ಕಣ್ಣೀರು ಹಾಕಿದ್ದ ವಿಜಯಲಕ್ಷ್ಮಿಗೆ ಕಡೆಗೂ ಸಿಕ್ಕಿತು ಸಿನಿಮಾ ಅವಕಾಶ!
Recommended Video

'ಸೂರ್ಯವಂಶ', 'ನಾಗಮಂಡಲ' ರೀತಿಯ ಸೂಪರ್ ಹಿಟ್ ಸಿನಿಮಾಗಳಲ್ಲಿ ನಾಯಕಿ ಆಗಿದ್ದ ವಿಜಯಲಕ್ಷ್ಮಿ ಅವರಿಗೆ ಇತ್ತೀಚಿಗೆ ಯಾವುದೇ ಅವಕಾಶಗಳು ಇರಲಿಲ್ಲ. ಇದರಿಂದ ನೊಂದು ಹೋಗಿದ್ದ ಅವರು ಕೆಲ ದಿನಗಳ ಹಿಂದೆ ಸುದ್ದಿವಾಹಿನಿಯಲ್ಲಿ ಕೂತು ತಮ್ಮ ನೋವನ್ನು ಹೇಳಿಕೊಂಡಿದ್ದರು.
ವಿಜಯಲಕ್ಷ್ಮಿ ಅವರ ಪರಿಸ್ಥಿತಿ ನೋಡಿದವರು ಪಾಪ ಹೀಗಾಗಬಾರದಿತ್ತು ಎಂದಿದ್ದರು. ಕೆಲವರು ಸಿನಿಮಾ ಅವಕಾಶ ನೀಡುವ ಭರವಸೆ ನೀಡಿದ್ದರು. ಈಗ ವಿಜಯಲಕ್ಷ್ಮಿ ಅವರಿಗೆ ಒಂದು ಸಿನಿಮಾ ಅವಕಾಶ ಹುಡುಕಿಕೊಂಡು ಬಂದಿದೆ. ಮತ್ತೆ ವಿಜಯಲಕ್ಷ್ಮಿ ತೆರೆ ಮೇಲೆ ಕಾಣಿಸಿಕೊಳ್ಳುವ ಶುಭ ಸಮಯ ಒದಗಿದೆ.
ಅಂದಹಾಗೆ, ವಿಜಯಲಕ್ಷ್ಮಿ ನಟಿಸುತ್ತಿರುವ ಹೊಸ ಸಿನಿಮಾದ ವಿವರ ಮುಂದಿದೆ ಓದಿ..

'ಫೈಟರ್' ಸಿನಿಮಾದಲ್ಲಿ ನಟಿಸುವ ಅವಕಾಶ
ನಟ ವಿನೋದ್ ಪ್ರಭಾಕರ್ ನಟನೆಯ 'ಫೈಟರ್' ಸಿನಿಮಾದ ಮುಹೂರ್ತ ಇತ್ತೀಚಿಗಷ್ಟೆ ಅದ್ದೂರಿಯಾಗಿ ನಡೆದಿತ್ತು. ಇದೀಗ ಈ ಚಿತ್ರತಂಡವನ್ನು ವಿಜಯಲಕ್ಷ್ಮಿ ಸೇರಿಕೊಂಡಿದ್ದಾರೆ. ಈ ಚಿತ್ರದಲ್ಲಿ ವಿಜಯಲಕ್ಷ್ಮಿ ಕಾಣಿಸಿಕೊಳ್ಳುವುದರ ಮೂಲಕ ಮತ್ತೆ ಅವರು ಹೊಸದಾಗಿ ತಮ್ಮ ಸಿನಿ ಕೆರಿಯರ್ ಶುರು ಮಾಡುತ್ತಿದ್ದಾರೆ.

