾ ಖುಷಿ ಆಯ್ತು. ನಾನು ಇದನ್ನ ನಿರೀಕ್ಷೆ ಮಾಡಿರಲಿಲ್ಲ. ನನ್ನ ಬಗ್ಗೆ ಅವರಿಗೆ ಗೊತ್ತಿರಬಹುದು ಎಂದು ಕೂಡ ನನಗೆ ಗೊತ್ತೆ ಆಗಲಿಲ್ಲ. ಇದ್ದಕಿದ್ದಂತೆ ನನ್ನ ಬಗ್ಗೆ ಅವರು ಹೇಳಿದ್ದನ್ನ ಕಂಡು ಅಚ್ಚರಿ ಆಯ್ತು'' ಎಂದು ಸಂತಸ ಹಂಚಿಕೊಂಡಿದ್ದಾರೆ.

ಅಮೀರ್ ಚಿತ್ರದಲ್ಲಿ ಸೇತುಪತಿ.!

ಅಮೀರ್ ಚಿತ್ರದಲ್ಲಿ ಸೇತುಪತಿ.!

ತಮಿಳು ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಆಗಿರುವ ವಿಜಯ್ ಸೇತುಪತಿ ಬಾಲಿವುಡ್ ಪ್ರವೇಶ ಮಾಡಲಿದ್ದಾರೆ ಎಂಬ ಸುದ್ದಿ ಇದೆ. ಅಮೀರ್ ಖಾನ್ ನಟಿಸುತ್ತಿರುವ ಲಾಲ್ ಸಿಂಗ್ ಚಡ್ಡ ಚಿತ್ರದಲ್ಲಿ ಸ್ನೇಹಿತನ ಪಾತ್ರಕ್ಕೆ ಅವಕಾಶ ಬಂದಿದೆಯಂತೆ. ಈ ಪ್ರಾಜೆಕ್ಟ್ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗ್ತಿದೆ.

ಅತ್ಯುತ್ತಮ ನಟ ಪ್ರಶಸ್ತಿ

ಅತ್ಯುತ್ತಮ ನಟ ಪ್ರಶಸ್ತಿ

ಮೆಲ್ಬೋರ್ನ್ನಲ್ಲಿ ನಡೆದ ಚಿತ್ರೋತ್ಸವದಲ್ಲಿ ಸೂಪರ್ ಡಿಲೆಕ್ಸ್ ಚಿತ್ರದ ಅಭಿನಯಕ್ಕಾಗಿ ವಿಜಯ್ ಸೇತುಪತಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದರು.

More from Filmibeat

English summary
Tamil actor vijay sethupathi react about shahrukh khan statement. Shahrukh praised to sethupathi in melbourne.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X