ಯಾರನ್ನು ಯಾರು ಕಾಪಿ ಮಾಡುತ್ತಿದ್ದಾರೆ? ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಮರ್ಮವೇನು?

By ಫಿಲ್ಮಿಬೀಟ್ ಡೆಸ್ಕ್

ಅಭಿಮಾನಿಗಳು ತಮ್ಮ ನೆಚ್ಚಿನ ನಟ-ನಟಿಯರ ಪ್ರತಿ ಕದಲಿಕೆ ಮೇಲೆ ಕಣ್ಣಿಟ್ಟಿರುತ್ತಾರೆ. ಸೋಶಿಯಲ್ ಮೀಡಿಯಾ ಜಮಾನ ಶುರುವಾದ ಮೇಲೆ ಸೆಲೆಬ್ರೆಟಿಗಳ ಪ್ರತಿ ಪೋಸ್ಟ್ ಅನ್ನು ಕೂಡ ಗಮನಿಸುತ್ತಾ ಇರುತ್ತಾರೆ. ಸದ್ಯ ವಿಜಯಲಕ್ಷ್ಮಿ ದರ್ಶನ್ ಇನ್‌ಸ್ಟಾ ಸ್ಟೋರಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಕಿರುತೆರೆ ನಿರೂಪಕಿಯಾಗಿದ್ದ ವಿಜಯಲಕ್ಷ್ಮಿ ಅವರನ್ನು ನಟ ದರ್ಶನ್ ಕೈ ಹಿಡಿದಿದ್ದರು. ಧರ್ಮಸ್ಥಳದಲ್ಲಿ ಮದುವೆ ನಡೆದಿತ್ತು. ವಿಜಯಲಕ್ಷ್ಮಿ ಅವರಿಗೆ ದೊಡ್ಡ ಅಭಿಮಾನಿ ಬಳಗವಿದೆ. ದರ್ಶನ್ ಅಭಿಮಾನಿಗಳು ಅತ್ತಿಗೆ ಅಂತ್ಲೇ ಕರೆಯುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ವೀವ್ ಆಗಿರುವು ವಿಜಯಲಕ್ಷ್ಮಿ ಆಗಿಂಗಾಗ್ಗೆ ಫೋಟೊ, ವಿಡಿಯೋ ಹಂಚಿಕೊಳ್ಳುತ್ತಿರುತ್ತಾರೆ. ಅದಕ್ಕೆ ಅಭಿಮಾನಿಗಳು ಲೈಕ್ಸ್, ಕಾಮೆಂಟ್ಸ್ ಮೂಲಕ ಮೆಚ್ಚುಗೆ ಸೂಚಿಸುತ್ತಿರುತ್ತಾರೆ.

Vijayalakshmi darshan drops a cryptic Post About winning

ಇತ್ತೀಚೆಗೆ ವಿಜಯಲಕ್ಷ್ಮಿ ದರ್ಶನ್ ದುಬೈ ಪ್ರವಾಸಕ್ಕೆ ಹೋಗಿದ್ದರು. ತಮ್ಮ ಪ್ರವಾಸದ ಒಂದಷ್ಟು ಫೋಟೊಗಳನ್ನು ಇನ್‌ಸ್ಟಾ ಸ್ಟೋರಿಯಲ್ಲಿ ಹಾಕಿಕೊಂಡಿದ್ದರು. ಅದರಲ್ಲೂ ದುಬೈನ ಬೊಹಾಕ್ಸ್ ರೆಸ್ಟೋರೆಂಟ್‌ನಲ್ಲಿ ಭಾರೀ ಗಾತ್ರದ ಕ್ರೋಸೆಂಟ್ ಹಾಗೂ ಬಕೆಟ್ ಸೈಜ್ ಕಪ್ ಕಾಫಿ ಸವಿದಿದ್ದರು. ಅದಕ್ಕೆ ಸಂಬಂಧಿಸಿದ ಫೋಟೊಗಳನ್ನು ಹಂಚಿಕೊಂಡಿದ್ದರು.

4 ಲೀಟರ್ ಕಪ್ ಕಾಫಿ, ದೊಡ್ಡ ಗಾತ್ರ ಕ್ರೋಸೆಂಟ್ ಫೋಟೊಗಳು ಸಖತ್ ವೈರಲ್ ಆಗಿತ್ತು. ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡಿದ್ದರು. ಒಂದು ಕಪ್ ಒಂದು ತಿಂಗಳಿಗೆ ಆಗುತ್ತದೆ ಎಂದು ಒಬ್ಬರು, ಬೈಟು ಮಾಡೋಣ ಮೇಡಂ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದರು. ನಮ್ಮ ಬಾಸ್‌ಗೂ ಕಾಫಿ ಉಳಿಸಿ ಎಂದು ಮತ್ತೊಬ್ಬರು ಬೇಡಿಕೆ ಇಟ್ಟಿರೆ, ಅಬ್ಬಾ ಈ ಕಪ್‌ ಕಾಫಿಯಲ್ಲೇ ಸ್ನಾನ ಮಾಡಬಹುದು ಎಂದು ಬರೆದುಕೊಂಡಿದ್ದರು.

ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಮಾಡುತ್ತಿದ್ದಂತೆ ಸಾಕಷ್ಟು ಜನ ಅದು ಯಾವ ರೆಸ್ಟೊರೆಂಟ್? ಎಂದು ಗೂಗಲ್ ಮಾಡಿ ತಡಕಾಡಿದ್ದರು. ಅಭಿಮಾನಿಗಳು ನಮ್ಮ ಬಾಸ್‌(ದರ್ಶನ್) ಹಾಗೂ ವಿನೀಶ್ ಕೂಡ ಒಟ್ಟಿಗೆ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಕಾಮೆಂಟ್ ಮಾಡಿದ್ದರು. ಸದ್ಯ ಇದೆಲ್ಲದರ ನಡುವೆ ವಿಜಯಲಕ್ಷ್ಮಿ ದರ್ಶನ್ ಹೊಸ ಇನ್‌ಸ್ಟಾ ಸ್ಟೋರಿ ಸಾಕಷ್ಟು ಕುತೂಹಲ ಮೂಡಿಸಿದೆ. ಆಕೆ ಯಾರ ಬಗ್ಗೆ ಈ ರೀತಿ ಪೋಸ್ಟ್ ಮಾಡಿದ್ದಾರೆ? ಕಾರಣ ಏನು? ಎಂದು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ.

Vijayalakshmi darshan drops a cryptic Post About winning

ಅಷ್ಟಕ್ಕೂ ಆ ಪೋಸ್ಟ್‌ನಲ್ಲಿ ಏನಿದೆ? ಎನ್ನುವುದನ್ನು ನೋಡುವುದಾದರೆ "ನಿಮ್ಮನ್ನು ಕಾಪಿ ಮಾಡುತ್ತಿದ್ದಾರೆ ಅಂದ್ರೆ ನೀವು ಗೆಲ್ಲುತ್ತಿದ್ದೀರಾ? ಎಂದು ಅರ್ಥ" ಎನ್ನುವ ಕೋಟ್‌ವೊಂದನ್ನು ಹಾಕಿಕೊಂಡಿದ್ದಾರೆ. ಅದಕ್ಕೆ ನಗುವ, ಫನ್ನಿ ಎನ್ನುವ ಅರ್ಥ ಬರುವಂತಹ ಎಮೋಜಿಗಳನ್ನು ಹಾಕಿದ್ದಾರೆ.

ವಿಜಯಲಕ್ಷ್ಮಿ ದರ್ಶನ್ ಇದ್ದಕ್ಕಿದ್ದಂತೆ ಈ ರೀತಿ ಕೋಟ್ ಹಾಕಿ ಯಾಕೆ ಪೋಸ್ಟ್ ಮಾಡಿದರು. ಏನು ಹೇಳಲು ಹೊರಟಿದ್ದಾರೆ? ಯಾರು ಯಾರನ್ನು ಈಗ ಕಾಪಿ ಮಾಡುತ್ತಿದ್ದಾರೆ? ಯಾರ ವಿರುದ್ಧ ಯಾರು ಗೆಲ್ಲುತ್ತಿದ್ದಾರೆ? ಅಂತ ತಲೆ ಕೆಡಿಸಿಕೊಂಡಿದ್ದಾರೆ. ಕೆಲವರು ಅಯ್ಯೋ ಸುಮ್ನೆ ಆ ರೀತಿ ಹಾಕಿರಬಹುದು. ತಮಾಷೆಯಾಗಿ ಬರೆದುಕೊಂಡಿರಬಹುದು ಎಂದು ಸುಮ್ಮನಾಗುತ್ತಿದ್ದಾರೆ. ಈ ಹಿಂದೆ ಕೂ ವಿಜಯಲಕ್ಷ್ಮಿ ಇದೇ ರೀತಿ ಕೋಟ್‌ಗಳ ಮೂಲಕ ತಮ್ಮ ಅಭಿಪ್ರಾಯವನ್ನು ಪರೋಕ್ಷವಾಗಿ ವ್ಯಕ್ತಪಡಿಸುವ ಪ್ರಯತ್ನ ಮಾಡಿದ್ದರು.

ಇನ್ನು ತರಕಾರಿ ಹಾಗೂ ಹಾಲನ್ನು ನೇರವಾಗಿ ರೈತನಿಂದ ಪಡೆದು ಗ್ರಾಹಕರ ಮನೆಗೆ ತಲುಪಿಸುವ 'ಮೈ ಫ್ರೆಶ್ ಬಾಸ್ಕೆಟ್ ಇನ್‌' ಹೆಸರಿನಲ್ಲಿ ಇ-ವ್ಯಾಪಾರವನ್ನು ವಿಜಯಲಕ್ಷ್ಮಿ ದರ್ಶನ್ ನಡೆಸುತ್ತಾ ಬರುತ್ತಿದ್ದಾರೆ.

More from Filmibeat

English summary
Vijayalakshmi darshan new cryptic instagram story goes viral;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X