ತಾಯಿ ಹಾಗೂ ಜಿಲ್ಲಾಧಿಕಾರಿ ಪಾತ್ರ
'ಫೈಟರ್' ಸಿನಿಮಾದಲ್ಲಿ ವಿಜಯಲಕ್ಷ್ಮಿ ಎರಡು ರೋಲ್ ಗಳನ್ನು ನಿಭಾಯಿಸುತ್ತಿದ್ದಾರೆ. ನಟ ವಿನೋದ್ ಪ್ರಭಾಕರ್ ಅವರ ತಾಯಿಯ ಪಾತ್ರದಲ್ಲಿ ವಿಜಯಲಕ್ಷ್ಮಿ ನಟಿಸುತ್ತಿದ್ದು, ಚಿತ್ರದಲ್ಲಿ ಅವರು ಒಬ್ಬ ಜಿಲ್ಲಾಧಿಕಾರಿ ಕೂಡ ಆಗಿರುತ್ತಾರಂತೆ. ಈ ಒಂದೇ ಚಿತ್ರದಲ್ಲಿ ಎರಡು ಶೇಡ್ ಗಳಲ್ಲಿ ಅವರು ನಟಿಸುತ್ತಿದ್ದಾರೆ.

ಆಗಸ್ಟ್ 6 ರಿಂದ ಶೂಟಿಂಗ್
ಚಿತ್ರದ ಪಾತ್ರ ಹಾಗೂ ಕಥೆ ಕೇಳಿ ಇಷ್ಟ ಪಟ್ಟಿರುವ ವಿಜಯಲಕ್ಷ್ಮಿ ತುಂಬ ಸಂತಸದಲ್ಲಿ ಇದ್ದಾರೆ. ಅವರ ಭಾಗದ ಚಿತ್ರೀಕರಣ ಆಗಸ್ಟ್ 6 ರಿಂದ ಪ್ರಾರಂಭ ಆಗಲಿದೆ. ಬೆಂಗಳೂರು ಮತ್ತು ಉತ್ತರ ಕರ್ನಾಟಕ ದಲ್ಲಿ ಚಿತ್ರೀಕರಣ ನಡೆಯಲಿದೆ. ಇದೇ ಮೊದಲ ಬಾರಿಗೆ ವಿನೋದ್ ಪ್ರಭಾಕರ್ ಜೊತೆಗೆ ವಿಜಯಲಕ್ಷ್ಮಿ ನಟಿಸುತ್ತಿದ್ದಾರೆ.

ನೂತನ್ ಉಮೇಶ್ ನಿರ್ದೇಶನ
ಉಳಿದಂತೆ, 'ಫೈಟರ್' ಸಿನಿಮಾವನ್ನು ಸೋಮಶೇಖರ್ ನಿರ್ಮಾಣ ಮಾಡಿದ್ದಾರೆ. ಈ ಹಿಂದೆ 'ಕೃಷ್ಣನ್ ಮ್ಯಾರೇಜ್ ಸ್ಟೋರಿ' ಹಾಗೂ 'ಅಸ್ತಿತ್ವ' ಚಿತ್ರವನ್ನು ನೂತನ್ ಉಮೇಶ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ರಾಕೇಶ್ ಛಾಯಾಗ್ರಹಣ ಚಿತ್ರಕ್ಕಿದೆ.

ಭರವಸೆ ನೀಡಿದ್ದ ನಿರ್ಮಾಪಕ
'ಎಕ್ಸ್ ಕ್ಯೂಸ್ ಮಿ', 'ಅದ್ವೈತ', 'ಚಪ್ಪಾಳೆ', 'ತನನಂ ತನನಂ', 'ಚೆಲುವೆಯೇ ನಿನ್ನ ನೋಡಲು' ಸೇರಿದಂತೆ ಹಲವು ಚಿತ್ರಗಳನ್ನು ನಿರ್ಮಾಣ ಮಾಡಿದ್ದ ಎನ್.ಎಂ.ಸುರೇಶ್ ತಮ್ಮ 'ಕುಂಭ ಮೇಳ' ಎಂಬ ಹೊಸ ಚಿತ್ರದಲ್ಲಿ ವಿಜಯಲಕ್ಷ್ಮಿ ಅವರಿಗೆ ಒಂದು ಅವಕಾಶ ನೀಡುತ್ತೇನೆ ಎನ್ನುವ ಭರವಸೆ ನೀಡಿದ್ದರು.


Click it and Unblock the Notifications











