twitter
    For Quick Alerts
    ALLOW NOTIFICATIONS  
    For Daily Alerts

    ಮಹಿಳೆಯರ ಮೇಲೆ ದೌರ್ಜನ್ಯ: ಟ್ವಿಟ್ಟರ್‌ನಲ್ಲಿ ಕಹಿ ಸತ್ಯ ಹಂಚಿಕೊಂಡ ದರ್ಶನ್ ಪತ್ನಿ ವಿಜಯಲಕ್ಷ್ಮಿ

    By ಫಿಲ್ಮೀಬೀಟ್ ಡೆಸ್ಕ್‌
    |

    ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ನವೋದ್ಯಮಿ ಆಗಿ ಗುರುತಿಸಿಕೊಂಡಿದ್ದಾರೆ. ಹೊಸ ಉದ್ಯಮ ಸ್ಥಾಪಿಸಿರುವ ಅವರು ಸಾಮಾಜಿಕ ಜಾಲತಾಣದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಸಕ್ರಿಯವಾಗಿದ್ದಾರೆ.

    ತಮ್ಮ ಹೊಸ ಉದ್ಯಮದ ಬಗ್ಗೆ ಪೋಸ್ಟ್‌ಗಳನ್ನು ಹಾಕುವ ವಿಜಯಲಕ್ಷ್ಮಿ ಸಿನಿಮಾ ಉದ್ಯಮದ ವಿಷಯಗಳು, ಗೆಳೆಯ-ಗೆಳತಿಯರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರುವುದು ಮಾಡುತ್ತಿರುತ್ತಾರೆ. ಜೊತೆಗೆ ಸಾಮಾಜಿಕ ವಿಷಯಗಳ ಬಗ್ಗೆಯೂ ಆಗಾಗ್ಗೆ ಪೋಸ್ಟ್ ಹಾಕುತ್ತಿರುತ್ತಾರೆ ವಿಜಯಲಕ್ಷ್ಮಿ.

    ನವರಾತ್ರಿಯ ಮೊದಲ ದಿನವಾದ ಇಂದು ವಿಜಯಲಕ್ಷ್ಮಿ ಅವರು ಮಾಡಿರುವ ಟ್ವೀಟ್ ಗಮನ ಸೆಳೆಯುತ್ತಿದೆ. ಭಾರತದಲ್ಲಿ ಮಹಿಳೆಯರ ವಾಸ್ತವ ಸ್ಥಿತಿ ಹಾಗೂ ತೋರಿಕೆಯ ನಡುವಿನ ವ್ಯತ್ಯಾಸವನ್ನು ಅವರ ಮಾಡಿರುವ ಟ್ವೀಟ್ ತೆರೆದಿಡುತ್ತಿದೆ.

    ಗಾಯಗೊಂಡಿರುವ ಲಕ್ಷ್ಮಿ ಚಿತ್ರ ಹಂಚಿಕೊಂಡಿರುವ ವಿಜಯಲಕ್ಷ್ಮಿ

    ಗಾಯಗೊಂಡಿರುವ ಲಕ್ಷ್ಮಿ ಚಿತ್ರ ಹಂಚಿಕೊಂಡಿರುವ ವಿಜಯಲಕ್ಷ್ಮಿ

    ದೇವತೆ ಲಕ್ಷ್ಮಿಯು ಗಾಯಾಳುವಾಗಿರುವ ಚಿತ್ರವನ್ನು ವಿಜಯಲಕ್ಷ್ಮಿ ಹಂಚಿಕೊಂಡಿದ್ದಾರೆ. ಚಿತ್ರದ ಮೇಲೆ 'ಮಹಿಳೆಯರ ಮೇಲೆ ದೌರ್ಜನ್ಯದ ಪ್ರಕರಣಗಳಲ್ಲಿ ಮೊದಲಲ್ಲಿರುವ ದೇಶದಲ್ಲಿ ಇನ್ನು ಒಂಬತ್ತು ದಿನಗಳ ಕಾಲ ಮಹಿಳೆಯನ್ನು ಪೂಜಿಸಲಾಗುತ್ತದೆ' ಎಂದು ಬರೆದಿದೆ.

    ಕಹಿ ಸತ್ಯ ಎಂದಿರುವ ವಿಜಯಲಕ್ಷ್ಮಿ

    ಕಹಿ ಸತ್ಯ ಎಂದಿರುವ ವಿಜಯಲಕ್ಷ್ಮಿ

    ಕಟು ಸತ್ಯದ ಪೋಸ್ಟ್ ಅನ್ನು ಹಂಚಿಕೊಂಡಿರುವ ವಿಜಯಲಕ್ಷ್ಮಿ 'ಕಹಿ ಸತ್ಯ' ಎಂದು ಬರೆದಿದ್ದಾರೆ. ವಿಜಯಲಕ್ಷ್ಮಿ ಅವರ ಈ ಪೋಸ್ಟ್‌ ಗೆ ಕಮೆಂಟ್ಸ್‌ ನಲ್ಲಿ ಸಾಕಷ್ಟು ಮಂದಿ ಸಮ್ಮತಿ ಸೂಚಿಸಿದ್ದಾರೆ. ಆದರೆ ಕೆಲವರು ಹಳೆಯ ವಿಷಯಗಳನ್ನು ಕೆದಕಿದ್ದಾರೆ.

    ಚಿತ್ರ ಬದಲಾಯಿಸಲು ಒತ್ತಾಯ

    ಚಿತ್ರ ಬದಲಾಯಿಸಲು ಒತ್ತಾಯ

    'ನೀವು ಹೇಳಿರುವ ವಿಷಯ ಸರಿ ಇರಬಹುದು ಆದರೆ ನೀವು ದೇವತೆ ಲಕ್ಷ್ಮಿ ಚಿತ್ರ ಬಳಸಿರುವುದು ತಪ್ಪು, ದೇವತೆ ಲಕ್ಷ್ಮಿ ಚಿತ್ರಕ್ಕೆ ಅವಮಾನ ಮಾಡಿದ್ದೀರಿ, ಕೂಡಲೇ ಲಕ್ಷ್ಮಿಯ ಚಿತ್ರವನ್ನು ತೆಗೆದು ಹಾಕಿ' ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.

    Recommended Video

    Aditi Prabhudeva | ಬದುಕಿದ್ರೆ ಚಿರು-ಮೇಘನಾ ತರ ಬದುಕ್ಬೇಕು | Chiranjeevi Sarja | Filmibeat Kannada
    ನೀವೇಕೆ ಸುಮ್ಮನಾದಿರಿ? ಪ್ರಶ್ನೆ

    ನೀವೇಕೆ ಸುಮ್ಮನಾದಿರಿ? ಪ್ರಶ್ನೆ

    ನೀವು ಸಹ ಗೃಹ ದೌರ್ಜನ್ಯಕ್ಕೆ ಒಳಗಾದವರೇ, ಈಗ ಪತಿಯೊಂದಿಗೆ ಒಟ್ಟಿಗೆ ಇದ್ದೀರಿ, ನೀವೇಕೆ ಸೂಕ್ತವಾದ ಕ್ರಮ ಕೈಗೊಳ್ಳಲಿಲ್ಲ? ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನುಳಿದಂತೆ ಕೆಲವು ಫ್ಯಾನ್ ಪೇಜ್‌ಗಳವರು ಜಗಳಕ್ಕೆ ಬಿದ್ದಿದ್ದಾರೆ.

    English summary
    Darshan's wife Vijayalakshmi conserned about crime against women in India. She shared a photo and said sad truth.
    Saturday, October 17, 2020, 16:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X