"ಜೀವನ ಬಹಳ ಅದ್ಭುತವಾಗಿದೆ"; ಮಗ ವಿನೀಶ್ ಜೊತೆ ವಿಜಯಲಕ್ಷ್ಮಿ ದರ್ಶನ್ ಪ್ರವಾಸ ಕಲರ್‌ಫುಲ್

ಯಾವುದೇ ಚಿತ್ರದಲ್ಲಿ ನಟಿಸದೇ ಇದ್ದರೂ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸೆಲೆಬ್ರಿಟಿ ಸ್ಟೇಟಸ್ ಪಡೆದಿದ್ದಾರೆ. ದರ್ಶನ್ ಅಭಿಮಾನಿಗಳು ಅತ್ತಿಗೆ ಎಂದೇ ಆಕೆಯನ್ನು ಕರೆಯುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಆಕೆಯ ಪೋಸ್ಟ್‌ಗಳಿಗೆ ಸಕತ್ ಲೈಕ್ಸ್, ಕಾಮೆಂಟ್ಸ್ ಸಿಗುತ್ತದೆ.

ಇತ್ತೀಚೆಗೆ ವಿಜಯಲಕ್ಷ್ಮಿ ದರ್ಶನ್ ಸಾಕಷ್ಟು ಪ್ರವಾಸ ಕೈಗೊಳ್ಳುತ್ತಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಕೆಲ ದಿನಗಳ ಹಿಂದೆ ದುಬೈ ಪ್ರವಾಸದ ಫೋಟೊಗಳನ್ನು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ತೇಲಿ ಬಿಟ್ಟಿದ್ದರು. ದುಬೈನ ಬೊಹಾಕ್ಸ್ ರೆಸ್ಟೋರೆಂಟ್‌ಗೆ ಭೇಟಿ ನೀಡಿದ್ದ ವೇಳೆ ಭಾರೀ ಗಾತ್ರದ ಕ್ರೋಸೆಂಟ್ ಹಾಗೂ ಬಕೆಟ್ ಸೈಜ್ ಕಪ್ ಅಲ್ಲಿ ಕಾಫಿ ಸವಿದಿದ್ದರು. ಆ ಫೋಟೊಗಳು ಸಖತ್ ವೈರಲ್ ಆಗಿತ್ತು.

Vijayalakshmi Darshan enjoys a vaction with her son Vinish Thugudeepa

ಇದೀಗ ದುಬೈ ಪ್ರವಾಸದ ಮತ್ತಷ್ಟು ಫೋಟೊಗಳನ್ನು ವಿಜಯಲಕ್ಷ್ಮಿ ದರ್ಶನ್ ಹಂಚಿಕೊಂಡಿದ್ದಾರೆ. ಇನ್ನು ಫೋಟೊದಲ್ಲಿ ಪುತ್ರ ವಿನೀಶ್ ಕೂಡ ಇರುವುದನ್ನು ನೋಡಬಹುದು. ಸದ್ಯ ಅಭಿಮಾನಿಗಳು ಈ ಫೋಟೊಗಳನ್ನು ನೋಡಿ ಲೈಕ್ಸ್, ಕಾಮೆಂಟ್ಸ್ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇನ್ನು ಕ್ರೂಸ್ ಏರಿ ದುಬೈ ಪಟ್ಟಣವನ್ನು ಸುತ್ತಿ ನೋಡಿರುವ ಫೋಟೊಗಳನ್ನು ವಿಜಯಲಕ್ಷ್ಮಿ ಈಗ ಪೋಸ್ಟ್ ಮಾಡಿದ್ದಾರೆ. ಗಗನಚುಂಬಿ ಕಟ್ಟಡಗಳನ್ನು ನೋಡುತ್ತಾ ಎಲ್ಲರೂ ಸಖತ್ ಎಂಜಾಯ್ ಮಾಡಿದ್ದರು.

ಸ್ನೇಹಿತರ ಜೊತೆ ವಿನೀಶ್ ದರ್ಶನ್ ಇರುವ ಫೋಟೊ ಕೂಡ ಅಭಿಮಾನಿಗಳ ಗಮನ ಸೆಳೆದಿದೆ. "ಕೊಂಚ ನಿಲ್ಲಿ. ಸುತ್ತಲೂ ನೋಡಿ, ಜೀವನವು ಬಹಳ ಅದ್ಭುತವಾಗಿದೆ" ಎಂದು ಕ್ಯಾಪ್ಷನ್‌ ಕೊಟ್ಟು ದುಬೈ ರೆಸ್ಟೋರೆಂಟ್‌ನಲ್ಲಿ ಕುಳಿತಿದ್ದ ಫೋಟೊಗಳನ್ನು ವಿಜಯಲಕ್ಷ್ಮಿ ದರ್ಶನ್ ಇತ್ತೀಚೆಗೆ ಹಂಚಿಕೊಂಡಿದ್ದರು. ತಾವು ಉಳಿದುಕೊಂಡಿದ್ದ ಹೋಟೆಲ್ ಒಳಗೆ ಸೋಫಾ ಮೇಲೆ ಕುಳಿತು ಕ್ಲಿಕ್ಕಿದ ಫೋಟೊಗಳನ್ನು ವಾರದ ಹಿಂದೆಯಷ್ಟೆ ತೇಲಿ ಬಿಟ್ಟಿದ್ದರು.

ಕೆಲ ದಿನಗಳ ಹಿಂದೆ ವಿನೀಶ್ ದರ್ಶನ್ ದುಬೈ ಮರಳುಗಾಡಿನಲ್ಲಿ ಕುದುರೆ ಏರಿ ಸವಾರಿ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ದರ್ಶನ್ ತಮ್ಮ ಪುತ್ರನಿಗೆ ಆಗಾಗ್ಗೆ ತಮ್ಮ ಫಾರ್ಮ್‌ಹೌಸ್ ಬಳಿ ಕುದುರೆ ಸವಾರಿ ಹೇಳಿಕೊಡುತ್ತಿದ್ದರು. ಆದರೆ ಯಾರ ಸಹಾಯವೂ ಇಲ್ಲದೇ ದುಬೈನಲ್ಲಿ ವಿನೀಶ್ ಕುದುರೆ ಏರಿ ಸುತ್ತಾಡಿದ್ದ ವಿಡಿಯೋಗಳು ವೈರಲ್ ಆಗಿತ್ತು.

ಇನ್ನು ಮಗನನ್ನು ಕೂಡ ಚಿತ್ರರಂಗಕ್ಕೆ ಪರಿಚಯಿಸುವುದಾಗಿ ಈಗಾಗಲೇ ದರ್ಶನ್ ಹೇಳಿದ್ದಾರೆ. ಸದ್ಯಕ್ಕೆ ವಿನೀಶ್ ಹೈಸ್ಕೂಲ್‌ನಲ್ಲಿ ಓದುತ್ತಿದ್ದಾನೆ. ನಟನೆಗೂ ಇನ್ನು ಸಿನಿಮಾ ಮೇಕಿಂಗ್ ಬಗ್ಗೆ ಸಾಕಷ್ಟು ಕಲಿಯಬೇಕಿದೆ. ಅದನ್ನು ಕಲಿತುಕೊಂಡು ಚಿತ್ರರಂಗಕ್ಕೆ ಬರುತ್ತಾನೆ ಎಂದು ಸಾಕಷ್ಟು ಬಾರಿ ನಟ ದರ್ಶನ್ ಸಹ ಹೇಳಿದ್ದಾರೆ.

ಈಗಾಗಲೇ ತಂದೆ ಜೊತೆ ಐರಾವತ ಹಾಗೂ ಯಜಮಾನ ಚಿತ್ರದ ಸಣ್ಣ ಝಲಕ್‌ನಲ್ಲಿ ವಿನೀಶ್ ಕಾಣಿಸಿಕೊಂಡಿದ್ದಾನೆ. 'ಐರಾವತ' ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಪೊಲೀಸ್ ಡ್ರೆಸ್‌ನಲ್ಲಿ ಮಿಂಚಿದ್ದರೆ 'ಯಜಮಾನ' ಚಿತ್ರದ ಹಾಡಿನ ಝಲಕ್‌ನಲ್ಲಿ ತೆರೆಮೇಲೆ ಬಂದಿದ್ದ. ಅಭಿಮಾನಿಗಳು 'ಯಜಮಾನ' ಚಿತ್ರದ ಸಮಯದಲ್ಲೇ ಥಿಯೇಟರ್‌ ಮುಂದೆ ವಿನೀಶ್ ಕಟೌಟ್ ಹಾಕಿ ಸಂಭ್ರಮಿಸಿದ್ದರು.

Vijayalakshmi Darshan enjoys a vaction with her son Vinish Thugudeepa

ನಟ ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರದ್ದು ಅರೇಂಜ್ಡ್ ಮ್ಯಾರೇಜ್. 2003ರಲ್ಲಿ ಧರ್ಮಸ್ಥಳದಲ್ಲಿ ಇಬ್ಬರ ಮದುವೆ ನಡೆದಿತ್ತು. ಆಗಾಗ್ಗೆ ದರ್ಶನ್ ಹಾಗೂ ವಿಜಯಲಕ್ಷ್ಮಿ ಡ್ಯಾನ್ಸ್ ಮಾಡಿರುವ ವೀಡಿಯೋಗಳು ವೈರಲ್ ಆಗುತ್ತಿರುತ್ತವೆ. ಸದ್ಯ ದರ್ಶನ್ ನಟನೆಯ 'ಡೆವಿಲ್' ಸಿನಿಮಾ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

More from Filmibeat

English summary
Vijayalakshmi Darshan Shares Glimpses From Her recent Vacation
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X